ಜೇನುಗಳ ಅನಿರೀಕ್ಷಿತ ದಾಳಿಯಿಂದ, ಶವ ಸಂಸ್ಕಾರಕ್ಕೆ ಬಂದಿದ್ದ ನೂರಾರು ಮಂದಿ ದಿಕ್ಕಾಪಾಲಾಗಿ ಓಡಿದ್ದಾರೆ. ಹೆಜ್ಜೇನು ದಾಳಿಯಿಂದ ತಪ್ಪಿಸಿಕೊಳ್ಳಲು ಶವವನ್ನು ಸ್ಥಳದಲ್ಲೇ ಬಿಟ್ಟು ಓಡಿಹೋಗಿದ್ದಾರೆ. ಇದರಿಂದಾಗಿ, ಮಧ್ಯಾಹ್ನ 12ರಿಂದ ಸಂಜೆ 5.30ರವರೆಗೆ ಉಂತೂರಮ್ಮ ದೇವಾಲಯದ ಬಳಿ ದೊಳ್ಳಯ್ಯ ಅವರ ಶವ ಅನಾಥವಾಗಿ ಬಿದ್ದಿತ್ತು.