ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾರ ಲಾಭಿಯೂ ಇಲ್ಲ, ಪ್ರಾದೇಶಿಕ ನ್ಯಾಯಕ್ಕೆ ಸಂದ ಜಯ: ಸಚಿವ ಹಾಲಪ್ಪ

ಮಹತ್ವದ ಖಾತೆ ಪ್ರಾಮಾಣಿಕವಾಗಿ ನಿಭಾಯಿಸುವ ಭರವಸೆ
Last Updated 7 ಆಗಸ್ಟ್ 2021, 14:01 IST
ಅಕ್ಷರ ಗಾತ್ರ

ಕೊಪ್ಪಳ: ‘ಬಿಜೆಪಿ ನಮ್ಮ ಮೇಲೆ ಭರವಸೆ ಇಟ್ಟು ಮಹತ್ವದ ಖಾತೆ ನೀಡಿದೆ. ಅದರಲ್ಲಿ ಯಾರದೇ ಲಾಭಿ ಇಲ್ಲ. ಪ್ರಾದೇಶಿಕ ಮತ್ತು ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಸ್ಥಾನ ಸಿಕ್ಕಿದೆ’ ಎಂದುಗಣಿ, ಭೂವಿಜ್ಞಾನ, ಮಹಿಳಾಮತ್ತು ಮಕ್ಕಳ ಕಲ್ಯಾಣ ಹಾಗೂ ಹಿರಿಯ ನಾಗರಿಕರ ಕಲ್ಯಾಣ ಇಲಾಖೆ ಸಚಿವ ಹಾಲಪ್ಪ ಆಚಾರ ಸ್ಪಷ್ಟಪಡಿಸಿದರು.

ಸಚಿವರಾದ ನಂತರ ಮೊದಲ ಬಾರಿಗೆ ಶನಿವಾರ ಜಿಲ್ಲೆಗೆ ಬಂದು ಗವಿಮಠಕ್ಕೆ ಭೇಟಿ ನೀಡಿ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಹಿಂದುಳಿದ ಜಿಲ್ಲೆಗೆ ಪ್ರಾತಿನಿಧ್ಯ ನೀಡಬೇಕು ಎಂಬುವುದು ವರಿಷ್ಠರ ತೀರ್ಮಾನವಾಗಿತ್ತು. ಇದಕ್ಕೆ ಬಿ.ಎಲ್‌.ಸಂತೋಷ್‌ ಕಾರಣ ಎಂದು ಹೇಳುವುದು ಸರಿಯಲ್ಲ. ನಮ್ಮ ಮೇಲೆ ವಿಶ್ವಾಸ ಇಟ್ಟು ಖಾತೆ ನೀಡಿದ್ದಾರೆ. ಅದನ್ನು ಸಮರ್ಥ ಮತ್ತು ಪ್ರಾಮಾಣಿಕವಾಗಿ ನಿಭಾಯಿಸುವುದಾಗಿ ಭರವಸೆ ನೀಡಿದರು.

‘ನನ್ನ ಖಾತೆ ಬಗ್ಗೆ ನಾನು ಹಗುರವಾಗಿ ತಿಳಿದುಕೊಂಡಿಲ್ಲ. ಅದರ ಅರಿವು ಇದೆ. ಉತ್ತಮ ಕೆಲಸ ಮಾಡುವ ಮೂಲಕ ಸರ್ಕಾರಕ್ಕೆ ಮತ್ತು ಜವಾಬ್ದಾರಿ ನೀಡಿದವರಿಗೆ ಒಳ್ಳೆಯ ಹೆಸರು ತರುವ ಕೆಲಸ ಮಾಡಬೇಕಿದೆ. ಇದಕ್ಕೆ ಗವಿಸಿದ್ದೇಶ್ವನ ಆಶೀರ್ವಾದಇದೆ' ಎಂದರು.

'ನಾನು ಯಾವತ್ತೂ ಸಚಿವ ಆಗ್ತಿನಿ ಎಂದು ಹೇಳಿರಲಿಲ್ಲ. ಬೆಳಗಾವಿ, ಬೆಂಗಳೂರಿಗೆ ಪ್ರಾತಿನಿಧ್ಯ ಕಡಿಮೆ ಮಾಡಲಾಗಿದೆ. ಇದರಿಂದನಮ್ಮ ಜಿಲ್ಲೆಗೆ ಅವಕಾಶ ಸಿಕ್ಕಿದೆ. ಮುಂದೆ ಉಳಿದ ಎಲ್ಲ ಜಿಲ್ಲೆಗೂ ಅವಕಾಶ ಸಿಗುವ ಭರವಸೆ ಇದೆ' ಎಂದರು.

ಸಚಿವ ಆನಂದ್ ಸಿಂಗ್ ಅಸಮಾಧಾನಕುರಿತು ಪ್ರತಿಕ್ರಿಯಿಸಿದ ಅವರು, 'ಈ ಕುರಿತು ನಾನು ಏನೂ ಹೇಳೊದಿಲ್ಲ. ಜನರು ನಮ್ಮನ್ನು ಕ್ಷೇತ್ರದ ಕೆಲಸ ಮಾಡಲು ಆಯ್ಕೆ ಮಾಡಿರುತ್ತಾರೆ.ಪಕ್ಷ ನೀಡಿದ ಜವಾಬ್ದಾರಿ ನಾವು ನಿರ್ವಹಿಸಬೇಕು ಅಷ್ಟೇ. ಅವರವರ ವಿಚಾರ ಅವರಿಗೆ ಬಿಟ್ಟಿದ್ದು' ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

'ಮುಂದೆ ಸಿಎಂ ಬೊಮ್ಮಾಯಿ ನೇತೃತ್ವ, ಯಡಿಯೂರಪ್ಪನವರ ಮಾರ್ಗದರ್ಶನದಲ್ಲೇಚುನಾವಣೆ ನಡೆಯುತ್ತೆ.ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತೆ.ನನಗೆ ಶಕ್ತಿ ತುಂಬುವ, ಆಶೀರ್ವಾದ ಮಾಡಿದವರನ್ನು ದೆಹಲಿಗೆ ಹೋಗಿ ಭೇಟಿ ಮಾಡಿದ್ದೇನೆ' ಇದರಲ್ಲಿ ಯಾವುದೇ ತಪ್ಪಿಲ್ಲ' ಎಂದರು.

'ಸಂಸದೆಸುಮಲತಾ ಅವರು ಲೋಕಸಭೆಯಲ್ಲಿ ಕೆಆರ್‌ಎಸ್ ಜಲಾಶಯ, ಅಕ್ರಮ ಗಣಿಗಾರಿಕೆ ಕುರಿತು ಗಮನ ಸೆಳೆದಿದ್ದಾರೆ. ಸಮಯ ಬಂದರೆ ಅಲ್ಲಿಯೂ ಭೇಟಿ ನೀಡಿ ಅಧಿಕಾರಿಗಳ ಜೊತೆ ಚರ್ಚೆ ಮಾಡಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು' ಎಂದರು.

ಶಾಸಕ ಪರಣ್ಣ ಮುನವಳ್ಳಿ, ಬಸವರಾಜ ದಡೇಸಗೂರ್, ಮುಖಂಡರಾದ ಸಿ.ವಿ.ಚಂದ್ರಶೇಖರ, ಬಸವರಾಜ ಗೌರಾ, ಗವಿಸಿದ್ಧಪ್ಪ ಕರಡಿ, ಕುಕನೂರು, ಯಲಬುರ್ಗಾ ತಾಲ್ಲೂಕಿನ ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT