7
ಸಚಿವ ಬೈರೇಗೌಡಗೆ ಮನವಿ

ಕುಡಿಯುವ ನೀರಿನ ಕಾಮಗಾರಿ ಸ್ಥಗಿತ

Published:
Updated:

ಕನಕಗಿರಿ: ಸಮೀಪದ ಹುಲಿಹೈದರ ಹಾಗೂ ಹೇರೂರು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ರಾಜೀವಗಾಂಧಿ ಶುದ್ದ ಕುಡಿಯುವ ನೀರಿನ ಬಹು ಗ್ರಾಮ ಯೋಜನೆಯ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ ಎಂದು ಜಿಲ್ಲಾ ಪಂಚಾಯ್ತಿ ಸದಸ್ಯ ಅಮರೇಶ ಗೋನಾಳ, ಮುಖಂಡ ರಮೇಶ ನಾಯಕ ದೂರಿದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿ ರಾಜ್ಯ ಸಚಿವ ಕೃಷ್ಣ ಬೈರೆಗೌಡ ಅವರನ್ನು ಬೆಂಗಳೂರಿನಲ್ಲಿ ಸೋಮವಾರ ಭೇಟಿ ಮಾಡಿ ಅವರು ಮನವಿ ಪತ್ರ ಸಲ್ಲಿಸಿದರು. ತುಂಗಾಭದ್ರ ಎಡದಂಡೆ ಕಾಲುವೆ ನೀರನ್ನು ಪೈಪ್‌ಲೈನ್‌ ಮೂಲಕ ಸಮೀಪದ ಸೂಳೇಕಲ್‌ ಗ್ರಾಮದ ಕೆರೆಯಲ್ಲಿ ಸಂಗ್ರಹಿಸಿ ಆ ನಂತರ ಸಂಬಂಧಿಸಿದ ಗ್ರಾಮಗಳಿಗೆ ನೀರು ಸರಬರಾಜು ಮಾಡಬೇಕಜು ಎಂಬುದು ಈ ಯೋಜನೆಯ ಉದ್ದೇಶವಾಗಿದೆ, ಶ್ರೀನಿವಾಸ ಕನ್‌ಸ್ಟ್ರಶನ್ ಎಂಬ ಸಂಸ್ಥೆ ಗುತ್ತಿಗೆಯನ್ನು ಪಡೆದುಕೊಂಡಿದ್ದು ಕಾಮಗಾರಿ ಆರಂಭಿಸಿ ಏಳು ವರ್ಷ ಉರುಳಿದರೂ ಇಲ್ಲಿವರೆಗೆ ಪೂರ್ಣಗೊಳಿಸಿಲ್ಲ ಅವರು ದೂರಿದರು.

ಸಂಸ್ಥೆಯ ಮುಖ್ಯಸ್ಥ ಹಾಗೂ ಗುತ್ತಿಗೆದಾರ ಪಿಚ್ಚೇಶರಾವ್ ಎಂಬುವವರು ತಮಗೆ ಲಾಭ ಬರುವ ಪೈಪ್‌ಲೈನ್‌ ಕಾಮಗಾರಿ ಮಾತ್ರ ಮುಗಿಸಿದ್ದಾರೆ. ಅದು ಕೂಡ ಸಮರ್ಪಕವಾಗಿಲ್ಲ. ಕಳಪೆ ಗುಣಮಟ್ಟದ ಪೈಪ್‌ ಬಳಸಿದ್ದಾರೆ ಎಂದು ಅವರು ಆಪಾದಿಸಿದರು.

ಸೂಳೇಕಲ್‌ ಗ್ರಾಮದ ಪರಿಸರದಲ್ಲಿ ಬೃಹತ್ ಕೆರೆ ನಿರ್ಮಿಸಿಲ್ಲ, ಕೆರೆ ಪಕ್ಕದಲ್ಲಿ ಜಾಕ್‌ವೆಲ್, ಶುದ್ದ ಕುಡಿಯುವ ನೀರಿನ ಘಟಕ, ವಾಟರ್‌ ಟ್ಯಾಂಕ್ ಸೇರಿದಂತೆ ಇತರೆ ಕಾಮಗಾರಿಗಳು ಇಲ್ಲಿವರೆಗೂ ಆರಂಭಗೊಂಡಿಲ್ಲ. ಆದಾಗ್ಯೂ ₹ 19 ಕೋಟಿ ಅನುದಾನದಲ್ಲಿ ₹ 8 ಕೋಟಿ ಎತ್ತುವಳಿ ಮಾಡಲಾಗಿದೆ ಎಂದು ಅವರು ವಿವರಿಸಿದರು.

ಈ ಬಗ್ಗೆ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಸಾಕಷ್ಟು ಸಲ ಪ್ರಸ್ತಾವನೆ ಮಾಡಿದರೂ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಕ್ಯಾರೆ ಎನ್ನುತ್ತಿಲ್ಲ ಹೀಗಾಗಿ ಜನ ಬೋರ್‌ವೆಲ್‌ ಕುಡಿಯುವಂತಾಗಿದೆ ಎಂದು ಗೋನಾಳ, ನಾಯಕ ತಮ್ಮ ಅಳಲು ತೋಡಿಕೊಂಡರು.

ಯೋಜನೆಯನ್ನು ತನಿಖೆಗೆ ಒಳಪಡಿಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ದ ಸೂಕ್ತ ಕ್ರಮ ತೆಗೆದುಕೊಳ್ಳಬೇಕು, ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕು ಎಂದು ಅವರು ಒತ್ತಾಯಿಸಿದರು.

ಮನವಿ ಪತ್ರ ಸ್ವೀಕರಿಸಿದ ಸಚಿವ ಕೃಷ್ಣೆ ಬೈರೆಗೌಡ ಮಾತನಾಡಿ, ಅಧಿವೇಶನ ಮುಗಿದ ನಂತರ ಜಿಲ್ಲೆಗೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಲಾಗುವುದು, ಅಧಿಕಾರಿ ಹಾಗೂ ಗುತ್ತಿಗೆದಾರರ ವಿರುದ್ದ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು. ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ರಾಜಶೇಖರ ಹಿಟ್ನಾಳ, ಸದಸ್ಯ ವಿಶ್ವನಾಥರಡ್ಡಿ ಹೊಸಮನಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !