ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನದಿ, ನೀರು ಸಂರಕ್ಷಣೆಗೆ ಎಚ್.ಡಿ.ಕೆ ಬೆಂಬಲಿಸಿ: ಶಾಸಕ ಎಚ್.ಟಿ.ಮಂಜು ಮನವಿ

ಶಾಸಕ ಎಚ್.ಟಿ.ಮಂಜು, ಮನ್ಮುಲ್ ನಿರ್ದೇಶಕ ಡಾಲು ರವಿ  ಬಿರುಸಿನ ಪ್ರಚಾರ
Published 21 ಏಪ್ರಿಲ್ 2024, 13:00 IST
Last Updated 21 ಏಪ್ರಿಲ್ 2024, 13:00 IST
ಅಕ್ಷರ ಗಾತ್ರ

ಕೆ.ಆರ್.ಪೇಟೆ: ತಮಿಳುನಾಡಿಗೆ ನೀರು ಹರಿಸಿದ ಕಾಂಗ್ರೆಸ್ ಸರ್ಕಾರಕ್ಕೆ ಜಿಲ್ಲೆಯ ಜನ ಲೋಕಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುವಂತೆ ಶಾಸಕ ಎಚ್.ಟಿ .ಮಂಜು ಮನವಿ ಮಾಡಿದರು.‌

ತಾಲ್ಲೂಕಿನ ಬೂಕನಕೆರೆ ಹೋಬಳಿಯ ಮಾವಿನಕೆರೆ, ಪೂವನಹಳ್ಳಿ, ಕುರುಬಹಳ್ಳಿ, ಗಂಜಿಗೆರೆ ಬೂಕಹಳ್ಳಿ, ಮುದುಗೆರೆ, ಚಿಕ್ಕಗಾಡಿಗನಹಳ್ಳಿ, ಪೇಟೆ ಅರಳಕುಪ್ಪೆ, ವಿಠಲಾಪುರ, ಪಿಡಿಜಿ ಕೊಪ್ಪಲು, ಕೂಡಲಕುಪ್ಪೆ, ದೊದ್ದನಕಟ್ಟೆ, ಯಡಹಳ್ಳಿ, ಮತ್ತಘಟ್ಟ, ಬಸ್ತಿಹೊಸಕೋಟೆ, ಯರಗನಹಳ್ಳಿ, ಕಬ್ಬಲಗೆರೆಪುರ, ಕಾಶಿ ಜುರುಕನಹಳ್ಳಿ, ಮಾಚಗೋನಹಳ್ಳಿ, ದೊಡ್ಡಗಾಡಿಗನಹಳ್ಳಿ ಮತ್ತಿತರರ ಗ್ರಾಮಗಳಲ್ಲಿ ಮಂಡ್ಯ ಹಾಲು ಒಕ್ಕೂಟದ ನಿರ್ದೇಶಕ ಡಾಲು ರವಿ ಅವರೊಂದಿಗೆ ಪ್ರಚಾರ ಸಭೆ ನಡೆಸಿ ಅವರು ಮಾತನಾಡಿದರು.

‘ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ಅಭ್ಯರ್ಥಿ ಕುಮಾರಸ್ವಾಮಿ ಅವರನ್ನು ಗೆಲ್ಲಿಸದೇ ಇದ್ದರೆ, ಕಾಂಗ್ರೆಸ್ ಪಕ್ಷದವರು ಕಾವೇರಿ, ಹೇಮಾವತಿ ನೀರನ್ನೆಲ್ಲಾ ತಮ್ಮ ಮಿತ್ರ ಪಕ್ಷ ಡಿ.ಎಂ.ಕೆ ಪಕ್ಷದ ಓಲೈಕೆಗಾಗಿ ತಮಿಳುನಾಡಿಗೆ ಹರಿಸಿ, ಮಂಡ್ಯ ಜಿಲ್ಲೆಯ ಜನರು ಮತ್ತೆ ಹುರಳಿಕಾಳು ಬೆಳೆಯುವಂತೆ ಮಾಡಿ ಬಿಡುತ್ತಾರೆ’ಎಂದರು.

ಮನ್ಮುಲ್ ನಿರ್ದೇಶಕ ಡಾಲು ರವಿ ಮಾತನಾಡಿ, ರೈತರ ಹಿತ ಚಿಂತಕ ಕುಮಾರಸ್ವಾಮಿ ಅವರ ಗೆಲುವಿನಿಂದ ಮಂಡ್ಯ ಜಿಲ್ಲೆಗೆ ಸಹಾಯವಾಗಲಿದೆ. ಕಾವೇರಿ, ಹೇಮಾವತಿ, ಕೃಷ್ಣ, ಮಹದಾಯಿ ಕಣಿವೆಯ ರೈತರಿಗಾಗಿ ನೀರನ್ನು ರಕ್ಷಣೆ ಮಾಡುವ ಕಾವಲುಗಾರನಂತೆ ಕೆಲಸ ಮಾಡಲಿದ್ದಾರೆ. ಆದ್ದರಿಂದ ಅತಿ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸುವಂತೆ ಮನವಿ ಮಾಡಿದರು.

21 ಕೆ.ಆರ್. ಪಿ003: 3ಎ: ಕೆ.ಆರ್.ಪೇಟೆ  ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಶಾಸಕ ಎಚ್.ಟಿ.ಮಂಜು ಮತ್ತು ಮನ್ಮುಲ್ ನಿರ್ದೇಶಕ ಡಾಲು ರವಿ ಜಂಟಿಯಾಗಿ ಪ್ರಚಾರ ಸಭೆ ನಡೆಸಿ ಕುಮಾರಸ್ವಾಮಿ ಪರವಾಗಿ ಮತಯಾಚನೆ ಮಾಡಿದರು.
21 ಕೆ.ಆರ್. ಪಿ003: 3ಎ: ಕೆ.ಆರ್.ಪೇಟೆ  ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಶಾಸಕ ಎಚ್.ಟಿ.ಮಂಜು ಮತ್ತು ಮನ್ಮುಲ್ ನಿರ್ದೇಶಕ ಡಾಲು ರವಿ ಜಂಟಿಯಾಗಿ ಪ್ರಚಾರ ಸಭೆ ನಡೆಸಿ ಕುಮಾರಸ್ವಾಮಿ ಪರವಾಗಿ ಮತಯಾಚನೆ ಮಾಡಿದರು.

ಪ್ರಚಾರ ಸಭೆಯಲ್ಲಿ ಮುಖಂಡರಾದ ಜಾನಕೀರಾಮು, ಮೋಹನ್ ಕುರುಬಹಳ್ಳಿ ನಾಗೇಶ್, ಬಲ್ಲೇನಹಳ್ಳಿ ನಂದೀಶ್, ಗಾಯತ್ರಿರೇವಣ್ಣ, ಮುದುಗೆರೆ ಪರಮೇಶ್, ಸೋಮಶೇಖರ್, ಗಂಜಿಗೆರೆ ರಾಮಕೃಷ್ಣೇಗೌಡ, ವಿ.ಡಿ.ಮೋಹನ್, ಚಿಕ್ಕಗಾಡಿಗನಹಳ್ಳಿ ಪರಮೇಶ್, ಗಣೇಶ್. ಶಾಸಕರ ಆಪ್ತ ಸಹಾಯಕ ಪ್ರತಾಪ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT