ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತ್ರಿಕೋದ್ಯಮ: ಸಮಾಜ ತಿದ್ದುವ ಕಾಯಕ- ಶಾಸಕ ಪರಣ್ಣ ಮುನವಳ್ಳಿ

Last Updated 18 ಜುಲೈ 2021, 12:34 IST
ಅಕ್ಷರ ಗಾತ್ರ

ಗಂಗಾವತಿ: ‘ಪವಿತ್ರವಾದ ರಂಗ ಪತ್ರಿಕಾರಂಗ. ಇದು ಸರ್ಕಾರ, ಸಮಾಜ, ಸಾರ್ವಜನಿಕರ ಸೇತುವೆಯಾಗಿ ಕಾರ್ಯ ನಿರ್ವಹಿಸುತ್ತದೆ‘ ಎಂದು ಶಾಸಕ ಪರಣ್ಣ ಮುನವಳ್ಳಿ ಹೇಳಿದರು.

ತಾಲ್ಲೂಕು ಪಂಚಾಯಿತಿ ಮಂಥನ ಸಭಾಂಗಣದಲ್ಲಿ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ್ದ, ಪತ್ರಿಕಾ ದಿನಾಚರಣೆ ಮತ್ತು ವನ ಮಹೋತ್ಸವ ಹಾಗೂ ಪತ್ರಿಕಾ ಭವನದ ನವೀಕರಣ ಕಟ್ಟಡ ಉದ್ಘಾಟನೆ ಸಮಾರಂಭವನ್ನು ನೆರವೇರಿಸಿ ಅವರು ಮಾತನಾಡಿದರು.

ಈ ಸಮಾರಂಭದ ವನ ಮಹೋತ್ಸವ ಕಾರ್ಯಕ್ರಮದಡಿ ಸಸಿಗಳನ್ನು ನೆಡುವುದರ ಮೂಲಕ ಪತ್ರಕರ್ತರು ಪರಿಸರ ರಕ್ಷಣೆ ಜಾಗೃತಿ ಮೂಡಿಸಿದ್ದು, ಅವರ ಈ ಕಾರ್ಯ ಮೆಚ್ಚುವಂತದ್ದಾಗಿದೆ. ಪ್ರತಿಯೊಬ್ಬರು ಪರಿಸರ ರಕ್ಷಣೆ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

ಪತ್ರಕರ್ತರಿಗೆ ಮೂಲ ವಿಷಯಗಳನ್ನು ತಿಳಿಯಲು ಗ್ರಂಥಾಲಯ ಅವಶ್ಯಕವಾಗುತ್ತದೆ. ಆದ್ದರಿಂದ ಪತ್ರಿಕಾ ಭವನದ ಸಮೀಪ ಇರುವ ಗ್ರಂಥಾಲಯ ನಿರ್ಮಾಣಕ್ಕೆ ಶಾಸಕರ ಅನುದಾನದಿಂದ ₹ 5 ಲಕ್ಷ ನೀಡಲಾಗುತ್ತದೆ ಎಂದು ಆಶ್ವಾಸನೆ ನೀಡಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಶ್ರೀನಾಥದಣಿ ಮಾತನಾಡಿ, ‘ಪತ್ರಕರ್ತರು ನಿಜವಾದ ಕೊರೊನಾ ಸೇನಾನಿಗಳು. ಕೋವಿಡ್ ಸಂದರ್ಭದಲ್ಲಿ ಜೀವದ ಹಂಗು ತೊರೆದು ವರದಿಗಳನ್ನು ಮಾಡಿದ್ದಾರೆ. ಆದರೆ ಸರ್ಕಾರದಿಂದ ಅವರಿಗೆ ಯಾವ ಪರಿಹಾರವು ಲಭಿಸದೆ ಇರುವುದು ನಿರಾಸೆ ಮೂಡಿಸಿದೆ’ ಎಂದು.

ಈಡಿಗ ಸಮಾಜದ ರಾಜ್ಯ ಸಂಚಾಲಕರಾಗಿ ಸಂಘವನ್ನು ಕಟ್ಟಲು ಪ್ರೋತ್ಸಾಹ ನೀಡಿರುವುದೇ ಮಾಧ್ಯಮ‌ ವರದಿಗಳು. ಸಮಾಜದಲ್ಲಿನ ಸಮಸ್ಯೆ, ಬೇಡಿಕೆ, ಅಭಿವೃದ್ಧಿ, ಕೊರತೆಗಳನ್ನು ನಿವಾರಿಸಲು ಸಂಘ ರಚನೆ ಮಾಡಲಾಗಿದೆ ಎಂದರು.

ಗಂಗಾವತಿ ತಾಲ್ಲೂಕಿಗೆ ರೈಲು ಮಾರ್ಗ ಅನುಮೋದನೆ ಆಗುವಲ್ಲಿ ಪತ್ರಕರ್ತರ ಪಾತ್ರ ಬಹುಮುಖ್ಯವಾಗಿದೆ. ಸರ್ಕಾರವು ಪತ್ರಕರ್ತರಿಗೆ ನಿವೇಶನಗಳನ್ನು ನೀಡಬೇಕು ಎಂದು ಆಡಳಿತ ಪಕ್ಷದ ಶಾಸಕರಿಗೆ ಮನವಿ ಮಾಡಿದರು.

ಪತ್ರಕರ್ತ ವಿ.ಎಚ್.ಇರಕಲ್, ವಿ.ಎಸ್. ಪಾಟೀಲ್ ಅವರನ್ನು ಸನ್ಮಾನಿಸಲಾಯಿತು. ಕರ್ನಾಟಕ ಕಾರ್ಯ‌ನಿರತ ಪತ್ರಕರ್ತ ಸಂಘದ ರಾಜ್ಯ ಕಾರ್ಯದರ್ಶಿ ಬಂಗ್ಲೆ‌‌ ಮಲ್ಲಿಕಾರ್ಜುನ, ಜಿಲ್ಲಾ‌ಧ್ಯಕ್ಷ ಎಂ. ಸಾಧಿಕ್ ಅಲಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್.ಎಂ ದೊಡ್ಮನಿ, ರಾಜ್ಯ ಸಮಿತಿ ಸದಸ್ಯರಾದ ಜಿ.ಎಸ್.ಗೋನಾಳ್, ಎಚ್.ಎಸ್.ಹರೀಶ್, ತಾಲ್ಲೂಕು ಅಧ್ಯಕ್ಷ ವಿಶ್ವನಾಥ ಬೆಳಗಲ್ ಮಠ, ಉಪಾಧ್ಯಕ್ಷ ಕೃಷ್ಣ ನಾಯಕ ಜೋಗದ, ಕಾರ್ಯದರ್ಶಿ ಹರೀಶ್ ಕುಲ್ಕರ್ಣಿ ಹಾಗೂ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT