ಕುಷ್ಟಗಿ: ಅವರದ್ದು ಹದವರಿತ ಬೇಸಾಯ, ಹಸನಾಗಿರುವ ಬದುಕು, ಕಾಯಕ ಜೀವಿಗಳಾಗಿರುವ ಹದಿನಾರು ಜನರ ಕೂಡು ಕುಟುಂಬ, ಸ್ನೇಹಿತರಂತಿರುವ ಸಹೋದರರು, ಹದಿನಾರು ಎಕರೆ ರಸಭರಿತ ಜಮೀನಿನಲ್ಲಿ ಹದಿನಾರು ತರಹದ ಬೆಳೆಗಳನ್ನು ಒಳಗೊಂಡ ಸಮೃದ್ಧ ಕ್ಷೇತ್ರ, ತರಹೇವಾರಿ ಬೆಳೆಗಳಲ್ಲೂ ಮೇಳೈಸಿದ ವೈವಿಧ್ಯತೆ. ಊರಿನ ಉಸಾಬರಿ ಇಲ್ಲ, ರಾಜಕೀಯ ಗೊಡವೆಯಿಲ್ಲ. ಭೂತಾಯಿಯೊಂದಿಗಿನ ಒಡನಾಟದ ಒಂದು ಪರಿಪೂರ್ಣ ಕೃಷಿಕುಟುಂಬ ಎಂದು ಹೇಳುವುದಕ್ಕೆ ಇಷ್ಟು ಮಾತ್ರ ಸಾಕು.

ಹೌದು, ತಾಲ್ಲೂಕಿನ ಹಂಚಿನಾಳ ಗ್ರಾಮದ ದೊಡ್ಡಪ್ಪ ರಸರಡ್ಡಿ ಎಂಬುವವರ ಹಿರಿತನದಲ್ಲಿ ಬದುಕು ಕಟ್ಟಿಕೊಂಡ ಮಣ್ಣಿನ ಮಕ್ಕಳ ನೈಜ ಮತ್ತು ನೆಮ್ಮದಿಯ ಬದುಕಿನ ಅಪರೂಪದ ಚಿತ್ರಣವಿದು. ಕೃಷಿ, ತೋಟಗಾರಿಕೆಯಲ್ಲಿ ತೊಡಗಿರುವ ಹಂಚಿನಾಳದ ರಸರಡ್ಡಿ ಕುಟುಂಬದ ಕಾಯಕ ಜೀವಿಗಳ ಮಾದರಿ ಅನುಕರಣೀಯ.

ಮದುವೆ, ಹಬ್ಬಹರಿದಿನಗಳಲ್ಲಿ ಮಾತ್ರ ಊರಿನ ಉಸಾಬರಿ. ಮಣ್ಣಿನೊಂದಿಗಿನ ಅವಿನಾಭಾವದ ಸಂಬಂಧ. ಕಳೆದ ಹದಿನಾಲ್ಕು ವರ್ಷಗಳಿಂದ ತೋಟದಲ್ಲಿಯೇ ವಾಸವಾಗಿರುವ ಈ ಕುಟುಂಬದ ಸತತ ಪರಿಶ್ರಮದಿಂದ ಕಲ್ಲುಮಣ್ಣಿನ ಗುಡ್ಡಿಯಾಗಿದ್ದ ಪ್ರದೇಶದಲ್ಲಿ ಸಮೃದ್ಧಿ ನೆಲೆಯೂರಿದ್ದನ್ನು ನೋಡಿದರೆ 'ಆಗದು ಎಂದು ಕೈಕಟ್ಟಿ ಕುಳಿತರೆ' ಎಂಬ ಡಾ.ರಾಜಕುಮಾರ ಅವರ 'ಬಂಗಾರದ ಮನುಷ್ಯ' ಚಲನಚಿತ್ರದ ಹಾಡು ನೆನಪಾಗುತ್ತದೆ.

ಕೃಷಿ ಬೇಸಾಯದಲ್ಲಿ ಅಚ್ಚುಕಟ್ಟು: ಕೃಷಿ, ತೋಟಗಾರಿಕೆ ಎಂದರೆ ಬಹುತೇಕ ಅದರಾಗೇನೈತಿ ಬಿಡ್ರಿ ಎಂದು ಗೊಣಗುವವರೇ ಹೆಚ್ಚು.

ಆದರೆ ರಸರಡ್ಡಿಯಾವರ ಕುಟುಂಬ ಸದಸ್ಯರಲ್ಲಿ ಅಂಥ ಭಾವನೆಯೇ ಇಲ್ಲ. ಕೃಷಿ, ತೋಟಗಾರಿಕೆ ಬೆಳೆಗಳು, ಜಾನುವಾರು ಸಾಕಣೆ, ಎರೆಹುಳು ಗೊಬ್ಬರ ತಯಾರಿಕೆ, ಮಳೆ ನೀರಿನ ಸಂರಕ್ಷಣೆ, ಹನಿ, ತುಂತುರು ನೀರಾವರಿಯಲ್ಲಿ ಬಹುತೇಕ ಸಾವಯವ ಕೃಷಿಯಲ್ಲಿ ಅಚ್ಚುಕಟ್ಟುತನ ಮೆರೆಯುತ್ತಿರುವ ಸಂತೃಪ್ತಿ ಕಂಡುಕೊಂಡ ಕುಟುಂಬವಿದು. ಅವರ ತೋಟಕ್ಕೆ ಭೇಟಿ ನೀಡಿದರೆ ಕೃಷಿ, ತೋಟಗಾರಿಕೆ ವಿಶ್ವವಿದ್ಯಾಲಯಗಳಿಗೆ ಭೇಟಿ ನೀಡಿದ ಅನುಭವವಾಗುತ್ತದೆ. ಕಾಲಕ್ಕೆ ತಕ್ಕಂತೆ ಬೇಸಾಯ, ನಿರ್ವಹಣೆ, ತಂತ್ರಜ್ಞಾನ, ತಜ್ಞರು, ಅನುಭವಿಗಳ ಸಲಹೆಗಳನ್ನು ತಪ್ಪದೇ ಪಾಲಿಸುವ ಮೂಲಕ ವೈವಿಧ್ಯಮಯ ಬೆಳೆಗಳಲ್ಲಿ ಯಶಸ್ವಿಯಾಗಿದ್ದು ಆರ್ಥಿಕ ಸ್ವಾವಲಂಬನೆ ಕಂಡುಕೊಂಡಿದ್ದಾರೆ. ಅಕ್ಕತಂಗಿಯರಂತೆ ಒಂದಾಗಿ ದುಡಿಯುತ್ತಿರುವ ಈ ಕುಟುಂಬದ ಮಹಿಳೆಯರು ಕೃಷಿ ಬದುಕಿನ ಬಂಡಿಗೆ ಚಕ್ರಗಳಂತಿದ್ದಾರೆ.

ಹೀಗಿದೆ ಬೆಳೆ ವೈವಿಧ್ಯ

ಮಳೆಯಾಶ್ರಯದಲ್ಲಿ ಮುಂಗಾರಿನಲ್ಲಿ ವಾಣಿಜ್ಯ ಮತ್ತು ಬೀಜೋತ್ಪಾದನೆ ಹತ್ತಿ, ನವಣೆ ಸಿರಿಧಾನ್ಯ, ಸಜ್ಜೆ, ಹೆಸರು, ಉದ್ದು, ಮಡಿಕೆ, ತೊಗರಿ. ಹಿಂಗಾರಿನಲ್ಲಿ ಶೇಂಗಾ, ಕಡಲೆ, ಮೆಕ್ಕೆಜೋಳ, ಕುಸುಬೆ, ಸೂರ್ಯಕಾಂತಿ, ಹುರುಳಿ ಹೀಗೆ ಇನ್ನೂ ಕೆಲವು ಪ್ರಮುಖ ಬೆಳೆಗಳು ಇವರ ಜಮೀನಿನಲ್ಲಿರುತ್ತವೆ. ಇನ್ನು ತೋಟಗಾರಿಕೆಯಲ್ಲಿ ಇವರದು ತರಕಾರಿ ಬೆಳೆಯಲ್ಲಿ ಎತ್ತರದ ಸಾಧನೆ. ಮೆಣಸಿನಕಾಯಿ, ಬದನೆಯಲ್ಲಿ ವರ್ಷದುದ್ದಕ್ಕೂ ಕುಳೆ ಬೆಳೆಗಳಲ್ಲಿಯೇ ಪ್ರಗತಿಸಾಧಿಸಿದ್ದಾರೆ. ಕಳೆದ ವರ್ಷದ ಏಪ್ರೀಲ್ದಲ್ಲಿ ಕೇವಲ ಅರ್ಧ ಎಕರೆಯಲ್ಲಿ ಮೆಣಸಿನಕಾಯಿ ಎರಡು ಕುಳೆ ಬೆಳೆಯಲ್ಲಿ ಉತ್ತಮ ಇಳುವರಿ ಪಡೆದಿದ್ದು ಈಗ ಮೂರನೇ ಕುಳೆ ಬೆಳೆಗೆ ಹೊಲ ಸಿದ್ಧಗೊಂಡಿದೆ. ಅರ್ಧ ಎಕೆರೆ ಒಂದು ಬಾರಿ ನಾಟಿ ಮಾಡಿದ, ಕೇವಲ 35 ಸಾಲಿನಲ್ಲಿರುವ ಬದನೆ ಸದ್ಯ ಎರಡನೇ ಕುಳೆ ಬೆಳೆ ಇದ್ದು ಭರ್ಜರಿ ಇಳುವರಿ ಬರುತ್ತಿದೆ. ಐದಾರು ಗುಂಟೆಯಲ್ಲಿರುವ ಸೌತೆ ಉತ್ತಮ ಬೆಳೆ. ಇನ್ನು ಅಚ್ಚುಕಟ್ಟಾಗಿ ಬೆಳೆದಿರುವ ಹೀರೇಕಾಯಿಗಳು ಬಳ್ಳಿಗೆ ಭಾರವಾಗಿ ಇಳಿಬಿದ್ದಿವೆ. ಮನೆ ಬಳಕೆಗೆ ಕುಸುಬೆ ಹಾಕಿದ್ದು ಎಣ್ಣೆ ತಯಾರಿಸಿಕೊಳ್ಳುತ್ತಾರೆ. ವಿವಿಧ ಬೆಳೆಗಳ ಬುಡದಲ್ಲಿ ಬೆಳೆದ ಸೊಪ್ಪಿನ ಪಲ್ಲೆ ಮನೆಗಾಗುತ್ತದೆ. ಯಾವುದಕ್ಕೂ ಪೇಟೆಗೆ ಹೋಗುವುದಿಲ್ಲ.

ದೇಶಿ ದನ, ಸಾವಯವಕ್ಕೆ ಒತ್ತು

ಬಹಳಷ್ಟು ರೈತರ ಬಳಿ ಎತ್ತುಗಳೇ ಇಲ್ಲ, ಯಂತ್ರಳದ್ದೇ ಸದ್ದು ಆದರೆ ರಸರಡ್ಡಿಯವರ ಮನೆಯಲ್ಲಿ ಎತ್ತುಗಳು, ದೇಶಿ ಹಸುಗಳು ಇವೆ. ಜಾನುವಾರು ಸಾಕಣೆಗೆ ಹೊಟ್ಟು ಮೇವಿನ ಸಂಗ್ರಹ ಅತಿಮುಖ್ಯ. ಮಳೆಗಾಳಿಗೆ ಕೆಡದಂತೆ ಹೊಟ್ಟು ಮೇವನ್ನು ವೈಜ್ಞಾನಿಕ ರೀತಿಯಲ್ಲಿ ಸಂಗ್ರಹಿಸುತ್ತಿರುವುದು ಕಂಡುಬರುತ್ತದೆ. ಕೊಟ್ಟಿಗೆ ನಿರ್ಮಾಣದಲ್ಲೂ ಅಚ್ಚುಕಟ್ಟುತನ ಇದೆ, ಗಂಜಲ ಹಾಳಾಗಲು ಬಿಡದೆ ಸಂಗ್ರಹಿಸುತ್ತಾರೆ. ಎರೆಹುಳು ತೊಟ್ಟಿಗಳನ್ನು ಕಟ್ಟಿಕೊಂಡಿದ್ದು ಅವರ ಹೊಲಕ್ಕೆ ಸಾಕಾಗುವಷ್ಟು ಗೊಬ್ಬರ ಉತ್ಪಾದನೆಯಾಗುವುದರಿಂದ ಸಾವಯಕ ಕೃಷಿಗೆ ಪೂರಕವಾಗಿದೆ.

ಅವಿಭಕ್ತತೆಯಲ್ಲಿ ಅವಿನಾಭಾವ

ಸಂಬಂಧ ಕಾಲ ಬದಲಾಗುತ್ತಿದ್ದಂತೆ ಕೂಡುಕುಟುಂಬಗಳು ಅಪರೂಪವಾಗಿದ್ದರೂ ಮೂವರು ಸಹೋದರರು ಹಾಗೂ ಮಹಿಳೆಯರು ಮಕ್ಕಳು ಸೊಸೆಯಂದಿರು ಅಳಿಯಂದಿರು ಮೊಮ್ಮಕ್ಕಳನ್ನು ಒಳಗೊಂಡ ಒಂದೇ ಸೂರಿನಡಿ ಬದುಕತ್ತಿರುವ ತುಂಬು ಸಂಸಾರ ಬಸವಣ್ಣನವರ ಕಾಯಕಪ್ರಜ್ಞೆಯನ್ನು ಯಥಾವತ್ತಾಗಿ ಪಾಲಿಸುವುದು. ಶ್ರಮದ ಬದುಕಿನಲ್ಲಿ ಸಾರ್ಥಕತೆ ಇದೆ ಎಂಬುದನ್ನು ಸಾಧನೆಯ ಮೂಲಕ ಸಾರಿ ಹೇಳಿರುವ ಹಂಚಿನಾಳದ ರಸರಡ್ಡಿ ಕುಟುಂಬದ ತೋಟಕ್ಕೆ ಒಮ್ಮೆ ಭೇಟಿ ನೀಡಬೇಕು.