ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಂಗಮ ಸಮಾಜ: ಪೂರ್ವಭಾವಿ ಸಭೆ

Last Updated 28 ಜನವರಿ 2022, 12:28 IST
ಅಕ್ಷರ ಗಾತ್ರ

ಕುಕನೂರು: ಜ.31 ರಂದು ತಾಲ್ಲೂಕಿನ ಜಂಗಮ ಸಮಾಜದ ವತಿಯಿಂದ ಬೇಡ ಜಂಗಮ ಹಕ್ಕು ಜಾರಿಗೆ ಒತ್ತಾಯಿಸಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಗುವುದು ಎಂದು ತಾಲ್ಲೂಕು ಬೇಡ ಜಂಗಮ ಸಮಾಜದ ಅಧ್ಯಕ್ಷ ಸಿದ್ದಯ್ಯ ಕಳ್ಳಿಮಠ ಹೇಳಿದರು.

ತಾಲ್ಲೂಕಿನ ದ್ಯಾಂಪುರ ಗ್ರಾಮದ ಗುರುಮಠದಲ್ಲಿ ಶುಕ್ರವಾರ ಜರುಗಿದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಇಲ್ಲಿನ ವೀರಭದ್ರೇಶ್ವರ ದೇವಸ್ಥಾನದಿಂದ ವೀರಭದ್ರಪ್ಪ ವೃತ್ತದ ಮೂಲಕ ತಹಶೀಲ್ದಾರ್ ಕಚೇರಿಗೆ ಜಾಥಾದಲ್ಲಿ ತೆರಳಿ, ಬೇಡ ಜಂಗಮ ಹಕ್ಕುಗಳ ಜಾರಿಗೆ ಒತ್ತಾಯಿಸಿ ಮನವಿ ಸಲ್ಲಿಸಲಾಗುವುದು. ಸಮಾಜದ ಜನ ಭಾಗವಹಿಸಬೇಕು ಎಂದು ಮನವಿ ಮಾಡಿದರು.

ಹರಗುರುಚರಮೂರ್ತಿಗಳ ಸಾನ್ನಿಧ್ಯದಲ್ಲಿ ಮನವಿ ಸಲ್ಲಿಸಲಾಗುವುದು ಎಂದರು.

ತಾಲ್ಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಶಿವಕುಮಾರ ನಾಗಲಾಪೂರಮಠ ಮಾತನಾಡಿದರು.

ಶಿವಲಿಂಗಯ್ಯ ಶಿರೂರಮಠ, ಈಶಯ್ಯ ಶಿರೂರಮಠ, ವೀರಯ್ಯ ತೋಂಟದಾರ್ಯ ಮಠ, ಸೋಮಲಿಂಗಯ್ಯ ಹಿರೇಮಠ, ಚೆನ್ನಯ್ಯ ಹಿರೇಮಠ, ಶಿವಯ್ಯ ಸಸಿ, ಶೇಖರಯ್ಯ ಶಿರೂರಮಠ, ಶರಣಯ್ಯ ಶಲಭಯ್ಯ ಕಾಯಗಡ್ಡಿ, ಶಿವಾನಂದಯ್ಯ ಕಾಡಗಿಮಠ, ಶಿವಲಿಂಗಯ್ಯ ಬಂಡಿಮಠ, ಕುಮಾರಸ್ವಾಮಿ ಹಿರೇಮಠ, ಶೇಖರಯ್ಯ ಕಾಯಗಡ್ಡಿ, ವೀರಯ್ಯ ಶಿರೂರು ಮಠ, ವೀರಯ್ಯ ಉಳ್ಳಾಗಡ್ಡಿ, ಸಿದ್ಲಿಂಗಯ್ಯ ಬಂಡಿಮಠ ವೀರಯ್ಯ ಕುರ್ತಕೋಟಿ ಹಾಗೂ ಶರಣಯ್ಯ ಬಂಡಿಮಠ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT