ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದ್ದೂರು: ದೇವಾಲಯಕ್ಕೆ ಹಸಿರು ಆವರಣ; 150ಕ್ಕೂ ಹೆಚ್ಚು ಗಿಡ ಬೆಳೆಸಿದ ಜೈಶಂಕರ್

Published 9 ಡಿಸೆಂಬರ್ 2023, 7:26 IST
Last Updated 9 ಡಿಸೆಂಬರ್ 2023, 7:26 IST
ಅಕ್ಷರ ಗಾತ್ರ

ಮದ್ದೂರು: ದೇವಸ್ಥಾನಕ್ಕೆ ಬರುವ ಭಕ್ತರು ಬಿಸಿಲಿನಿಂದ ಪರಿತಪಿಸುವುದನ್ನು ತಪ್ಪಿಸಲು ದೇವಸ್ಥಾನದ ಆವರಣದಲ್ಲಿ 150ಕ್ಕೂ ಹೆಚ್ಚು ಸಸಿಗಳನ್ನು ನೆಟ್ಟು ಬೆಳೆಸುವುದರ ಮೂಲಕ ತಾಲ್ಲೂಕಿನ ಹೆಮ್ಮನಹಳ್ಳಿಯಲ್ಲಿ ಜೈಶಂಕರ್ ಪರಿಸರ ಕಾಳಜಿ ಮೆರೆದಿದ್ದಾರೆ.

ಹೆಮ್ಮನಹಳ್ಳಿ ಗ್ರಾಮದ ಮಾಸ್ತಮ್ಮ ದೇವಸ್ಥಾನದ ಅಭಿವೃದ್ಧಿ ಸೇವಾ ಸಮಿತಿಯ ಕಾರ್ಯದರ್ಶಿಯೂ ಆಗಿರುವ ಅವರು, ದೇವಸ್ಥಾನಕ್ಕೆ ಸೇರಿದ ಸುಮಾರು ಒಂದೂ ಕಾಲು ಎಕರೆ ಪ್ರದೇಶದಲ್ಲಿ 9 ವರ್ಷಗಳ ಹಿಂದೆ ನೆಟ್ಟಿದ್ದ ಸಸಿಗಳು ಈಗ ಮರಗಳಾಗಿ ದೇವಸ್ಥಾನಕ್ಕೆ ಬರುವ ಭಕ್ತಾದಿಗಳಿಗೆ ತಂಪು ನೀಡುತ್ತಿವೆ.

ಸಾರಿಗೆ ಸಂಸ್ಥೆಯಲ್ಲಿ ಬಸ್ ಕಂಡಕ್ಟರ್ ಆಗಿದ್ದ ಅವರು, 2014ರಲ್ಲಿ ನಿವೃತ್ತರಾದ ಬಳಿಕ ತಮ್ಮ ಗ್ರಾಮದ ಮಾಸ್ತಮ್ಮ ದೇವಸ್ಥಾನಕ್ಕೆ ವಾರದಲ್ಲಿ ಎರಡು ದಿನ (ಗುರುವಾರ ಹಾಗೂ ಭಾನುವಾರ) ಪೂಜೆಗೆ ಹಲವು ಗ್ರಾಮಗಳಿಂದ ಬರುವ ಭಕ್ತರು ಸೂಕ್ತ ನೆರಳಿಲ್ಲದೆ ಪರಿತಪಿಸುವುದನ್ನು ಕಂಡು ದೇವಸ್ಥಾನ ಸುತ್ತ ಹೊಂಗೆ, ಹಿಪ್ಪು, ಬೇವು, ಹುಣಸೆ, ಸಂಪಿಗೆ ಸೇರಿದಂತೆ ಹಲವು ಪ್ರಭೇದದ ಗಿಡಗಳನ್ನು ನೆಟ್ಟು ಅವುಗಳಿಗೆ ನೀರು ಹಾಕಿ ಆರೈಕೆ ಮಾಡಿದ್ದಾರೆ.

ನಂತರ ದೇವಸ್ಥಾನದ ಅಭಿವೃದ್ಧಿ ಸೇವಾ ಸಮಿತಿಯನ್ನು ರಚನೆ ಮಾಡಿ ಆ ಸಮಿತಿಯ ಮೂಲಕ ದೇವಸ್ಥಾನಕ್ಕೆ ಬರುವ ಭಕ್ತಾದಿಗಳಿಗೆ ಅನುಕೂಲವಾಗಲು ಸ್ನಾನದ ಮನೆ, ತಂಗು ಮನೆ ನಿರ್ಮಾಣ, ಶುದ್ಧ ಕುಡಿಯುವ ನೀರಿನ ಘಟಕ, ಮರಗಳ ಬಳಿ ಕುಳಿತುಕೊಳ್ಳಲು ಸಿಮೆಂಟ್ ಹಾಗೂ ಕಲ್ಲು ಚಪ್ಪಡಿಗಳನ್ನು ಹಾಕಿಸಿ ಅನುಕೂಲ ಕಲ್ಪಿಸಿದ್ದಾರೆ.

ಜೈಶಂಕರ್ ಅವರ ಈ ಪರಿಸರ ಹಾಗೂ ಸಾಮಾಜಿಕ ಕಾಳಜಿಗೆ ಗ್ರಾಮದ ಜನರು ಹಾಗೂ ಮಾಸ್ತಮ್ಮ ದೇವಸ್ಥಾನಕ್ಕೆ ಬರುವ ಭಕ್ತಾದಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮಾಸ್ತಮ್ಮ ದೇವಿ ದರ್ಶನಕ್ಕೆ ಬರುತ್ತಿದ್ದ ಭಕ್ತಾದಿಗಳು ಬಿಸಿಲಲ್ಲಿ ಆಯಾಸ ಪಡುತ್ತಿದ್ದರು. ಅವರ ಕಷ್ಟ ನೋಡಲಾದರೆ ನೆರಳಿಗಾಗಿ ಗಿಡಗಳನ್ನು ನೆಟ್ಟು ಮಕ್ಕಳಂತೆ ಬೆಳೆಸಿದ್ದೇನೆ.
ಜೈ ಶಂಕರ್, ದೇವಸ್ಥಾನ ಅಭಿವೃದ್ಧಿ ಸಮಿತಿ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT