ಒಂದೂವರೆ ಎಕರೆಯಲ್ಲಿ ಶುಂಠಿ ಬೆಳೆದಿದ್ದೇವೆ. ಕಟಾವಿಗೆ ಬರುವ ಸಂದರ್ಭ ಬೆಳೆಯು ಬೆಂಕಿ ರೋಗಕ್ಕೆ ತುತ್ತಾಗಿದೆ. ಸಾಲ ಮಾಡಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದೇವೆ. ಔಷಧ ಸಿಂಪಡಿಸಿದರೂ ಪ್ರಯೋಜನವಾಗಿಲ್ಲ. ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಸಮಸ್ಯೆ ಪರಿಹರಿಸಬೇಕು
– ಮರೀಶ Gowda, ಶ್ಯಾರಹಳ್ಳಿ
ಪರಿಶೀಲಿಸಿ ಸೂಕ್ತ ಔಷಧ’ ಒಬ್ಬ ರೈತ ಒಂದು ಬೆಳೆ ಮಾಡಿದರೆ, ಎಲ್ಲ ರೈತರು ಅದೇ ಬೆಳೆಯನ್ನು ಬೆಳೆಯುತ್ತಾರೆ. ಅದು ಬೆಲೆ ಕುಸಿತಕ್ಕೂ ಕಾರಣವಾಗಿದೆ. ರೈತರು ಪರ್ಯಾಯ ಬೆಳೆಗಳ ಕಡೆ ಗಮನಹರಿಸಬೇಕು. ಶುಂಠಿ ಬೆಳೆದಿರುವ ರೈತರು ದೂರವಾಣಿ ಮೂಲಕ ಸಮಸ್ಯೆ ತಿಳಿಸಿದರೆ, ರೈತರ ಜಮೀನುಗಳಿಗೆ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಭೇಟಿ ನೀಡುತ್ತಾರೆ. ಶುಂಠಿ ಬೆಳೆ ಪರಿಶೀಲಿಸಿ ಸೂಕ್ತ ಔಷಧ ಶಿಫಾರಸು ಮಾಡುತ್ತೇವೆ. ಹೆಚ್ಚಿನ ರೈತರು ನಮ್ಮನ್ನು ಸಂಪರ್ಕಿಸಿದರೆ ತರಬೇತಿ ಸಹ ಆಯೋಜನೆ ಮಾಡುತ್ತೇವೆ.