ಮಂಡ್ಯ ಜಿಲ್ಲೆ: ನಗರಸಭೆ, ಪುರಸಭೆಗಳ ನಾಲ್ಕು ಸ್ಥಾನದಲ್ಲಿ ಬಿಜೆಪಿ ಗೆಲುವು

7

ಮಂಡ್ಯ ಜಿಲ್ಲೆ: ನಗರಸಭೆ, ಪುರಸಭೆಗಳ ನಾಲ್ಕು ಸ್ಥಾನದಲ್ಲಿ ಬಿಜೆಪಿ ಗೆಲುವು

Published:
Updated:

ಮಂಡ್ಯ: ಜಿಲ್ಲೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ನಗರಸಭೆಯ ಎರಡು ಸ್ಥಾನಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಮದ್ದೂರು, ಪಾಂಡವಪುರ ಪುರಸಭೆಯ ತಲಾ ಒಂದೊಂದು ಸ್ಥಾನದಲ್ಲಿ ಬಿಜೆಪಿ ಗೆದ್ದಿದೆ.

ನಗರಸಭೆಯ 11ನೇ ವಾರ್ಡ್‌ನಿಂದ ಸ್ಪರ್ಧಿಸಿದ್ದ ಎಂ.ಪಿ.ಅರುಣ್‌ಕುಮಾರ್‌, 24ನೇ ವಾರ್ಡ್‌ನಿಂದ ಸ್ಪರ್ಧಿಸಿದ್ದ ಚಿಕ್ಕತಾಯಮ್ಮ ಗೆಲುವು ದಾಖಲಿಸಿದ್ದಾರೆ. ಮದ್ದೂರು ಪುರಸಭೆಯ 23 ವಾರ್ಡ್‌ನಿಂದ ಸ್ಪರ್ಧಿಸಿದ್ದ ಕೆ.ಲತಾ ಜಯಗಳಿಸಿದ್ದಾರೆ. ಪಾಂಡವಪುರ ಪುರಸಭೆಯ 15ನೇ ವಾರ್ಡ್‌ನಿಂದ ಸ್ಪರ್ಧಿಸಿದ್ದ ಅಶೋಕ್‌ ಜಯ ಗಳಿಸಿದ್ದಾರೆ.

ಕಳೆದ ನಗರಸಭಾ ಚುನಾವಣೆಯಲ್ಲಿ ಒಂದು ಸ್ಥಾನದಲ್ಲಿ ಬಿಜೆಪಿ ಖಾತೆ ತೆರೆದಿತ್ತು. ಈಗ ಎರಡು ಸ್ಥಾನದಲ್ಲಿ ಜಯಗಳಿಸಿರುವುದು ಬಿಜೆಪಿ ಕಾರ್ಯಕರ್ತರಲ್ಲಿ ಹರ್ಷ ತಂದಿದೆ.

ಬರಹ ಇಷ್ಟವಾಯಿತೆ?

 • 4

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !