ಶುಕ್ರವಾರ, ನವೆಂಬರ್ 22, 2019
22 °C

ಡಿಕೆಶಿ ಕಾರ್ಯಕ್ರಮ: ಡಿಜೆ ವಾಹನಕ್ಕೆ ದಂಡ

Published:
Updated:
Prajavani

ಮದ್ದೂರು: ಶಾಸಕ ಡಿ.ಕೆ.ಶಿವಕುಮಾರ್ ಪಟ್ಟಣಕ್ಕೆ ಬಂದು ಗ್ರಾಮದೇವತೆ ಮದ್ದೂರಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಕಾರ್ಯಕ್ರಮಕ್ಕೆ ಸಂಬಂಧಪಟ್ಟಂತೆ ಸಾರ್ವಜನಿಕವಾಗಿ ಮೈಸೂರು ಬೆಂಗಳೂರು ಹೆದ್ದಾರಿಯಲ್ಲಿ ಹಾಗೂ ಪಟ್ಟಣದಲ್ಲಿ ಅವರು ಬರುವುದಕ್ಕೂ ಮುನ್ನ ಪ್ರಚಾರಕ್ಕಾಗಿ ಭಾರಿ ಧ್ವನಿವರ್ಧಕವನ್ನು ಹಾಕಿಕೊಂಡು ಹೋಗುತ್ತಿದ್ದ ವಾಹನವನ್ನು ಪೊಲೀಸರು ವಶಪಡಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಿದರು.

ಇಲ್ಲಿನ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ  ಆದಿಲ್ ಕಲಾಲ್ ಅವರು ಧ್ವನಿವರ್ಧಕ ವಾಹನದ ಸವಾರ ತಾಲ್ಲೂಕಿನ ಚಾಮನಹಳ್ಳಿ ಗ್ರಾಮದ ವಿಷ್ಣು ಎಂಬಾತನಿಗೆ ₹ 500ದಂಡ ವಿಧಿಸಿದ್ದಾರೆ.

ಪ್ರತಿಕ್ರಿಯಿಸಿ (+)