ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡಿನ ನಡುವಿನ ಮತಗಟ್ಟೆಗೆ ಜಿಲ್ಲಾಧಿಕಾರಿ ಭೇಟಿ

Published 18 ಏಪ್ರಿಲ್ 2024, 14:34 IST
Last Updated 18 ಏಪ್ರಿಲ್ 2024, 14:34 IST
ಅಕ್ಷರ ಗಾತ್ರ

ಹಲಗೂರು: ಕಾಡಿನ ಮಧ್ಯೆ ಇರುವ ಮುತ್ತತ್ತಿ ಮತ್ತು ಬಸವನಹಳ್ಳಿ ಗ್ರಾಮದ ಮತಗಟ್ಟೆ ಕೇಂದ್ರಗಳಿಗೆ ಮಂಡ್ಯ ಜಿಲ್ಲಾಧಿಕಾರಿ ಕುಮಾರ ಭೇಟಿ ನೀಡಿ, ಮತದಾನಕ್ಕೆ ಏರ್ಪಡಿಸಿರುವ ಸಿದ್ಧತೆ ಪರಿಶೀಲನೆ ನಡೆಸಿದರು.

‘ಮುತ್ತತ್ತಿ ಮತ್ತು ಬಸವನಹಳ್ಳಿ ಗ್ರಾಮಗಳು ಕಾವೇರಿ ಕಾಡಿನ ಮಧ್ಯೆ ಇರುವುದರಿಂದ ಕಮ್ಯೂನಿಕೇಷನ್ ಶ್ಯಾಡೋ ಮತಗಟ್ಟೆಗಳಾಗಿವೆ. ಗ್ರಾಮವು ದೂರವಾಣಿ ಇತರೆ ಸಂಪರ್ಕ ಪಡೆಯಲು ಕಷ್ಟಕರವಾಗಿದ್ದು,  ಚುನಾವಣೆಯನ್ನು ಸುಗಮವಾಗಿ ನಡೆಸುವ ನಿಟ್ಟಿನಲ್ಲಿ ಚುನಾವಣಾ ಆಯೋಗದ ಮಾರ್ಗಸೂಚಿ ಅನ್ವಯ ಈ ಮತಗಟ್ಟೆಗಳಿಗೆ ಬೇಕಾದ ಮೈಕ್ರೋ ಅಬ್ಸರ್ವರ್, ಹಾಗೂ ವಿಡಿಯೊ ಗ್ರಾಫರ್, ಮತ್ತು ಕೇಂದ್ರ ಮೀಸಲು ಶಸ್ತ್ರಾಸ್ತ್ರ ಪಡೆ ಸಿಬ್ಬಂದಿ ನಿಯೋಜನೆ ಮಾಡಲು ಸಿದ್ಧತೆ ಮಾಡಿಕೊಳ್ಳಲು’ ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಶೇಖ್‌ ತನ್ವೀರ್ ಆಸೀಫ್, ಹಲಗೂರು ಸರ್ಕಲ್ ಇನ್ಸ್‌ಪೆಕ್ಟರ್ ಬಿ.ಎಸ್.ಶ್ರೀಧರ್  ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT