ಸೋಮವಾರ, ಜೂನ್ 27, 2022
26 °C

ಎಸ್‌ಡಿಎಂಸಿ ಪದಾಧಿಕಾರಿಗಳಿಗೆ ತರಬೇತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವಲಹಳ್ಳಿ (ತಾವರಗೇರಾ): ‘ಶಾಲೆಯ ಅಭಿವೃದ್ಧಿ ಜತೆಗೆ ಮಕ್ಕಳ ಶಿಕ್ಷಣಕ್ಕೆ ಪೂರಕವಾದ ಕಾರ್ಯಕ್ರಮಗಳನ್ನು ರೂಪಿಸುವ ಕಾರ್ಯವನ್ನು ಎಸ್‌ಡಿಎಂಸಿ ಪದಾಧಿಕಾರಿಗಳು ಮಾಡಬೇಕು’ ಎಂದು ಶಿಕ್ಷಕ ಹಾಗೂ ಸಂಪನ್ಮೂಲ ವ್ಯಕ್ತಿ ನಟರಾಜ ಸೋನಾರ ಹೇಳಿದರು.

ಸಮೀಪದ ನವಲಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ನಡೆದ ಎಸ್‌ಡಿಎಂಸಿ ನೂತನ ಪದಾಧಿಕಾರಿಗಳ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಎಸ್‌ಡಿಎಂಸಿ ಸದಸ್ಯರು ಶಿಕ್ಷಕರಿಗೆ ಬೆನ್ನೆಲುಬಾಗಿ ಕೆಲಸ ಮಾಡಬೇಕು. ಪ್ರತಿದಿನ ಶಾಲೆಗೆ ಭೇಟಿ ನೀಡಬೇಕು. ಮಕ್ಕಳ ಕಲಿಕೆ ಅವಲೋಕನ ಮಾಡಬೇಕು. ಸದಸ್ಯರು ಜವಾಬ್ದಾರಿ, ಅಧಿಕಾರ ಹಾಗೂ ಶಿಕ್ಷಣದ ಮಹತ್ವ ಅರಿತು ಮುನ್ನಡೆಯಬೇಕು’ ಎಂದು ಹೇಳಿದರು.

ಎಸ್‌ಡಿಎಂಸಿ ಅಧ್ಯಕ್ಷ ವೀರಭದ್ರಪ್ಪ ಡಿ.ಸಂಗಟಿ, ಉಪಾಧ್ಯಕ್ಷೆ ಶೋಭಾ ಬಂಡೇರ್, ಗ್ರಾ.ಪಂ. ಸದಸ್ಯ ಬಸವರಾಜ ಮ್ಯಾದರಡೊಕ್ಕಿ, ಹಂಪಮ್ಮ ಕೋರಿ, ಗಂಗಮ್ಮ , ದುರಗೇಶ ಚಲುವಾದಿ, ಸದಸ್ಯರಾದ ಮೌನೇಶ ಬಡಿಗೇರ, ಶರಣಗೌಡ ಎಂ. ಮಾಲಿ ಪಾಟೀಲ, ಶರಣಪ್ಪ ಕಾಗಿ, ಶಂಕ್ರಪ್ಪ ಡಿ ಗೆದಿಗೇರಿ, ಅನುಸೂಯಾ ಮ್ಯಾದರಡೊಕ್ಕಿ, ರೇಣುಕಮ್ಮ , ಹುಲಗಪ್ಪ ಚಲುವಾದಿ, ಹುಸೇನಸಾಬ, ವಿಜಯಲಕ್ಷ್ಮೀ, ಉಮಾದೇವಿ ಹಾಗೂ ಮುಖ್ಯ ಶಿಕ್ಷಕಿ ಪಾರ್ವತೆಮ್ಮ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು