ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಗಣ್ಣ ಆತ್ಮವಿಮರ್ಶೆ ಮಾಡಿಕೊಳ್ಳಲಿ: ಸಿ.ಟಿ. ರವಿ

Published 1 ಮೇ 2024, 15:52 IST
Last Updated 1 ಮೇ 2024, 15:52 IST
ಅಕ್ಷರ ಗಾತ್ರ

ಕೊಪ್ಪಳ: ’ನಮ್ಮ ಪಕ್ಷ ಸಂಗಣ್ಣ ಕರಡಿ ಅವರಿಗೆ ಎಲ್ಲ ಅವಕಾಶಗಳನ್ನು ಕೊಟ್ಟಿದ್ದರೂ ಅವರು ಕಾಂಗ್ರೆಸ್‌ ಸೇರಿದ್ದಾರೆ. ಅಲ್ಲಿಯೂ ಅವರು ಅಸಹಾಯಕರಾಗಿದ್ದು ಕೆಲ ದಿನಗಳಲ್ಲಿ ಭ್ರಮನಿರಸನಕ್ಕೆ ಒಳಗಾಗಲಿದ್ದಾರೆ’ ಎಂದು ಬಿಜೆಪಿ ನಾಯಕ ಸಿ.ಟಿ. ರವಿ ಹೇಳಿದರು.

ಇಲ್ಲಿನ ಪಕ್ಷದ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ‘ಸಂಗಣ್ಣ ಆತ್ಮಾವಲೋಕನ ಮಾಡಿಕೊಳ್ಳಲಿ. ಕಾಂಗ್ರೆಸ್‌ ಪಕ್ಷದಲ್ಲಿ ಗೌರವ ಕಳೆದುಕೊಳ್ಳುತ್ತಿದ್ದಾರೆ. ಅಭಿವೃದ್ಧಿ ಕಾರ್ಯಗಳ ಯೋಜನೆಗಳನ್ನು ನರೇಂದ್ರ ಮೋದಿ ಹಾಗೂ ಬಿಜೆಪಿ ಪಕ್ಷ ಎನ್ನುವ ದೇವರು ನೀಡಿದ್ದು, ಸಂಗಣ್ಣ ಪೂಜಾರಿ ಮಾತ್ರ ಎನ್ನುವ ನನ್ನ ಹೇಳಿಕೆಗೆ ಈಗಲೂ ಬದ್ಧ’ ಎಂದು ಪುನರುಚ್ಛರಿಸಿದರು.

‘ನರೇಂದ್ರ ಮೋದಿ ಅವರ ಮಾಯೆಯಿಂದಲೇ ಸಂಗಣ್ಣ ಹಿಂದೆ ಎರಡು ಬಾರಿ ಸಂಸದರಾಗಿದ್ದರು. ಇಲ್ಲವಾದರೆ 2013ರ ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡಾಗಲೇ ಅವರ ರಾಜಕೀಯ ಬದುಕು ಮುಗಿದು ಹೋಗುತ್ತಿತ್ತು’ ಎಂದರು.

ಪ್ರಜ್ವಲ್‌ ರೇವಣ್ಣ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯಗಳ ಕುರಿತು ಬಿಜೆಪಿ ನಿಲುವು ಏನು ಎನ್ನುವ ಪ್ರಶ್ನೆಗೆ ’ನಮ್ಮ ಪಕ್ಷ ಯಾವಾಗಲೂ ಮಾತೃಶಕ್ತಿಯ ಜೊತೆ ನಿಲ್ಲಲಿದೆ. ಪ್ರಜ್ವಲ್‌ ಎನ್‌ಡಿಎ ಅಭ್ಯರ್ಥಿಯಾದ ಬಳಿಕ ನಡೆದ ಘಟನೆ ಇದಲ್ಲ. ತನಿಖಾ ತಂಡ ನಿಷ್ಪಕ್ಷಪಾತವಾಗಿತ ತನಿಖೆ ನಡೆಸಲಿ. ಪ್ರಜ್ವಲ್‌ ತಪ್ಪು ಮಾಡಿದ್ದರೆ ಶೇ. 1ರಷ್ಟು ಕೂಡ ಕ್ಷಮೆಗೆ ಅರ್ಹನಲ್ಲ’ ಎಂದರು.

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಪ್ರಸ್ತಾಪಿಸಿದ ಸಿ.ಟಿ. ರವಿ ’ಜನರಿಗೆ ಕೊಟ್ಟ ಭರವಸೆಯನ್ನು ಸರ್ಕಾರ ಈಡೇರಿಸಲೇಬೇಕು. ಕಾಂಗ್ರೆಸ್‌ನಲ್ಲಿರುವ ನಾಯಕರು ತಮ್ಮ ಆಸ್ತಿ ಮಾರಾಟ ಮಾಡಿಯಾದರೂ ಯೋಜನಗೆಳನ್ನು ಮುಂದುವರಿಸಬೇಕು. ಆದರೆ, ರಾಜ್ಯವನ್ನು ಮಾತ್ರ ಮಾರಾಟ ಮಾಡದಿರಲಿ’ ಎಂದು ಹೇಳಿದರು.

ಶಾಸಕ ದೊಡ್ಡನಗೌಡ ಪಾಟೀಲ, ವಿಧಾನಪರಿಷತ್‌ ಸದಸ್ಯೆ ಹೇಮಲತಾ ನಾಯಕ, ಪಕ್ಷದ ಜಿಲ್ಲಾಧ್ಯಕ್ಷ ನವೀನ್‌ ಗುಳಗಣ್ಣನವರ, ವಿಭಾಗ ಸಹ ಪ್ರಭಾರಿ ಚಂದ್ರಶೇಖರ ಪಾಟೀಲ ಹಲಗೇರಿ ಪಾಲ್ಗೊಂಡಿದ್ದರು.ಕಾಂಗ್ರೆಸ್‌ ಮಾಡುತ್ತಿರುವ ಮತ ಆಧಾರಿತ ಮೀಸಲಾತಿಯನ್ನು ಖುದ್ದು ಅಂಬೇಡ್ಕರ್‌ ವಿರೋಧಿಸಿದ್ದರು. ಸಂಪತ್ತಿನ ಸಮಾನ ಹಂಚಿಕೆ ನೆಪದಲ್ಲಿ ಮಾಂಗಲ್ಯವನ್ನೂ ತೂಕ ಮಾಡಿ ಹಂಚಬಹುದು. ಸಿ.ಟಿ. ರವಿ ಬಿಜೆಪಿ ನಾಯಕ

 ಎಸ್.ಕೆ.ಬೆಳ್ಳುಬ್ಬಿ
 ಎಸ್.ಕೆ.ಬೆಳ್ಳುಬ್ಬಿ
ಬಿಜೆಪಿ ಎಲ್ಲ ಅವಕಾಶಗಳನ್ನು ಕೊಟ್ಟರೂ ಸಂಗಣ್ಣ ಪಕ್ಷ ಬಿಟ್ಟು ಹೋಗಿದ್ದಕ್ಕೆ ಆತ್ಮವಿಮರ್ಶೆ ಮಾಡಿಕೊಳ್ಳಲಿ. ಉಂಡ ಮನೆಗೆ ಇಳಿ ವಯಸ್ಸಿನಲ್ಲಿ ದ್ರೋಹ ಬಗೆಯಬಾರದಿತ್ತು.
ಎಸ್.ಕೆ. ಬೆಳ್ಳುಬ್ಬಿ ಮಾಜಿ ಸಚಿವ
ಕಾಂಗ್ರೆಸ್‌ ಮಾಡುತ್ತಿರುವ ಮತ ಆಧಾರಿತ ಮೀಸಲಾತಿಯನ್ನು ಖುದ್ದು ಅಂಬೇಡ್ಕರ್‌ ವಿರೋಧಿಸಿದ್ದರು. ಸಂಪತ್ತಿನ ಸಮಾನ ಹಂಚಿಕೆ ನೆಪದಲ್ಲಿ ಮಾಂಗಲ್ಯವನ್ನೂ ತೂಕ ಮಾಡಿ ಹಂಚಬಹುದು.
ಸಿ.ಟಿ. ರವಿ ಬಿಜೆಪಿ ನಾಯಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT