ಭಾನುವಾರ, ನವೆಂಬರ್ 17, 2019
21 °C

ಹೊಸಗಾವಿ: ಅದ್ಧೂರಿ ಮಹದೇಶ್ವರ ರಥೋತ್ಸವ

Published:
Updated:
Prajavani

ಕೊಪ್ಪ: ಸಮೀಪದ ದೊಡ್ಡ ಹೊಸಗಾವಿ ಗ್ರಾಮದ ಮಹದೇಶ್ವರ ಸ್ವಾಮಿಯ ರಥೋತ್ಸವ ಭಾನುವಾರ ಮಧ್ಯಾಹ್ನ ಸಂಭ್ರಮ, ಸಡಗರದಿಂದ ಜರುಗಿತು. ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದ ಭಕ್ತರು ರಥವನ್ನು ಎಳೆದು ಸಂಭ್ರಮಿಸಿದರು.

ಗ್ರಾಮದ ಮುಖ್ಯ ರಸ್ತೆಯಲ್ಲಿ ಮಹದೇಶ್ವರ ಸ್ವಾಮಿಯ ರಥ ಸಾಗಿತು. ರಥೋತ್ಸವದಲ್ಲಿ ಅಪಾರ ಸಂಖ್ಯೆಯ ಭಕ್ತರು ಭಾಗವಹಿಸಿದ್ದರು.

ದೇವರ ಮೂಲವಿಗ್ರಹಕ್ಕೆ ಹೂವಿನ ಅಲಂಕಾರ ಮಾಡಿ ಬಗೆಬಗೆಯ ಅಭಿಷೇಕಗಳನ್ನು ಮಾಡಲಾಯಿತು. ಮಹಾ ಮಂಗಳಾರತಿ ಮಾಡಿ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.

ಸರತಿ ಸಾಲಿನಲ್ಲಿ ಭಕ್ತರಿಗೆ ದೇವರ ದರ್ಶನ ಪಡೆಯಲು ಅವಕಾಶ ಕಲ್ಪಿಸಲಾಗಿತ್ತು. ರಥಕ್ಕೆ ಪುಷ್ಪಾರ್ಚನೆ, ಜವನ, ಹಣ್ಣು ತೂರಿ ಭಕ್ತಿ ಮೆರೆದರು.

ಭಕ್ತರು ಹರಕೆ ತೀರಿಸಿದರು. ರಥೋತ್ಸವ ಸಾಗುವ ದಾರಿಯುದ್ದಕ್ಕೂ ಜಾನಪದ ಕಲಾತಂಡಗಳ ಪ್ರದರ್ಶನ ಗಮನಸೆಳೆಯಿತು.

ಪ್ರತಿಕ್ರಿಯಿಸಿ (+)