ಸಂಚಾರ ಪೊಲೀಸರ ಕಾರ್ಯಚರಣೆ: 50 ವಾಹನ ವಶಕ್ಕೆ

7

ಸಂಚಾರ ಪೊಲೀಸರ ಕಾರ್ಯಚರಣೆ: 50 ವಾಹನ ವಶಕ್ಕೆ

Published:
Updated:
Deccan Herald

ಗಂಗಾವತಿ: ‘ಸಂಚಾರ ನಿಯಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಹಿನ್ನೆಲೆಯಲ್ಲಿ ಇಲ್ಲಿನ ಸಂಚಾರ ಪೊಲೀಸರು ಮಂಗಳವಾರ ಕಾರ್ಯಚರಣೆ ನಡೆಸಿದರು. 50ಕ್ಕೂ ಹೆಚ್ಚು ವಾಹನಗಳನ್ನು ವಶಕ್ಕೆ ಪಡೆದರು.

ಸಂಚಾರ ಠಾಣೆಯ ಪಿಎಸ್ಐಗಳಾದ ನಾಗರಾಜ್ ಮತ್ತು ಚಂದ್ರಹಾಸ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಚಾಲನಾ ಪರವಾನಿಗೆ, ವಾಹನದ ವಿಮೆ ಮತ್ತು ಇತರ ದಾಖಲೆಗಳನ್ನು ಪರಿಶೀಲಿಸಿದರು.

ಇದನ್ನು ಆಕ್ಷೇಪಿಸಿದ ಕೆಲ ವಾಹನ ಸವಾರರು, ನಮ್ಮನ್ನು ಪದೇ ಪದೇ ಹೀಗೆ ಕಿರಿಕಿರಿ ಮಾಡುವುದು ಸರಿಯಲ್ಲ’ ಎಂದರು. ಪೊಲೀಸರು ಮತ್ತು ವಾಹನ ಸವಾರರ ನಡುವೆ ಮಾತಿನ ಚಕಮಕಿ ನಡೆಯಿತು. ಸಿಬ್ಬಂದಿ ಭೀಮಣ್ಣ, ಬಸವರಾಜ ಗುಗ್ಗರಿ, ಚನ್ನಬಸವ, ಯೋಗಾನಂದ, ಗೀರೀಶ, ಅಂಜಿನಿ, ದೇವರಾಜ ಇದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !