ಸಮ್ಮೇಳನದ ಯಶಸ್ಸಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅಧ್ಯಕ್ಷ ಗೊ.ರು.ಚನ್ನಬಸಪ್ಪ ಅವರು ‘ಪೊಲೀಸರು ಯಾವುದೇ ಸಮಸ್ಯೆ ಆಗದಂತೆ ಕೆಲಸ ಮಾಡಿದ್ದಾರೆ. ನಾನು ಮೂರು ದಿನ ಅವರ ವಶದಲ್ಲೇ ಇದ್ದೆ’ ಎಂದು ಹಾಸ್ಯ ಚಟಾಕಿ ಹಾರಿಸಿದರು. ಸಾಹಿತ್ಯ ಸಮ್ಮೇಳನಗಳಲ್ಲಿ ಸಾಮಾನ್ಯವಾಗಿ ಊಟ ಮತ್ತು ವಸತಿಯ ಬಗ್ಗೆ ದೂರುಗಳು ಕೇಳಿಬರುವುದುಂಟು. ಈ ಸಮ್ಮೇಳನದಲ್ಲಿ ಅಂಥ ಸಮಸ್ಯೆ ಆಗಲಿಲ್ಲ ಎಂದ ಅವರು ಸಾಹಿತ್ಯ ಮತ್ತು ಸಂಸ್ಕೃತಿಯ ಸಂಗಮ ಆಗಬೇಕಾದದ್ದು ಇಂದಿನ ಅಗತ್ಯ ಎಂದರು.