ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯದಾಸರ ಆರಾಧನಾ ಮಹೋತ್ಸವ

Last Updated 3 ನವೆಂಬರ್ 2022, 4:57 IST
ಅಕ್ಷರ ಗಾತ್ರ

ಗಂಗಾವತಿ: ಇಲ್ಲಿ‌ನ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಬುಧವಾರ 267ನೇ ವಿಜಯದಾಸರ ಆರಾಧನಾ ಮಹೋತ್ಸವ ಮಂ‌ತ್ರಾಲಯ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ಸಾನ್ನಿಧ್ಯದಲ್ಲಿ ಜರುಗಿತು.

ಈ ವೇಳೆ ಶ್ರೀಗಳು ಮಾತನಾಡಿ, ‘ವಿಜಯದಾಸರು ದಾಸರ ಪರಂಪರೆಗೆ ಹೆಚ್ಚಿನ ಒತ್ತು ನೀಡಿ, 25 ಸಾವಿರಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಕಳೆದ 20 ವರ್ಷಗಳಿಂದ ಈ ಆರಾಧನಾ ಮಹೋತ್ಸವ ನಡೆಸಿಕೊಂಡು ಬರುತ್ತಿರು ವುದು ಶ್ಲಾಘನೀಯ. ಹೀಗೆ ಮುಂದುವರಿಸಿಕೊಂಡು ಹೋದರೆ, ರಾಯರ ಮಠದಿಂದ ₹1 ಲಕ್ಷ ಅನುದಾನ ನೀಡಲಾಗುವುದು’ಎಂದರು. ಭಕ್ತರಿಗೆ ತಪ್ತ ಮುದ್ರಧಾರಣೆ ಹಾಕಲಾಯಿತು.

ಇದಕ್ಕೂ ಮುನ್ನ ವಿಜಯದಾಸರ ವೃಂದಾವನಕ್ಕೆ ಪಂಚಾಮೃತ ಅಭಿಷೇಕ, ವಿಶೇಷ ಹೂವಿನ ಅಲಂಕಾರ, ಮಹಾ ಮಂಗಳಾರತಿ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.

ನಂತರ ನಗರೇಶ್ವರ ದೇವಸ್ಥಾನದಿಂದ ರಾಯರ ಮಠದವರೆಗೆ ರಾಯರ ಮಠದ ಶ್ರೀಗಳನ್ನು ಮೆರವಣಿಗೆ ಮಾಡಲಾಯಿತು. ನಂತರ ಶ್ರೀಗಳಿಂದ ಮಠದ ಆವರಣದಲ್ಲಿ ಪ್ರವಚನ ಕಾರ್ಯಕ್ರಮ ನಡೆಯಿತು.

ಶಾಸಕ ಪರಣ್ಣ ಮುನವಳ್ಳಿ, ಬ್ರಾಹ್ಮಣ ಸಮಾಜದ ನಾರಾಯಣರಾವ್ ಆಚಾರ್, ವಾಸುದೇವ ನವಲಿ, ಮಧುಸೂಧನ್, ರಾಮಕೃಷ್ಣ ಜಾಗಿರದಾರ್, ಶ್ರೀನಿವಾಸ ಢಣಾಪುರ, ಗೋಪಾಲಕೃಷ್ಣ ಹೇರೂರು, ಲಕ್ಷ್ಮೀಕಾಂತ, ಪವನಕುಮಾರ ಗುಂಡೂರು, ಬದ್ರಿನಾರಾಯಣ ಇದ್ದರು‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT