ಮಣ್ಣಿನ ಪರೀಕ್ಷೆ; ರೈತರಿಗೆ ಸಲಹೆ

7

ಮಣ್ಣಿನ ಪರೀಕ್ಷೆ; ರೈತರಿಗೆ ಸಲಹೆ

Published:
Updated:
Prajavani

ಕನಕಗಿರಿ: ಕೃಷಿಕರು ಬಿತ್ತನೆ ಕೈಗೊಳ್ಳುವ ಮುನ್ನ ಹೊಲದಲ್ಲಿನ ಮಣ್ಣಿನ ಗುಣ ಪರೀಕ್ಷಿಸಿ ಕೃಷಿ ಮಾಡಬೇಕೆಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಶಾಂತಾ ರಮೇಶ ನಾಯಕ ತಿಳಿಸಿದರು.

ಸಮೀಪದ ಕನಕಾಪುರ ಗ್ರಾಮದಲ್ಲಿ ಸೋಮವಾರ ನಡೆದ ಹುಲಿಹೈದರ ಹೋಬಳಿ ಮಟ್ಟದ ಕೃಷಿ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕೃಷಿ ವಿಜ್ಞಾನ ಕೇಂದ್ರದಲ್ಲಿ ಮಣ್ಣಿನ ಫಲವತ್ತತೆ ಕುರಿತು ಮಾಹಿತಿ ಪಡೆದು ಬಿತ್ತನೆ ಮಾಡಿದರೆ ಉತ್ತಮ ಇಳುವರಿ ಪಡೆದು ಆರ್ಥಿಕವಾಗಿ ಸಬಲರಾಗಲು ಸಾಧ್ಯವಿದೆ ಎಂದರು.

ಕೀಟ ತಜ್ಞ ರಾಘವೇಂದ್ರ ಎಲಗೇರ ಅವರು ಜೇನುಕೃಷಿ ಹಾಗೂ ಮಣ್ಣಿನ ಫಲವತ್ತತೆ ಕುರಿತು ತಿಳಿಸಿದರು.

ಅಧಿಕಾರಿಗಳಾದ ಗುರುರಾಜ ಕುಲಕರ್ಣಿ, ರಾಘವೇಂದ್ರ, ಜಂಬಣ್ಣ ಐಲಿ, ಜಿಲ್ಲಾ ಯುವ ಕೃಷಿಕ ಸಮಾಜದ ಅಧ್ಯಕ್ಷ ಕನಕಪ್ಪ ಮಳಗಾವಿ ಮಾತನಾಡಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅಮರಮ್ಮ ಗೋಸ್ಲೆಪ್ಪ ಗದ್ದಿ ಅಧ್ಯಕ್ಷತೆ ವಹಿಸಿದ್ದರು.

ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಹನುಮೇಶ ವರ್ನ್‌ಖೇಡ, ಸದಸ್ಯರಾದ ಪರಸಪ್ಪ ಜಾಡಿ, ಕನಕಪ್ಪ ಹೊಸಗುಡ್ಡ, ಸಹಾಯಕ ಕೃಷಿ ನಿರ್ದೇಶಕ ಚಂದ್ರಕಾಂತ, ಕೃಷಿ ಅಧಿಕಾರಿಗಳಾದ ಚನ್ನಬಸವ, ಎಚ್‌. ಎಚ್‌ ಮಾದರ, ಮುಬೀನಾ, ಎಂ. ಎಸ್‌. ವಾಲಿ, ಪ್ರಮುಖರಾದ ಈಶಪ್ಪ ಚವ್ಹಾಣ, ಶರತನಾಯಕ, ಅಮರಪ್ಪ ಗದ್ದಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !