ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗಂಗಾವತಿ | ಮೊಹರಂ ಹಬ್ಬ ನಿಷೇಧ

Published 7 ಜುಲೈ 2024, 14:33 IST
Last Updated 7 ಜುಲೈ 2024, 14:33 IST
ಅಕ್ಷರ ಗಾತ್ರ

ಗಂಗಾವತಿ: ಇಲ್ಲಿನ ನಗರ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ವಿರುಪಾಪುರ ತಾಂಡದಲ್ಲಿ ಭಾನುವಾರ ಬೆಳಿಗ್ಗೆ 6ರಿಂದ ಜು.17 ರಾತ್ರಿ 8ರವರೆಗೆ ಮೊಹರಂ ಹಬ್ಬವನ್ನು ನಿಷೇಧಿಸಿ, ತಹಶೀಲ್ದಾರ್‌ ಯು.ನಾಗರಾಜ ಸೆಕ್ಷನ್ 163 ಜಾರಿಗೊಳಿಸಿ, ಆದೇಶ ಹೊರಡಿಸಿದ್ದಾರೆ.

ನಗರದ ವಿರುಪಾಪುರ ತಾಂಡದಲ್ಲಿ ಆಚರಿಸುವ ಮೊಹರಂ ಹಬ್ಬದಲ್ಲಿ ಲಂಬಾಣಿ ಮತ್ತು ಬೋವಿ (ವಡ್ಡರ) ಜನಾಂಗದ ನಡುವೆ ವೈಷಮ್ಯ ಉಂಟಾಗಿ, ಹಲವು ಬಾರಿ ಜಗಳಗಳಾಗಿ ಪ್ರಕರಣಗಳು ದಾಖಲಾಗಿವೆ. ವಿರುಪಾಪುರ ತಾಂಡದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಆಗದಂತೆ, ಸಾರ್ವಜನಿಕರಿಗೆ ತೊಂದರೆ ಆಗದಂತೆ ತಡೆಯಲು, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ-2023ರ ಪ್ರಕಾರ ಕಲಂ 163ರನ್ವಯ ವಿರುಪಾಪುರ ತಾಂಡದಲ್ಲಿ ಮೊಹರಂ ಹಬ್ಬ ನಿಷೇಧಿಸಿ, ಆದೇಶ ಹೊರಡಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT