ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎದೆಹಾಲುಣಿಸಿದರೆ ಸೌಂದರ್ಯ ಕುಂದುವುದಿಲ್ಲ: ವೈದ್ಯಾಧಿಕಾರಿ ಸಿ.ಎಂ. ಹಿರೇಮಠ

Published 7 ಆಗಸ್ಟ್ 2023, 14:22 IST
Last Updated 7 ಆಗಸ್ಟ್ 2023, 14:22 IST
ಅಕ್ಷರ ಗಾತ್ರ

ಕುಕನೂರು: ಮಗುವಿಗೆ ಎದೆಹಾಲುಣಿಸಿದರೆ ತಾಯಿಯ ಸೌಂದರ್ಯ ಹಾಳಾಗುವುದಿಲ್ಲ ಎಂದು ವೈದ್ಯಾಧಿಕಾರಿ ಸಿ.ಎಂ. ಹಿರೇಮಠ ತಿಳಿಸಿದರು.

ತಾಲ್ಲೂಕಿನ ಮಂಗಳೂರು ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ಇಲಾಖೆ ವತಿಯಿಂದ ನಡೆದ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ವಿಜ್ಞಾನ ಸಾಕಷ್ಟು ಮುಂದುವರಿದಿದ್ದರೂ ಎದೆಹಾಲನ್ನು ಕೃತಕವಾಗಿ ಸೃಷ್ಟಿಸಲು ಸಾಧ್ಯವಿಲ್ಲ. ಎದೆ ಹಾಲಿನಲ್ಲಿರುವ ಪೌಷ್ಟಿಕಾಂಶವು ಮಗುವಿಗೆ ದೊರಕಿದರೆ ಮಗು ಆರೋಗ್ಯವಾಗಿ ಬೆಳೆಯುತ್ತದೆ. ಎದೆಹಾಲು ಅಮೃತಕ್ಕೆ ಸಮಾನ ಎಂದು ಹೇಳಿದರು.

ತಾಯಂದಿರು ಮಗುವಿಗೆ ಎದೆಹಾಲುಣಿಸಿದರೆ, ಸೌಂದರ್ಯ ಹಾಳಾಗುತ್ತದೆ ಎಂಬ ತಪ್ಪುಕಲ್ಪನೆಯಿದೆ. ನಂತರದ ವರ್ಷಗಳಲ್ಲಿ ಎದೆ ಹಾಲಿನ ಮಹತ್ವ ಅರಿತುಕೊಂಡ ತಾಯಂದಿರು ಮಗುವಿಗೆ ಎದೆ ಹಾಲುಣಿಸುತ್ತಿದ್ದಾರೆ. ತಾಯಿಯು ಮಗುವಿಗೆ ಎದೆಹಾಲುಣಿಸುವುದರಿಂದ ಮಗುವಿನ  ರೋಗ ನಿರೋಧಕ ಶಕ್ತಿ, ಭೌತಿಕ ಬೆಳವಣಿಗೆ ಆಗಲಿದೆ. ಸ್ಪರ್ಶ ಸುಖ ಅನುಭವಿಸುವ ತಾಯಿ-ಮಗುವಿನ ಬಾಂಧವ್ಯ ಇನ್ನಷ್ಟು ವೃದ್ಧಿಯಾಗಲಿದೆ’ ಎಂದರು.

ದಂತ ವೈದ್ಯಾಧಿಕಾರಿ ಡಾ. ಅಭಿಷೇಕ, ಡಾ. ಚಂದ್ರಕಾಂತ, ರೇಣುಕಾ ದೇಸಾಯಿ, ಸುಮಾ ಅಂಗಡಿ, ಜ್ಯೋತಿ, ಮಾರುತಿ, ಲಕ್ಷ್ಮಣ ಗಂಟಿ, ಪ್ರವೀಣ, ಗೀತಾ ಅರಳಿಕಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT