ಕೊಪ್ಪಳ: ಲೋಕಕಲ್ಯಾಣಾರ್ಥವಾಗಿ ಪಾದಯಾತ್ರೆಯ ಮೂಲಕ ವಾರಣಾಸಿಗೆ ತೆರಳಿದ್ದ ಕೊಪ್ಪಳದ ಚನ್ನಬಸವನಗರದ ನಿವಾಸಿ ಹನುಮೇಶ ಕುಲಕರ್ಣಿ ಮಂಗಳವಾರ ರಾಯರ ಮಠಕ್ಕೆ ಆಗಮಿಸುವ ಮೂಲಕ ತಮ್ಮ ಪಾದಯಾತ್ರೆಯನ್ನು ಪೂರ್ಣಗೊಳಿಸಿದರು.

ಕಳೆದ 62 ದಿನಗಳ ಕೆಳಗೆ ಕೊಪ್ಪಳದಿಂದ ಪಾದಯಾತ್ರೆ ಆರಂಭಿಸಿದ್ದ ಅವರು 1,550 ಕಿ.ಮೀ ಗಳನ್ನು ಏಕಾಂಗಿಯಾಗಿ ಕ್ರಮಿಸಿ, ಕಾಶಿ ವಿಶ್ವನಾಥನ ದರ್ಶನ ಪಡೆದು, ಮರಳಿ ಕೊಪ್ಪಳಕ್ಕೆ ಬಂದು ತಮ್ಮ ಯಾತ್ರೆಯನ್ನು ಪೂರ್ಣಗೊಳಿಸಿದ್ದಾರೆ. ಸಂಜೆ ಆರು ಗಂಟೆಗೆ ನಗರಕ್ಕೆ ಆಗಮಿಸಿದ ಅವರನ್ನು ರಾಘವೇಂದ್ರ ಸ್ವಾಮಿಗಳಮಠದ ಪ್ರಧಾನ ಅರ್ಚಕರು ರಘುಪ್ರೇಮಾಚಾರ್ಯ ಮುಳಗುಂದ, ವ್ಯವಸ್ಥಾಪಕ ಜಗನ್ನಾಥ ಹುನಗುಂದ ಸೇರಿದಂತೆ ವಿವಿಧ ಸಮಾಜಗಳ ನೂರಾರು ಸಂಖ್ಯೆಯಲ್ಲಿ ನೆರೆದಿದ್ದ ಜನರು ಸ್ವಾಗತಿಸಿದರು. ಆ ಬಳಿಕ ಶಾಲು ಹೊದಿಸಿ, ಹಾರ ಹಾಕಿ, ನಾದಸ್ವರದ ಮೂಲಕ ಮೆರವಣಿಗೆಯಲ್ಲಿ ಅವರನ್ನು ರಾಯರಮಠದವರೆಗೆ ಕರೆತರಲಾಯಿತು.

ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದು ಪಾದಯಾತ್ರೆ ಪೂರ್ಣಗೊಳಿಸಿದ ಬಳಿಕ ಮಾತನಾಡಿದ ಹನುಮೇಶ್ ಅವರು, ಸೆಪ್ಟಂಬರ್ 7 ರಂದು ಕಾಶಿಗೆ ಈ ಯಾತ್ರೆಯನ್ನು ಆರಂಭಿಸಿದ್ದೆ. ನವೆಂಬರ್ 7 ರಂದು ಕಾಶಿ ತಲುಪಿ ವಿಶ್ವೇಶ್ವರನ ದರ್ಶನ ಪಡೆದೆ. ಇದು 62 ದಿನಗಳ ತೀರ್ಥಯಾತ್ರೆ ಯಾಗಿದ್ದು, ದಾರಿಯುದ್ದಕ್ಕೂ ಕೇವಲ ಹಣ್ಣು, ಹಾಲು ಸೇವನೆ ಮಾತ್ರ ಮಾಡುತ್ತಿದ್ದೆ. ಇದು ದೈವಿಕ ಯಾತ್ರೆಯಾಗಿರುವುದರಿಂದ ಬೇರೆ ಬೇರೆ ಬಗೆಯ ಸಾಕಷ್ಟು ಅನುಭವಗಳಾದವು. ಅಲ್ಲಿಯವರೆಗೂ ಪಾದಯಾತ್ರೆ ಹೋದರೂ ಜೇಬಿನಿಂದ ಒಂದು ರೂಪಾಯಿಯೂ ಖರ್ಚಾಗಿಲ್ಲ. ದಾರಿಯಲ್ಲಿ ಜನರೇ ಆಹಾರ, ಉಳಿಯಲು ವ್ಯವಸ್ಥೆ ಕಲ್ಪಿಸಿ ಉಪಚರಿಸುತ್ತಿದ್ದರು.

ಪ್ರತಿದಿನ 25 ರಿಂದ 30 ಕಿ.ಮೀ. ಕ್ರಮಿಸುತ್ತಿದ್ದೆ. ಕತ್ತಲಾದೊಡನೆ ಗುಡಿಗಳಲ್ಲಿ ತಂಗುತ್ತಿದ್ದೆ. ಹೀಗೆ ಬೆಳಿಗ್ಗೆ ಏಳರಿಂದ ಸಂಜೆ ಏಳರವರೆಗೂ ಜಪದ ಜೊತೆಗೆ ಪ್ರಯಾಣವೂ ಸಾಗುತ್ತಲೇ ಇತ್ತು. ಯಾತ್ರೆ ಆರಂಭಕ್ಕೂ ಮುನ್ನ ಹಲವು ಸಂಕಲ್ಪಗಳನ್ನು ಮಾಡಿಕೊಂಡಿದ್ದೆ. ಯಾವುದೇ ವೈಯ್ಯಕ್ತಿಕ ಯಾಚನೆಗಳಿಲ್ಲದ, ಲೋಕದಲ್ಲಿನ ಸಜ್ಜನರಿಗೆ ಒಳ್ಳೆಯದಾಗಲಿ, ದುರ್ಜನರು ಮನಃಪರಿವರ್ತನೆಗೊಂಡು ಸನ್ಮಾರ್ಗದಲ್ಲಿ ನಡೆಯಲಿ ಎಂಬ ಉದ್ದೇಶದಿಂದ ಲೋಕಕಲ್ಯಾಣಾರ್ಥವಾಗಿ ಕೈಗೊಂಡ ಯಾತ್ರೆ ಇದಾಗಿತ್ತು ಎಂದು ಅವರು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.