ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಪ್ಪಳ: ಅಯೋಧ್ಯೆಗೆ ತೆರಳಿದ ವಿಶೇಷ ರೈಲು

Published 11 ಫೆಬ್ರುವರಿ 2024, 16:15 IST
Last Updated 11 ಫೆಬ್ರುವರಿ 2024, 16:15 IST
ಅಕ್ಷರ ಗಾತ್ರ

ಕೊಪ್ಪಳ: ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯಾದ ಬಳಿಕ ಆರಂಭಿಸಲಾದ ಕೊಪ್ಪಳ ಮಾರ್ಗವಾಗಿ ಹಾದು ಹೋಗುವ ವಿಶೇಷ ರೈಲಿನಲ್ಲಿ 315 ಜನ ಪ್ರಯಾಣ ಮಾಡಿದರು.

ಇದಕ್ಕೂ ಮೊದಲು ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ  ನವೀನ ಗುಳಗಣ್ಣನವರ್ ಮಾತನಾಡಿ ‘ಅಯೋಧ್ಯೆಗೆ ಹೋಗುವುದು ನಮ್ಮೆಲ್ಲರ ಪುಣ್ಯ. ಕಳೆದ ಐದು ದಶಕಗಳ ಭಾರತೀಯರ ಕನಸಾಗಿದ್ದ ರಾಮಮಂದಿರ ನಿರ್ಮಾಣದ ಆಸೆ ಈಗ ಈಡೇರಿದೆ. ಸದ್ಯ ಆಸ್ಥಾ ವಿಶೇಷ ರೈಲಿನ ಮೂಲಕ ಜನರು ರಾಮನ ದರ್ಶನಕ್ಕೆ ತೆರಳುತ್ತಿದ್ದಾರೆ. ಹನುಮನ ನಾಡಿನಿಂದ ಅಯೋಧ್ಯೆಗೆ ರೈಲು ಸಂಪರ್ಕ ಲಭಿಸಿದ್ದು ಪ್ರಯಾಣಿಕರಿಗೆ ಅನುಕೂಲವಾಗುತ್ತದೆ’ ಎಂದರು.

ಮಾಜಿ ಶಾಸಕ ಪರಣ್ಣ ಮುನವಳ್ಳಿ, ಪಕ್ಷದ ನಾಯಕಿ ಮಂಜುಳಾ ಕರಡಿ, ರೈಲ್ವೆ ಅಧಿಕಾರಿಗಳಾದ ಆಸೀಫ್ ಜಿ, ದೇವಾನಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT