ಭಾನುವಾರ, 14 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಕಗಿರಿ | ಭತ್ತದ ಗದ್ದೆ ಉರುಳಿದ ಶಾಲಾ ವಾಹನ: ವಿದ್ಯಾರ್ಥಿಗಳಿಗೆ ಗಾಯ

Published 18 ಮಾರ್ಚ್ 2024, 16:09 IST
Last Updated 18 ಮಾರ್ಚ್ 2024, 16:09 IST
ಅಕ್ಷರ ಗಾತ್ರ

ಕನಕಗಿರಿ: ಶಾಲಾ ವಿದ್ಯಾರ್ಥಿಗಳನ್ನು ಕರೆದುಕೊಂಡು‌ ಹೋಗುತ್ತಿದ್ದ ವಾಹನ ಸಮೀಪದ ವಿಠಲಾಪುರ ಗ್ರಾಮದ‌ ಕೆರೆ ಪರಿಸರದಲ್ಲಿರುವ ಭತ್ತದ ಗದ್ದೆಗೆ ಉರುಳಿದ ಘಟನೆ ಸೋಮವಾರ ನಡೆದಿದೆ.

ತಾಲ್ಲೂಕಿನ ಚಿಕ್ಕಮಾದಿನಾಳ, ಹಿರೇ ಮಾದಿನಾಳ ಸೇರಿದಂತೆ ಇತರೆ ಗ್ರಾಮಗಳ ವಿದ್ಯಾರ್ಥಿಗಳನ್ನು ಕರೆದುಕೊಂಡು ಗಂಗಾವತಿ ತಾಲ್ಲೂಕಿನ ಗಡ್ಡಿ ಗ್ರಾಮದ ಖಾಸಗಿ ಶಾಲೆಗೆ ಈ ವಾಹನ ಹೊರಟಿತ್ತು ಎಂದು ತಿಳಿದುಬಂದಿದೆ. ಶಾಲಾ ಬಾಲಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ವಾಹನ ಮಾಲೀಕರು ಹಾಗೂ ವಿದ್ಯಾರ್ಥಿಗಳ ಪಾಲಕರು ದೂರು ನೀಡಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT