ಬುಧವಾರ, ಮಾರ್ಚ್ 29, 2023
32 °C

‘ಮತದಾರರ ಯಾದಿ ಪರಿಷ್ಕರಣೆ ಆರಂಭ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರಟಗಿ: ‘ಮತದಾರರ ಯಾದಿ ವಿಶೇಷ ಪರಿಷ್ಕರಣಾ ಕಾರ್ಯಕ್ರಮವನ್ನು ಸೋಮವಾರದಿಂದ ಆರಂಭಿಸಲಾಗಿದೆ’ ಎಂದು ತಹಶೀಲ್ದಾರ್ ರವಿ ಎಸ್.‌ ಅಂಗಡಿ ತಿಳಿಸಿದ್ದಾರೆ.

ಹೊಸದಾಗಿ ಹೆಸರು ಸೇರ್ಪಡೆಗೆ ನಮೂನೆ 6, ಹೆಸರು ಸೇರಿಸಲು ಆಕ್ಷೇಪಿಸಲು, ಹೆಸರು ತೆಗೆಯಲು ನಮೂನೆ 7, ಮಾಹಿತಿ ತಿದ್ದುಪಡಿಗೆ ನಮೂನೆ 8, ವರ್ಗಾವಣೆಗಾಗಿ ನಮೂನೆ 8ಎ ಅರ್ಜಿಗಳನ್ನು ನಿಗದಿತ ಕೇಂದ್ರಗಳಲ್ಲಿ ಪಡೆದು ಭರ್ತಿಮಾಡಿ ಸಲ್ಲಿಸಬೇಕು ಎಂದಿದ್ದಾರೆ.

ಇದಲ್ಲದೇ ಚುನಾವಣೆ ಆಯೋಗ ಮತದಾರರ ಹೆಲ್ಪ್‌ಲೈನ್‌ ಅಪ್ಲಿಕೇಶನ್ ಬಿಡುಗಡೆಗೊಳಿಸಿದ್ದು, ಮೇಲಿನ ಎಲ್ಲ ಅರ್ಜಿ ನಮೂನೆಗಳನ್ನು ಆನ್‍ಲೈನ್ ಮೂಲಕ ಭರ್ತಿ ಮಾಡಬಹುದಾಗಿದೆ. ನ. 8ರಿಂದ ಮತದಾರರ ಪಟ್ಟಿಗಳ ಕರಡು ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ಹಕ್ಕು ಮತ್ತು ಆಕ್ಷೇಪಣೆಗೆ ನ. 8ರಿಂದ ಡಿ. 8ರವರೆಗೆ ಕಾಲಾವಕಾಶ ನೀಡಲಾಗಿದೆ. ನ. 7, 14, 21 ಮತ್ತು 28ರಂದು ವಿಶೇಷ ಆದೋಲನಗಳನ್ನು ನಡೆಸಲಾಗುತ್ತದೆ. ಡಿ.12ರಂದು ಸ್ವೀಕೃತವಾದ ಹಕ್ಕು ಮತ್ತು ಆಕ್ಷೇಪಣಾ ಅರ್ಜಿಗಳನ್ನು ವಿಲೇವಾರಿಗೊಳಿಸಲಾಗುವುದು. ಡಿ.30ರಂದು ಸೇರ್ಪಡೆ, ತಿದ್ದುಪಡಿ, ಬಿಟ್ಟಿರುವ ಪೂರಕ ಪಟ್ಟಿಗಳನ್ನು ಮುದ್ರಿಸಿ ಅಂತಿಮಗೊಳಿಸಲಾಗುವುದು. ಜ. 12ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುವುದು ಎಂದವರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.