ಮಂಗಳವಾರ, ಆಗಸ್ಟ್ 20, 2019
27 °C

ನಾಲೆಗಳಿಗೆ ಕೆಆರ್‌ಎಸ್‌ ನೀರು ಬಿಡುಗಡೆ

Published:
Updated:

ಮಂಡ್ಯ: ಬೆಳೆದು ನಿಂತಿರುವ ಬೆಳೆಗಳ ಉಳಿವಿಗಾಗಿ ಕಾವೇರಿ ನೀರಾವರಿ ನಿಗಮ ಕೆಆರ್‌ಎಸ್‌ ಜಲಾಶಯದಿಂದ ನಾಲೆಗಳಿಗೆ ಮಂಗಳವಾರ ಮಧ್ಯರಾತ್ರಿಯಿಂದ 2,908 ಕ್ಯುಸೆಕ್‌ ನೀರು ಹರಿಸುತ್ತಿದೆ.

ಕಬ್ಬು, ಭತ್ತ ಒಣಗುತ್ತಿರುವ ಕಾರಣ ಒಂದು ಕಟ್ಟು ನೀರು ಹರಿಸುವಂತೆ ರೈತರು ಜಿಲ್ಲೆಯಾದ್ಯಂತ ಪ್ರತಿಭಟನೆ ನಡೆಸುತ್ತಿದ್ದರು. ರೈತರ ಒತ್ತಡಕ್ಕೆ ಮಣಿದ ಸರ್ಕಾರ ಕಾವೇರಿ ಸಲಹಾ ಸಮಿತಿ ಸಭೆ ನಡೆಸಿ ನಾಲೆಗಳಿಗೆ ನೀರು ಹರಿಸುವ ನಿರ್ಧಾರ ಕೈಗೊಂಡಿತ್ತು. ಅದರಂತೆ ಮಂಗಳವಾರ ಮಧ್ಯರಾತ್ರಿಯಿಂದ ನಾಲೆಗಳಿಗೆ ನೀರು ಹರಿಯುತ್ತಿದೆ.

‘ರೈತರ ಬೆಳೆಗೆ ಅವಶ್ಯವಿರುವಷ್ಟು ನೀರು ಹರಿಸಲಾಗುವುದು. ಬೇಡಿಕೆ ನೋಡಿಕೊಂಡು ನೀರಿನ ಹರಿವನ್ನು ಹೆಚ್ಚಳ ಮಾಡಲಾಗುವುದು. ರೈತರು ನೀರು ಪೋಲು ಮಾಡದೇ ಸದುಪಯೋಗ ಮಾಡಿಕೊಳ್ಳಬೇಕು. ತಮಿಳುನಾಡಿನ ಪಾಲಿನ ನೀರು ಹರಿಸಲು ನದಿ ನೀರು ನಿಯಂತ್ರಣ ಪ್ರಾಧಿಕಾರದಿಂದ ಸೂಚನೆ ಬಂದಿಲ್ಲ’ ಎಂದು ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಎಂಜಿನಿಯರ್‌ ರಾಮಕೃಷ್ಣ ತಿಳಿಸಿದರು.

Post Comments (+)