ಭಾರತೀನಗರ: ಸಮೀಪದ ಬಿದರಹಳ್ಳಿ ಬಳಿ ವಿ.ಸಿ.ನಾಲೆಯಲ್ಲಿ ಅಪರಿಚಿತ ಶವ ತೇಲಿ ಬಂದಿದೆ. ಶವವನ್ನು ಕಂಡ ಸ್ಥಳೀಯರು ನಾಲೆಯಿಂದ ಮೇಲೆತ್ತಿ ಹಾಕಿ ನಂತರ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಕೆ.ಎಂ.ದೊಡ್ಡಿ ಠಾಣೆ ಪಿಐ ಆನಂದ್ ಹಾಗೂ ಸಿಬ್ಬಂದಿ ಸ್ಥಳ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. 45 ರಿಂದ 50 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದ್ದು ದುಂಡು ಮುಖ ಕಾಫಿ ಕಲರ್ ಚೆಕ್ಸ್ ಷರಟ್ ಸ್ಯಾಂಡ್ ಬನಿಯನ್ ಕಪ್ಪು ಬಣ್ಣದ ನಿಕ್ಕರ್ ಕಪ್ಪು ಉಡುದಾರ ಕಪ್ಪು ಬಣ್ಣದ ದಾರದ ತಾಯತ ಸೊಂಟದ ಬಳಿಯಲ್ಲೂ ತಾಯತ ಧರಿಸಿದ್ಧಾನೆ. ಹಣೆಯ ಮೇಲೆ ದಪ್ಪ ಕಪ್ಪು ಕಾರೆಹಳ್ಳುಇದೆ. ಶವವನ್ನು ಮಂಡ್ಯ ಮಿಮ್ಸ್ ಶವಾಗಾರದಲ್ಲಿರಿಸಲಾಗಿದೆ. ಈತನ ಬಗ್ಗೆ ಸುಳಿವು ಸಿಕ್ಕವರು ಕೆ.ಎಂ.ದೊಡ್ಡಿ ಪೊಲೀಸ್ ಠಾಣೆ ಸಂಪರ್ಕಿಸಲು ಕೋರಲಾಗಿದೆ.