ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲಾ ಅಂಗಳದಲ್ಲಿ ಅರಳಿದ ರಂಗೋಲಿ 

Last Updated 7 ಏಪ್ರಿಲ್ 2021, 11:40 IST
ಅಕ್ಷರ ಗಾತ್ರ

ಹನುಮಸಾಗರ: ಇಲ್ಲಿನ ಸರ್ಕಾರಿ ಉರ್ದು ಪ್ರೌಢ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗಾಗಿ ವಿಜ್ಞಾನ, ಗಣಿತ ಹಾಗೂ ಸಮಾಜವಿಜ್ಞಾನ ಪಠ್ಯದಲ್ಲಿ ಬರುವ ಚಿತ್ರಗಳ ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿತ್ತು.

ವಿದ್ಯಾರ್ಥಿಗಳು ಶಾಲಾ ಅಂಗಳದಲ್ಲಿ, ಕಾರಿಡಾರ್‌ನಲ್ಲಿ, ವರ್ಗ ಕೋಣೆಯಲ್ಲಿ ಆಕರ್ಷಕ ಚಿತ್ರಗಳನ್ನು ಬಿಡಿಸಿ ಆ ಚಿತ್ರದ ಕುರಿತು ಇತರ ವಿದ್ಯಾರ್ಥಿಗಳಿಗೆ ವಿವರಣೆ ನೀಡುತ್ತಿರುವುದು ಕಂಡುಬಂತು.

ಶಾಲಾ ಮುಖ್ಯಶಿಕ್ಷಕ ಎಂ.ಎಸ್.ಬಡದಾನಿ ಮಾಹಿತಿ ನೀಡಿ,‘ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ಇದು ಉತ್ತಮ ಮಾರ್ಗ’ ಎಂದು ತಿಳಿಸಿದರು.

ಶಿಕ್ಷಕರಾದ ರಹಮತ್ ಅಲಿ, ಪೀರಜಾದೆ ಮುಬೀನಪಾಷಾ, ಅಲಮಾಸ ಉನ್ನಿಸಖಾನಂ,ಶಂಕರ ಹಳ್ಳಿ, ಮಲ್ಲಣ್ಣ ಹುಲಿ, ವೀರೇಶ ರಕ್ಕಸಗಿ ಹಾಗೂ ಸಯೀದಾ ಸಾದಿಯಾ ತಬಸ್ಸುಮ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT