ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವೇರಿ ನೀರು ಬಿಟ್ಟದ್ದು ಖಂಡನೀಯ : ವಾಟಾಳ್

‘ ಭುವನೇಶ್ವರಿ ವರಪುತ್ರ’ ಬಿರುದು ಪ್ರದಾನ
Published 5 ಅಕ್ಟೋಬರ್ 2023, 13:59 IST
Last Updated 5 ಅಕ್ಟೋಬರ್ 2023, 13:59 IST
ಅಕ್ಷರ ಗಾತ್ರ

ಮದ್ದೂರು : ಕಾವೇರಿ ನದಿ ಪಾತ್ರದಲ್ಲಿರುವ ರಾಜ್ಯದ ಜಿಲ್ಲೆಗಳಲ್ಲಿ ಮಳೆಯ ಕೊರತೆಯಿಂದಾಗಿ ತೀವ್ರ ಸಂಕಷ್ಠದ ಪರಿಸ್ಥಿತಿ ಇದ್ದು,ಕುಡಿಯುವ ನೀರಿಗೆ ತೊಂದರೆ ಇದ್ದಾಗ ತಮಿಳುನಾಡಿಗೆ ನೀರು ಹರಿಸುತಿಹ ರಾಜ್ಯ ಸರ್ಕಾರದ ಕ್ರಮ ಖಂಡನೀಯ ಎಂದು ಕನ್ನಡ ಚಳವಳಿ (ವಾಟಾಳ್‌)ಪಕ್ಷದ ಸ್ಥಾಪಕ ವಾಟಾಳ್ ನಾಗರಾಜ್ ಅಕ್ರೊಶ ವ್ಯಕ್ತಪಡಿಸಿದರು.

ಬೆಂಗಳೂರಿನಿಂದ ಕೃಷ್ಣರಾಜಸಾಗರ ಅಣೆಕಟ್ಟೆ(ಕೆಆರ್‌ಎಸ್)ವರೆಗೆ ಏರ್ಪಡಿಸಿದ್ದ ಬೃಹತ್ ಮೆರವಣಿಗೆ ಮೂಲಕ ಮದ್ದೂರು ಪಟ್ಟಣಕ್ಕೆ ಆಗಮಿಸಿದ ವೇಳೆ ಪ್ರಗತಿಪರ ಸಂಘಟನೆಗಳ ಒಕ್ಕೂಟ ಏರ್ಪಡಿಸಿದ್ದ ಅಭಿನಂದನೆ ಸ್ವಿಕರಿಸಿ ಅವರು ಮಾತನಾಡಿದರು.

ಇಂದಿನ ಕೆ ಆರ್‌ಎಸ್ ಮುತ್ತಿಗೆ ಕಾರ್ಯಕ್ರಮದ ನಂತರ ಮುಂದಿನ ವಾರ ತಮಿಳುನಾಡು ಕರ್ನಾಟಕ ಗಡಿ ಬಂದ್ ಚಳವಳಿ ಹಮ್ಮಿಕ್ಕೊಳ್ಳುವ ಮೂಲಕ ಸರ್ಕಾರಕ್ಕೆ ಚಳವಳಿಯ ಬಿಸಿ ಮುಟ್ಟಿಸುವ ಎಚ್ಚರಿಕೆ ನೀಡಿದರು.

ಪ್ರಗತಿಪರ ಸಂಘಟನೆಯ ನ. ಲಿಕೃಷ್ಣ, ಸೊ. ಸಿ. ಪ್ರಕಾಶ್, ಬಿ. ವಿಶಂಕರೇಗೌಡ, ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಉಮಾಶಂಕರ್, ಸುಮುಖ ಟ್ರಸ್ಟ್‌ನ ಕುಮಾರ್, ದಲಿತ ಸಂಘರ್ಷ ಸಮಿತಿ ಶಿವರಾಜ್ ಮರಳಿಗ ರಘು, ವೆಂಕಟೇಗೌಡ, ಒಕ್ಕಲಿಗರಸಂಘದ ನಾರಯಾಣ್ ,ಛಲವಾದಿ ಮಹಾಸಭಾದ ಮಹದೇವ್ ದಯಾನಂದ್ ಉಮೇಶ್ ಚಂದ್ರಹಾಸ್,ಕೆಂಪೇಗೌಡ ತಿಪ್ಪೂರು ಮಹೇಶ್, ಗೊರವನಹಳ್ಳಿ ಪ್ರಸನ್ನ ಮಹೇಶ್ ಮತ್ತಿತರು ಇದ್ದರು.

‘ ಭುವನೇಶ್ವರಿ ವರಪುತ್ರ’ ಬಿರುದು

ಮದ್ದೂರು : ಕನ್ನಡ ಚಳವಳಿಯ ನಾಯಕ ವಾಟಾಳ್ ನಾಗರಾಜ್ ರವರ ಆರ್ದ ಶತಮಾನದ ನಾಡು ನುಡಿ ನೆಲ ಜಲ ದ ರಕ್ಷಣೆಗಾಗಿನ ಪಟ್ಟಣಕ್ಕೆ ಅವರನ್ನು ಸ್ವಾಗತಿಸಿದ ವೇಳೆ ಅವರ ಸೇವೆ ಸ್ಮರಿಸಿ  ‘ ಭುವನೇಶ್ವರಿ ವರಪುತ್ರ’ ಬಿರುದುನೀಡಿ ಮದ್ದೂರಿನ ಪ್ರಗತಿ ಪರ ಸಂಘಟನೆಗಳ ಒಕ್ಕೂಟವು ಆಭಿನಂದಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT