ಬುಧವಾರ, ಜನವರಿ 22, 2020
19 °C

ಕೆಆರ್ ಪೇಟೆ | ಜೆಡಿಎಸ್ ಭದ್ರಕೋಟೆ ಭಗ್ನ; ಮಂಡ್ಯದಲ್ಲಿ ಮೊದಲ ಸಲ ಅರಳಿದ ಕಮಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆಆರ್‌ ಪೇಟೆ: ಜೆಡಿಎಸ್‌ ಪ್ರಾಬಲ್ಯ ಇರುವ ಹಾಗೂ ಮಂಡ್ಯ ಲೋಕಸಭೆ ಕ್ಷೇತ್ರದ ವ್ಯಾಪ್ತಿಗೆ ಬರುವ ಕೆ.ಆರ್. ಪೇಟೆ ವಿಧಾನಸಭೆ ಉಪಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ‘ಕಮಲ’ ಅರಳಿದೆ. ಬಿಜೆಪಿ ಅಭ್ಯರ್ಥಿ ನಾರಾಯಣಗೌಡ, 9,728 ಮತಗಳ ಅಂತರದಿಂದ ಗೆಲವು ಸಾಧಿಸಿದ್ದಾರೆ.

2018ರ ವಿಧಾನಸಭೆ ಚುಣಾವಣೆಯಲ್ಲಿ ಜೆಡಿಎಸ್‌ ಹುರಿಯಾಳು ಆಗಿದ್ದ ನಾರಾಯಣಗೌಡ, ಈ ಬಾರಿ ಬಿಜೆಪಿಯಿಂದ ಸ್ಪರ್ಧಿಸಿದ್ದರು. ತ್ರಿಕೋನ ಸ್ಪರ್ಧೆಯ ನಿರೀಕ್ಷೆ ಹುಟ್ಟಿಸಿದ್ದ ಈ ಕ್ಷೇತ್ರದ ಮತ ಎಣಿಕ ಆರಂಭದಿಂದಲೂ ನಾರಾಯಣಗೌಡ ಹಾಗೂ ಜೆಡಿಎಸ್‌ ಅಭ್ಯರ್ಥಿ ಬಿ.ಎಲ್.ದೇವರಾಜು ನಡುವೆ ಜಿದ್ದಾಜಿದ್ದಿ ಕಂಡು ಬಂದಿತ್ತು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು