ಮಂಗಳವಾರ, ಮೇ 24, 2022
26 °C

‘ಯೋಗದಿಂದ ಮಾನಸಿಕ ಸದೃಢತೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಳವಂಡಿ: ‘ಯೋಗ ಮಾಡುವುದರಿಂದ ಮನಸ್ಸು ಉಲ್ಲಾಸ ಹಾಗೂ ಉತ್ಸಾಹದಿಂದ ಇರಲಿದೆ. ಆದ್ದರಿಂದ ಮಕ್ಕಳಿಗೆ ಯೋಗ ಹಾಗೂ ಧ್ಯಾನದ ಕುರಿತು ಮಾಹಿತಿ ಹಾಗೂ ತರಬೇತಿ ನೀಡಲಾಗುತ್ತಿದೆ’ ಎಂದು ಮುಖ್ಯಶಿಕ್ಷಕ ಗುರುರಾಜ ಪಾಟೀಲ ತಿಳಿಸಿದರು.

ಸಮೀಪದ ನಿಲೋಗಿಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಯೋಗ, ಧ್ಯಾನ ಹಾಗೂ ಕವಾಯತು ಕಾರ್ಯಕ್ರಮದಲ್ಲಿ ಮಾತನಾಡಿದರು.

ಯೋಗದ ಅಭ್ಯಾಸ ಬೆಳೆಸಿಕೊಂಡರೆ ಆರೋಗ್ಯ ಉತ್ತಮವಾಗಿಟ್ಟುಕೊಳ್ಳಬಹುದು. ಪ್ರತಿದಿನ ಯೋಗ ಮಾಡುವುದರಿಂದ ರೋಗಗಳನ್ನು ದೂರ ಇಡಬಹುದು ಎಂದರು.

ಶಿಕ್ಷಕರಾದ ವೆಂಕರಡ್ಡಿ ನಾಗರಳ್ಳಿ ಮಕ್ಕಳಿಗೆ ಸ್ವಚ್ಛತೆ, ಪೌಷ್ಟಿಕ ಆಹಾರ, ಕೊರೊನಾ, ದೈಹಿಕ ಅಂತರ ಕಾಪಾಡಿಕೊಳ್ಳುವಿಕೆ, ಸ್ಯಾನಿಟೈಸರ್ ಬಳಕೆ ಕುರಿತು ಮಾಹಿತಿ ನೀಡಿದರು.

ಶಿಕ್ಷಕರಾದ ಸಂಗಪ್ಪ ರಾಟಿ, ಮಂಜುನಾಥ ತಗಡಿನಮನಿ, ಚನ್ನಪ್ಪ ಕುರಿಗಾರ, ನಾಗಪ್ಪ ಶಿರನಹಳ್ಳಿ, ಮುತ್ತು ಬನ್ನಿಕೊಪ್ಪ, ಅತಿಥಿ ಶಿಕ್ಷಕಿ ಚೈತ್ರ ರಡ್ದೆರ, ಪ್ರಶಿಕ್ಷಣಾರ್ಥಿ ಜರೀನಾ ಬೇಗಂ, ರಾಕೇಶ ಹಾಗೂ ಮಕ್ಕಳು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು