ಮಳವಳ್ಳಿ (ಮಂಡ್ಯ): ಕಲುಷಿತ ಆಹಾರ ಸೇವನೆಯಿಂದ ಅಸ್ವಸ್ಥಗೊಂಡು ಚಿಕಿತ್ಸೆ ಪಡೆಯುತ್ತಿದ್ದ 40 ಮಕ್ಕಳ ಪೈಕಿ, ತಾಲ್ಲೂಕಿನ ಟಿ.ಕಾಗೇಪುರ ಗೋಕುಲ ವಿದ್ಯಾಸಂಸ್ಥೆಯ ಮತ್ತೊಬ್ಬ ವಿದ್ಯಾರ್ಥಿ, ಮೇಘಾಲಯದ ನಮೀಬ್ ಮಾಂತೆ (12) ಸೋಮವಾರ ತಡರಾತ್ರಿ ಮೈಸೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಸಾವಿನ ಸಂಖ್ಯೆ 2ಕ್ಕೇರಿದೆ.

ಉದ್ಯಮಿ ಪುಷ್ಪೇಂದ್ರಕುಮಾರ್ ಶುಕ್ರವಾರ ಕಳಿಸಿದ್ದ ಆಹಾರ ಸೇವಿಸಿ ಅಸ್ವಸ್ಥಗೊಂಡಿದ್ದ ಮಾಂತೆಯನ್ನು ಮಂಡ್ಯ ಮಿಮ್ಸ್ ಆಸ್ಪತ್ರೆಯಿಂದ ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಉದ್ಯಮಿ ಸೇರಿ ಆತನ 40 ಸಂಬಂಧಿಕರು ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಮೇಘಾಲಯದ ಅಧಿಕಾರಿಗಳು ಭೇಟಿ:

ಮೇಘಾಲಯ ಆಡಳಿತ ಇಲಾಖೆಯ ಆಯುಕ್ತ ಸಿರಿಲ್, ಕಾರ್ಯದರ್ಶಿ ಕ್ರಯಿಲ್ ವಿ ಡಿಂಗ್ ದೋ ಅವರು ಮಿಮ್ಸ್ ಆಸ್ಪತ್ರೆಗೆ ಮಂಗಳವಾರ ಭೇಟಿ ನೀಡಿ, ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಿ, ವೈದ್ಯರಿಂದ ಮಾಹಿತಿ ಪಡೆದರು. ಘಟನೆಯ ಬಗ್ಗೆ ಜಿಲ್ಲಾಧಿಕಾರಿ ಕುಮಾರ ಮಾಹಿತಿ ನೀಡಿದರು.

‘ಮಕ್ಕಳ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ. ನಾಲ್ವರು ಐಸಿಯುನಲ್ಲಿದ್ದಾರೆ. 16 ವಿದ್ಯಾರ್ಥಿಗಳು ಸಾಮಾನ್ಯ ವಾರ್ಡಿನಲ್ಲಿದ್ದಾರೆ. ಮೇಘಾಲಯ ಮುಖ್ಯಮಂತ್ರಿ ಸೂಚನೆ ಮೇರೆಗೆ ಭೇಟಿ ನೀಡಿದ್ದು, ಮೃತದೇಹಗಳನ್ನು ಅಲ್ಲಿಗೆ ರವಾನಿಸುವ ಬಗ್ಗೆ ಚಿಂತನೆ ನಡೆದಿದೆ. ಮೃತರ ಕುಟುಂಬಕ್ಕೆ ಪರಿಹಾರ ನೀಡಲಾಗುವುದು’ ಎಂದರು.

ಪೊಲೀಸರು ತನಿಖೆ ತೀವ್ರಗೊಳಿಸಿದ್ದು, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಅಧಿಕಾರಿಗಳ ತಂಡವು, ಘಟನೆಗೆ ಕಾರಣ ಎನ್ನಲಾದ ಮಳವಳ್ಳಿಯ ಲಕ್ಷ್ಮೀನರಸಿಂಹಸ್ವಾಮಿ ಹೋಟೆಲ್ನಿಂದ ಆಹಾರದ ಮಾದರಿಗಳನ್ನು ಮಂಗಳವಾರ ಸಂಗ್ರಹಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.