ಸೋಮವಾರ, ಜನವರಿ 17, 2022
19 °C

‘ಸಮಾನತೆ, ಸೌಹಾರ್ದ ಬೆಳೆಸಿ’-ಡಿ.ಟಿ.ತ್ಯಾಗರಾಜ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ಇಂದಿನ ದಿನಮಾನಗಳಲ್ಲಿ ಪ್ರತಿಯೊಬ್ಬರಲ್ಲಿ ಸಮಾನತೆ, ಸೌಹಾರ್ದ ಬೆಳೆಸಬೇಕಿದೆ ಎಂದು ಕರ್ನಾಟಕ ನೆಟವರ್ಕ್ ಫಾರ್ ಪೀಪಲ್ ಲೀವಿಂಗ್ ವಿಥ್ ಎಚ್‌ಐವಿ ಏಡ್ಸ್ ಅಸೋಷಿಯನ್ ಪ್ರಧಾನ ಕಾರ್ಯದರ್ಶಿ ಡಿ.ಟಿ. ತ್ಯಾಗರಾಜ ಹೇಳಿದರು.

ಅವರು ಇಶಾ ಸಂಸ್ಥೆಯಲ್ಲಿ ನೆಟವರ್ಕ್ ಫಾರ್ ಪೀಪಲ್ ಲೀವಿಂಗ್ ವಿಥ್ ಎಚ್‌ಐವಿ ಏಡ್ಸ್ ಇದರ ವಾರ್ಷಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಇದೇ ವೇಳೆ 9 ಅಸೋಷಿಯನ್ ಪದಾಧಿಕಾರಿಗಳನ್ನು ಚುನಾವಣೆ ಮೂಲಕ ಆಯ್ಕೆ ಮಾಡಲಾಯಿತು.

ಹಿರಿಯ ವಕೀಲ ಎಂ.ಬಿ.ನದಾಫ ಚುನಾವಣಾ ಅಧಿಕಾರಿಗಳಾಗಿ ಕಾರ್ಯನಿ ರ್ವಹಿಸಿದರು. ರಾಜ್ಯ ಅಧ್ಯಕ್ಷರಾಗಿ ಭಾಗ್ಯಮ್ಮ, ಉಪಾಧ್ಯಕ್ಷರಾಗಿ ರಂಗಸ್ವಾಮಿ, ಪ್ರಧಾನ ಕಾರ್ಯದರ್ಶಿಯಾಗಿ ಡಿ.ಟಿ.ತ್ಯಾಗರಾಜ, ಖಚಾಂಚಿಯಾಗಿ ದೇವರಾಜ, ನಿರ್ದೇಶಕರಾಗಿ ಆಶಾ, ಈರಮ್ಮ, ಮಂಜಪ್ಪ ಕೋಡೇರ ಮತ್ತು ರವಿಕೃಷ್ಣರೆಡ್ಡಿ ಆಯ್ಕೆಗೊಂಡರು.

ನಂತ ಯೋಜನಾ ವ್ಯವಸ್ಥಾಪಕ ಮೈಕೆಲ್ ಬಾಬುರಾಜ ಮಾತನಾಡಿ, ರಾಜ್ಯದ ಪ್ರತಿ ಮೂಲೆ ಮೂಲೆಗಳಲ್ಲಿ ಸಂಸ್ಥೆಯ ಧ್ಯೇಯೋದ್ದೇಶ ಮತ್ತು ಅದರ ಸೌಲಭ್ಯಗಳನ್ನು ಮನವರಿಕೆಯೊಂದಿಗೆ ಮನೆ, ಮನೆ ಮುಟ್ಟಿಸುವ ಕಾರ್ಯವಾಗಬೇಕು ಎಂದು ಹೇಳಿದರು.

ಚುನಾವಣಾಧಿಕಾರಿ ವಕೀಲರಾದ ಎಂ.ಬಿ.ನದಾಫ, ಮೈಕೆಲ್ ಬಾಬುರಾಜ ಮತ್ತು ಡಿ. ಟಿ. ತ್ಯಾಗರಾಜ ಇವರಿಗೆ ಕೊಪ್ಪಳ ನವಜ್ಯೋತಿ ನೆಟವರ್ಕ್‍ನ ಅಧ್ಯಕ್ಷೆ ನಾಗರತ್ನ ಅಳವಂಡಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು