ಮಳವಳ್ಳಿಯಲ್ಲಿ ಮನೆಗೆ ನುಗ್ಗಿದ ಬಸ್‌: ವ್ಯಕ್ತಿ ಸಾವು, ನಾಲ್ವರಿಗೆ ಗಾಯ

7

ಮಳವಳ್ಳಿಯಲ್ಲಿ ಮನೆಗೆ ನುಗ್ಗಿದ ಬಸ್‌: ವ್ಯಕ್ತಿ ಸಾವು, ನಾಲ್ವರಿಗೆ ಗಾಯ

Published:
Updated:

ಮಂಡ್ಯ: ಮಳವಳ್ಳಿ ಪಟ್ಟಣ, ಕೊಳ್ಳೆಗಾಲ ರಸ್ತೆಯಲ್ಲಿ ಸೋಮವಾರ ಬೆಳಿಗ್ಗೆ ಪಾದಾಚಾರಿಗೆ ಡಿಕ್ಕಿ ಹೊಡೆದ ಸಾರಿಗೆ ಬಸ್‌ ನಂತರ ಮನೆಯೊಂದಕ್ಕೆ ನುಗ್ಗಿದೆ. ಘಟನೆಯಲ್ಲಿ ಪಾದಾಚಾರಿ ಮೃತಪಟ್ಟಿದ್ದು ನಾಲ್ವರು ಗಾಯಗೊಂಡಿದ್ದಾರೆ.

ಜಲಮಂಡಳಿ ನೌಕರ ಮಾದೇಶ (48) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮನೆಯಲ್ಲಿದ್ದ ಸರ್ವಮಂಗಳಾ, ನಾಗರತ್ನಾ ಹಾಗೂ ಬಸ್‌ನಲ್ಲಿದ್ದ ಪ್ರಯಾಣಿಕರಾದ ಶ್ರುತಿ, ಮಹಾದೇವಮ್ಮ ಗಾಯಗೊಂಡಿದ್ದಾರೆ. ಪಾದಾಚಾರಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಚಾಲಕ ಯತ್ನಿಸಿದ್ದಾರೆ. ಆದರೆ ಬಸ್‌ ಪಾದಾಚಾರಿಗೆ ಡಿಕ್ಕಿ ಹೊಡೆದು ರಸ್ತೆ ಬದಿಯ ವಿದ್ಯುತ್‌ ಕಂಬಕ್ಕೆ ಗುದ್ದಿದೆ. ನಂತರ ಮನೆಗೆ ನುಗ್ಗಿದೆ. ನೇರವಾಗಿ ಮನೆಗೆ ನುಗ್ಗಿದ್ದರೆ ಹೆಚ್ಚಿನ ಅಪಾಯ ಸಂಭವಿಸುತ್ತಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಘಟನೆಯಿಂದ ವಿದ್ಯುತ್‌ ಕಂಬ ಮುರಿದಿದ್ದು ಮನೆಯ ಗೋಡೆ ಕುಸಿದು ಬಿದ್ದಿದೆ. ಮಳವಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

ಬರಹ ಇಷ್ಟವಾಯಿತೆ?

  • 2

    Happy
  • 0

    Amused
  • 1

    Sad
  • 0

    Frustrated
  • 3

    Angry

Comments:

0 comments

Write the first review for this !