ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಸಿದ ಸೇತುವೆಗೋಡೆ: ಸಂಚಾರಕ್ಕೆ ಅಡ್ಡಿ

ದೋಟಿಹಾಳ ಮುದೇನೂರು ರಾಜ್ಯ ಹೆದ್ದಾರಿ
Last Updated 2 ಜೂನ್ 2020, 12:32 IST
ಅಕ್ಷರ ಗಾತ್ರ

ಕುಷ್ಟಗಿ: ಈಚೆಗೆ ಸುರಿದ ಮಳೆಯಿಂದ ತಾಲ್ಲೂಕಿನ ದೋಟಿಹಾಳ ಗ್ರಾಮದ ಬಳಿ ಇರುವ ರಾಜ್ಯ ಹೆದ್ದಾರಿ ಸೇತುವೆಯ ಒಂದು ಭಾಗ ಕುಸಿದಿರುವುದು ಕಂಡುಬಂದಿದೆ.

ಮುದೇನೂರು ದೋಟಿಹಾಳ ನಡುವೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಈ ಸೇತುವೆ ಇದ್ದು ಪಕ್ಕದ ಗೋಡೆ, ಮಣ್ಣು ಕುಸಿದು ಸಂಚಾರಕ್ಕೆ ಅಡ್ಡಿಯಾಗಿದೆ. ಈಗಷ್ಟೇ ಮಳೆಗಾಲ ಆರಂಭಗೊಂಡಿದ್ದು ಮುಂಬುವರ ದಿನಗಳಲ್ಲಿ ಮತ್ತೆ ಮಳೆಯಾದರೆ ಸೇತುವೆ ಸಂಪೂರ್ಣ ಕುಸಿದು ಸಂಪರ್ಕ ಕಡಿದು ಹೋಗುವ ಸಾಧ್ಯತೆ ಇದೆ ಎಂದು ಆ ಭಾಗದ ಗ್ರಾಮಸ್ಥರು ವಿವರಿಸಿದ್ದಾರೆ.

ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅನುದಾನದಲ್ಲಿ ದೋಟಿಹಾಳ ಮುದೇನೂರು ರಾಜ್ಯ ಹೆದ್ದಾರಿಯ ಅಭಿವೃದ್ಧಿಯನ್ನು ಲೋಕೋಪಯೋಗಿ ಇಲಾಖೆ ಕೈಗೆತ್ತಿಕೊಂಡಿದ್ದು ಆದರೆ ಸೇತುವೆಗಳನ್ನು ದುರಸ್ತಿಗೊಳಿಸುವ ಕೆಲಸ ನಡೆಸಿಲ್ಲ. ರಸ್ತೆ ಅಭಿವೃದ್ಧಿಗೊಂಡರೂ ಕುಸಿದುಹೋದರೆ ಜನರು ಮತ್ತೆ ತೊಂದರೆ ಅನುಭವಿಸಬೇಕಾಗುತ್ತದೆ. ಹಾಗಾಗಿ ಸೇತುವೆ ಕಾಮಗಾರಿ ದುರಸ್ತಿಗೆ ತಕ್ಷಣ ಮುಂದಾಗುವಂತೆ ದೋಟಿಹಾಳ ಗ್ರಾಮದ ಬಸವರಾಜ, ಮುದೇನೂರಿನ ಚಂದ್ರಶೇಖರಗೌಡ ಇತರರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT