ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮುಂಡುಗದೊರೆ ಪಂಚಾಯಿತಿಗೆ ಸೋಮಣ್ಣ ಅಧ್ಯಕ್ಷ

Published 13 ಜೂನ್ 2024, 14:46 IST
Last Updated 13 ಜೂನ್ 2024, 14:46 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ತಾಲ್ಲೂಕಿನ ಮುಂಡುಗದೊರೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಕಾಂಗ್ರೆಸ್‌ ಬೆಂಬಲಿತ ಎಂ.ಎಂ. ಸೋಮಣ್ಣ ಗುರುವಾರ ಅವಿರೋಧವಾಗಿ ಆಯ್ಕೆಯಾದರು.

 ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಸೋಮಣ್ಣ  ಮಾತ್ರ ನಾಮಪತ್ರ ಸಲ್ಲಿಸದ್ದು,   ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಜಿಲ್ಲಾ ಪಂಚಾಯಿತಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ರಾಮಕೃಷ್ಣೇಗೌಡ ಪ್ರಕಟಿಸಿದರು. ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ವೇಳೆ 18  ಸದಸ್ಯರ ಪೈಕಿ 13 ಮಂದಿ ಹಾಜರಿದ್ದರು. 

‘  ಗ್ರಾಮಗಳಿಗೆ ಶುದ್ಧ ಹಾಗೂ ಸಮರ್ಪಕ ಕುಡಿಯುವ ನೀರು ಪೂರೈಕೆ, ಸ್ವಚ್ಛತೆಗೆ ಆದ್ಯತೆ ನೀಡಲಾಗುವುದು. ಪಂಚಾಯಿತಿ,  ಶಾಸಕರು, ವಿಧಾನ ಪರಿಷತ್‌ ಸದಸ್ಯರ ಅನುದಾನ ಮತ್ತು  ಇತರ ಹಣಕಾಸು ಬಳಸಿಕೊಂಡು ಅಭಿವೃದ್ಧಿ ಕಾರ್ಯ  ಕೈಗೊಳ್ಳಲಾಗುವುದು’ ಎಂದು  ಸೋಮಣ್ಣ ತಿಳಿಸಿದರು.

  ಉಪಾಧ್ಯಕ್ಷೆ ಪಿ. ಸುಗುಣ, ಸದಸ್ಯರಾದ ಬಿ.ಎನ್‌. ಗಾಯತ್ರಿ, ಬಿ. ಚುಂಚಶೆಟ್ಟಿ, ಡಿ. ಧನಂಜಯ, ಡಿ.ಕೆ. ನಾಗರಾಜು, ಪದ್ಮಾ ಸೋಮೇಶ್‌, ಸುನಂದಾ, ಮಹಾಲಕ್ಷ್ಮಿ, ವಿ.ಟಿ. ಗೋವಿಂದರಾಜು, ಜಿ.ಕೆ. ರಘುರಾಜ್‌, ಭವ್ಯಾ ಮತ್ತು ಕಾಂಗ್ರೆಸ್ ಮುಖಂಡರು ಸೋಮಣ್ಣ ಅವರನ್ನು ಅಭಿನಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT