ರಾಜಮುಡಿಯ ಐತಿಹಾಸಿಕ ಮಹತ್ವವನ್ನು ಗುರುತಿಸಿರುವ ತಮಿಳುನಾಡು ಸರ್ಕಾರ ರಾಜಮುಡಿ ಉತ್ಸವದ ದಿವಸ ಚೆಲುವನಾರಾಯಣಸ್ವಾಮಿಗೆ ವಸ್ತ್ರಗಳು ಪೂಜಾ ಸಾಮಗ್ರಿಗಳನ್ನು ನೀಡಲಿದೆ. ಪ್ರತಿ ವರ್ಷ ಇದು ನಡೆಯುತ್ತಿದೆ. ಈ ವರ್ಷ ರಾಜಮುಡಿಯ ದಿವಸ ತಮಿಳುನಾಡಿನ ಧಾರ್ಮಿಕ ದತ್ತಿ ಮತ್ತು ಪ್ರವಾಸೋದ್ಯಮ ಇಲಾಖೆಯ ಕಾಂಚಿಪುರಂ ವಿಭಾಗದ ಜಂಟಿ ಆಯುಕ್ತರು ಪೆರೆಂಬೂದೂರು ರಾಮಾನುಜರ ದೇಗುಲದ ಅಧಿಕಾರಿಗಳು ಅರ್ಚಕರು ಹಾಗೂ ಇತರ ಗಣ್ಯರು ವಿದ್ವಾಂಸ ಚಕ್ರಪಾಣಿಯೊಂದಿಗೆ ಆಗಮಿಸಿ ಸರ್ಕಾರದ ಪರವಾಗಿ ಗೌರವ ಸಮರ್ಪಿಸಲಿದ್ದಾರೆ.