ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL | RCB vs PBKS: ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಪಂಜಾಬ್ ಕಿಂಗ್ಸ್

Published 9 ಮೇ 2024, 13:53 IST
Last Updated 9 ಮೇ 2024, 13:53 IST
ಅಕ್ಷರ ಗಾತ್ರ

ಧರ್ಮಶಾಲಾ: ಐಪಿಎಲ್‌ನ ಈ ಆವೃತ್ತಿಯಲ್ಲಿ ಶೋಚನೀಯ ಸ್ಥಿತಿಯಿಂದ ಗೆಲುವಿನ ಹಳಿಗೆ ಮರಳಿರುವ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡವು, ಏಳುಬೀಳುಗಳನ್ನು ಕಾಣುತ್ತಿರುವ ಪಂಜಾಬ್ ತಂಡವನ್ನು ಇಂದು ಎದುರಿಸುತ್ತಿದ್ದು, ಟಾಸ್ ಗೆದ್ದಿರುವ ಪಂಜಾಬ್‌ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.

ಧರ್ಮಶಾಲಾದಲ್ಲಿ ಪಂದ್ಯ ಆರಂಭಗೊಂಡಿದೆ. ಇತ್ತೀಚಿನ ಗೆಲುವುಗಳಿಂದ ಮನೋಸ್ಥೈರ್ಯ ಹೆಚ್ಚಿಸಿಕೊಂಡಿರುವ ಆರ್‌ಸಿಬಿ 7ನೇ ಸ್ಥಾನಕ್ಕೇರಿದೆ. 11 ಪಂದ್ಯಗಳನ್ನು ಆಡಿ ಎಂಟು ಪಾಯಿಂಟ್ಸ್ ಅಷ್ಟೇ ಗಳಿಸಿದೆ. 

ಮತ್ತೊಂದೆಡೆ ಪಂಜಾಬ್ ಕಿಂಗ್ಸ್‌ ಕೂಡಾ 11 ಪಂದ್ಯಗಳಿಂದ ಎಂಟು ಪಾಯಿಂಟ್ಸ್‌ ಪಡೆದಿದೆ. ಈ ಪಂದ್ಯದ ನಂತರ ಒಬ್ಬರಷ್ಟೇ 14 ಪಾಯಿಂಟ್ಸ್ ತಲುಪಲು ಸಾಧ್ಯ. ಸೋತ ತಂಡಕ್ಕೆ ಅಧಿಕೃತವಾಗಿ ಪ್ಲೇಆಫ್‌ ಬಾಗಿಲು ಮುಚ್ಚಲಿದೆ.

ವಿರಾಟ್‌ ಕೊಹ್ಲಿ ಈ ಬಾರಿಯೂ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಮೊದಲ ಕೆಲವು ಪಂದ್ಯಗಳಲ್ಲಿ ಫ್ಲಾಪ್‌ ಆಗಿದ್ದ ಫಫ್ ಡುಪ್ಲೆಸಿ ಕೂಡ ಲಯಕ್ಕೆ ಮರಳಿದಂತಿದೆ. ವಿಲ್ ಜಾಕ್ಸ್‌, ಗುಜರಾತ್ ಟೈಟನ್ಸ್ ವಿರುದ್ಧ ಅಬ್ಬರಿಸಿದ್ದರು. ದಿನೇಶ್ ಕಾರ್ತಿಕ್ ಫಿನಿಷರ್ ಪಾತ್ರ ನಿಭಾಯಿಸುತ್ತಿದ್ದಾರೆ. ಕ್ಯಾಮರಾನ್ ಗ್ರೀನ್ ಕೂಡ ವಿಕೆಟ್‌ ಪಡೆಯಲು ಆರಂಭಿಸಿದ್ದಾರೆ.

ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿರುವ ಮೊಹಮ್ಮದ್ ಸಿರಾಜ್ ಕೊನೆಗೂ ಲಯ ಕಂಡುಕೊಂಡಿದ್ದಾರೆ. ಯಶ್ ದಯಾಳ್ ಮತ್ತು ವೈಶಾಖ ವಿಜಯಕುಮಾರ್ ಕೂಡ ಮೊದಲಿನಷ್ಟು ರನ್‌ ಗಳಿಸುತ್ತಿಲ್ಲ.

ಪಿಬಿಕೆಎಸ್‌ ಮೂರು ದಿನಗಳ ಹಿಂದೆ ತವರಿನಲ್ಲೇ ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಸೋತಿದ್ದು ಅದರ ವಿಶ್ವಾಸಕ್ಕೆ ಪೆಟ್ಟು ನೀಡಿದೆ. ಬೌಲರ್‌ಗಳು ಉತ್ತಮ ಪ್ರದರ್ಶನ ನೀಡಿದರೂ, ಬ್ಯಾಟರ್‌ಗಳು ಕೈಕೊಟ್ಟಿದ್ದರು.

ಆರ್‌ಸಿಬಿ ತಂಡ: ವಿರಾಟ್ ಕೊಹ್ಲಿ, ಫಫ್‌ ಡುಪ್ಲೆಸಿ (ನಾಯಕ), ವಿಲ್‌ ಜ್ಯಾಕ್ಸ್‌, ರಜತ್ ಪಾಟಿದಾರ್‌, ಮಹಿಪಾಲ್‌ ಲಾಮ್ರಾರ್, ಕ್ಯಾಮರೂನ್ ಗ್ರೀನ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಸ್ವನ್ಪಿನ್ಲ ಸಿಂಗ್, ಕರಣ್ ಶರ್ಮಾ, ಮೊಹಮ್ಮದ್ ಸಿರಾಜ್, ಲಾಕೀ ಫರ್ಗೂಸನ್‌.

ಪಂಜಾಬ್ ಕಿಂಗ್ಸ್ ತಂಡ: ಜಾನಿ ಬೆಸ್ಟೋ (ವಿಕೆಟ್ ಕೀಪರ್), ಪ್ರಭಸಿಮ್ರರನ್ ಸಿಂಗ್, ರಿಲೀ ರಸ್ಸೂ, ಶಶಾಂಕ್ ಸಿಂಗ್, ಸ್ಯಾಮ್ ಕುರನ್ನ (ನಾಯಕ), ಲಿಯಾಮ್ ಸಿವಿಂಗ್‌ಸ್ಟೋನ್, ಆಶುತೋಷ್ ಶರ್ಮಾ, ಹರ್ಷಲ್ ಪಟೇಲ್, ರಾಹುಲ್ ಚಾಹರ್, ಅರ್ಶದೀಪ್ ಸಿಂಗ್, ವಿದ್ವತ್ ಕಾವೇರಪ್ಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT