ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತ್ರಿಕಾ ವಿತರಕರು ಗುರುತಿನ ಚೀಟಿ ಪಡೆಯಲಿ: ಶಂಕರ ಕುದರಿಮೋತಿ

ಪತ್ರಿಕಾ ವಿತರಕರ ಜಿಲ್ಲಾ ಘಟಕದ ಉದ್ಘಾಟನೆ
Published 7 ಆಗಸ್ಟ್ 2023, 14:21 IST
Last Updated 7 ಆಗಸ್ಟ್ 2023, 14:21 IST
ಅಕ್ಷರ ಗಾತ್ರ

ಕೊಪ್ಪಳ: ‘ಜಿಲ್ಲೆಯಲ್ಲಿ ಎಲ್ಲ ಪತ್ರಿಕಾ ವಿತರಕರು ಗುರುತಿನ ಚೀಟಿ ಪಡೆಯುವುದು ಅಗತ್ಯವಿದೆ’ ಎಂದು ಅಖಿಲ ಕರ್ನಾಟಕ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಘಟಕದ ಅಧ್ಯಕ್ಷ ಶಂಕರ ಕುದರಿಮೋತಿ ಹೇಳಿದರು.

ಸಂಘದ ಜಿಲ್ಲಾ ಘಟಕವನ್ನು ಭಾನುವಾರ ಇಲ್ಲಿ ಉದ್ಘಾಟಿಸಿ ಮಾತನಾಡಿದ ಅವರು, ‘ಪತ್ರಿಕೆ ಹಂಚುವವರಿಗೆ ಯಾರೂ ಸಹಾಯ ಮಾಡುವುದಿಲ್ಲ. ಗುರುತಿನ ಚೀಟಿ ಪಡೆದರೆ ದುರ್ಘಟನೆ ಸಂಭವಿಸಿ ಗಾಯಗೊಂಡರೆ ₹ 80 ಸಾವಿರ, ಮೃತಪಟ್ಟರೆ ₹ 4 ಲಕ್ಷ ಪರಿಹಾರ ಪಡೆಯಲು ಸಾಧ್ಯವಿದೆ. ನಮ್ಮ ಸಂಘಟನೆ ಯಾವುದೇ ಜಾತಿ, ರಾಜಕೀಯ ಪಕ್ಷಗಳಿಂದ ಹೊರತಾಗಿದೆ. ಕೊಪ್ಪಳ ಜಿಲ್ಲೆಯಲ್ಲಿಯೂ ಜಿಲ್ಲೆ ಮತ್ತು ತಾಲ್ಲೂಕು ಕೇಂದ್ರಗಳಲ್ಲಿಯೂ ಪತ್ರಿಕಾ ವಿತರಕರ ಘಟಕೆಗಳನ್ನು ಆರಂಭಿಸಬೇಕು’ ಎಂದು ಸಲಹೆ ನೀಡಿದರು.

ಜನಪರ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಂಚಾಲಕ ಎಸ್.ಎ.ಗಫಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ’ಪ್ರಸ್ತುತವಾಗಿ ಅನೇಕ ಸಂಘಟನೆಗಳಿದ್ದು, ಸಕ್ರಿಯವಾಗಿ ಕೆಲಸ ಮಾಡುತ್ತಿದ್ದರೆ ಅದು ಸಂಘಟನೆಯ ಜೀವಂತಿಕೆಯ ಲಕ್ಷಣ. ಜಿಲ್ಲೆಯಿಂದ ನಮ್ಮ ಪತ್ರಿಕಾ ವಿತರಕರ ಬೇಡಿಕೆಗಳನ್ನು ರಾಜ್ಯ ಘಟಕಕ್ಕೆ ಕಳುಹಿಸಿದರೆ ಅವರು ಮುಖ್ಯಮಂತ್ರಿ‌ ಹಾಗೂ ಸಂಬಂಧಪಟ್ಟ ಸಚಿವರ ಗಮನ ಸೆಳೆಯಲು ಸಾಧ್ಯವಾಗುತ್ತದೆ’ ಎಂದರು.

‘ಕರ್ನಾಟಕ ಪತ್ರಿಕಾ ವಿತರಕರ ಕಲ್ಯಾಣ ಮಂಡಳಿ ರಚಿಸಿ ಪತ್ರಿಕೆಗಳಲ್ಲಿ ಪ್ರಕಟವಾಗುವ ಸರ್ಕಾರದ ಮತ್ತು ಖಾಸಗಿ ಜಾಹೀರಾತುಗಳ ಹಣದಲ್ಲಿ ಒಂದು ಪರ್ಸೆಂಟ್ ಸೆಸ್ ಮಂಡಳಿಗೆ ಜಮಾ ಆಗಬೇಕು. ಈ ಬೇಡಿಕೆ ಈಡೇರಿಕೆಗೆ ಹೋರಾಟ ಮಾಡೋಣ’ ಎಂದರು.

ಅಖಿಲ ಕರ್ನಾಟಕ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಗೌರವ ಅಧ್ಯಕ್ಷ ವಿರೂಪಾಕ್ಷಪ್ಪ ಮುರಳಿ ಮಾಸತನಾಡಿ ‘ನಮ್ಮಲ್ಲಿ ಪತ್ರಿಕೆ ಹಾಕುತ್ತಿದ್ದು ಹುಡುಗ ತಹಶೀಲ್ದಾರ್‌,  ಇನ್ನೊಬ್ಬ ಹುಡುಗ ಉಪನ್ಯಾಸಕ ಮತ್ತು‍ ಪಿಎಸ್‌ಐ ಹೀಗೆ ಅನೇಕ ಹುದ್ದೆಗಳಲ್ಲಿದ್ದಾರೆ’ ಎಂದು ನೆನಪಿಸಿಕೊಂಡರು.  

ರಾಜ್ಯ ಸಹ ಕಾರ್ಯದರ್ಶಿ ಮಂಜುನಾಥ ಕಬನೂರ. ಜಿಲ್ಲಾ ಕಾರ್ಯದರ್ಶಿ ಮಹೆಬೂಬ್ ಗಂಗಾವತಿ, ನಾಗರಾಜ್ ವಂಕಿ, ಮಹಾದೇವಪ್ಪ ಹೂಗಾರ, ವಸಂತ್ ಆರ್. ಶಾವಿ, ಕನಕಾಚಲ ಇಲ್ಲೂರ್, ಸಿದ್ದರಾಮಪ್ಪ ಗೌಡ, ಕ್ಷೇಮಾಭಿವೃದ್ಧಿ ಸಂಘದ ಉಪಾಧ್ಯಕ್ಷ ಮಂಜುನಾಥ್ ಟಪಾ ಮತ್ತು ಖಜಾಂಚಿ ರವೀಂದ್ರ ಕಲಾಲ್ ಪಾಲ್ಗೊಂಡಿದ್ದರು.

Quote - ಸಂಘಕ್ಕೆ ಶಕ್ತಿ ಬರಲು ಎಲ್ಲ ಸದಸ್ಯರೂ ಒಂದಾಗಬೇಕು. ಹಣ ಜಮೆ ಮಾಡಿ ಪತ್ರಿಕೆ ವಿತರಕರಿಗೆ ತೊಂದರೆಯಾದರೆ ಒಟ್ಟಾಗಿ ನಿಲ್ಲಬೇಕು. ಗವಿರಾಜ್ ಕಂದಾರಿ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT