ಸೋಮವಾರ, ಸೆಪ್ಟೆಂಬರ್ 20, 2021
21 °C
ಮಳೆಯಿಂದ ತುಂಬಿ ಹರಿದ ಬಂಡಿಹಾಳ ಹಳ್ಳ

ಹಗ್ಗದ ಸಹಾಯದಿಂದ ದಡ ಸೇರಿದ ಕಾರ್ಮಿಕರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಲಬುರ್ಗಾ (ಕೊಪ್ಪಳ ಜಿಲ್ಲೆ): ತಾಲ್ಲೂಕಿನ ಬಂಡಿಹಾಳ ಮತ್ತು ಸುತ್ತಲಿನ ಪ್ರದೇಶದಲ್ಲಿ ಸೋಮವಾರ ಮಧ್ಯಾಹ್ನದಿಂದ ಸಂಜೆವರೆಗೂ ಭಾರಿ ಮಳೆ ಸುರಿಯಿತು.

ಬಂಡಿಹಾಳ ಗ್ರಾಮದ ಹಳ್ಳ ಭರ್ತಿಯಾಗಿ ರಭಸವಾಗಿ ಹರಿದಿದ್ದರಿಂದ ಸಂಚಾರ ಸ್ಥಗಿತಗೊಂಡಿತ್ತು. ಬೇರೆ ಗ್ರಾಮಗಳಿಂದ ಆಗಮಿಸಿದ್ದ ಕೂಲಿ ಕಾರ್ಮಿಕರನ್ನು ಗ್ರಾಮಸ್ಥರು  ಹಗ್ಗಕಟ್ಟಿ ಒಂದು ದಡದಿಂದ ಮತ್ತೊಂದು ದಡಕ್ಕೆ ಸಾಗಿಸಿ ಮನೆಗೆ ಕಳಿಸಿದರು.

ತಾಲ್ಲೂಕಿನ ಮಸಾರಿ ಭಾಗದ ದಮ್ಮೂರ, ಮಾರನಾಳ, ತುಮ್ಮರಗುದ್ದಿ, ಬಸಾಪುರ, ಗೆದಗೇರಿ ಸೇರಿದಂತೆ ಹಲವು ಗ್ರಾಮಗಳ ಕೂಲಿ ಕಾರ್ಮಿಕರನ್ನು ಸುರಕ್ಷಿತವಾಗಿ ಹಳ್ಳ ದಾಟಿಸಲಾಯಿತು ಎಂದು ಸ್ಥಳೀಯರಾದ ಸಂತೋಷ ಬಂಡ್ರಿ, ಕೆರಿಬಸಪ್ಪ ತಿಳಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.