ಮಳವಳ್ಳಿ: ತಾಲ್ಲೂಕಿನ ಹೊಂಬೇಗೌಡನದೊಡ್ಡಿ ಗ್ರಾಮದಲ್ಲಿ ಬುಧವಾರ ಬೆಳಗಿನ ಜಾವ ಚಿರತೆ ದಾಳಿ ಮಾಡಿ ಮೇಕೆಯೊಂದನ್ನು ತಿಂದು ಹಾಕಿದೆ.

ಗ್ರಾಮದ ಮಹೇಶ್ ಎಂಬುವವರು ತಮ್ಮ ಮನೆಯ ಕೊಟ್ಟಿಗೆಯಲ್ಲಿ ಮೇಕೆಗಳನ್ನು ಕಟ್ಟಿ ಹಾಕಿದ್ದರು. ಬುಧವಾರ ಬೆಳಗಿನ ಜಾವ ಕೊಟ್ಟಿಗೆಗೆ ನುಗ್ಗಿದ ಚಿರತೆ ಮೇಕೆಯನ್ನು ಎಳೆದುಕೊಂಡು ಹೋಗಿ ತಿಂದು ಪರಾರಿಯಾಗಿದೆ. ಕೆಲ ದಿನಗಳ ಹಿಂದಷ್ಟೇ ದುಂಡಮ್ಮ ಎಂಬುವವರಿಗೆ ಸೇರಿದ ಕರುವನ್ನು ಚಿರತೆ ತಿಂದು ಹಾಕಿತ್ತು.

ಕಳೆದ ಹಲವು ತಿಂಗಳಿಂದ ತಾಲ್ಲೂಕಿನ ಹೊಂಬೇಗೌಡನದೊಡ್ಡಿ, ಗುಳಘಟ್ಟ, ಮಾದಹಳ್ಳಿ, ತಳಗವಾದಿ, ಕೋರೇಗಾಲ, ರಾವಣಿ, ನಿಡಘಟ್ಟ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ನಿರಂತರವಾಗಿ ಚಿರತೆ ದಾಳಿಗೆ ಹತ್ತಾರು ಸಾಕು ಪ್ರಾಣಿಗಳು ಬಲಿಯಾಗಿವೆ. ಹಲವೆಡೆ ಗ್ರಾಮಸ್ಥರು ಭಯದ ವಾತಾವರಣದಲ್ಲಿ ತಿರುಗಾಡುವಂತಾಗಿದೆ. ಕೂಡಲೇ ಅರಣ್ಯ ಇಲಾಖೆಯ ಅಧಿಕಾರಿಗಳು ಚಿರತೆ ಸೆರೆಗೆ ಮುಂದಾಗಬೇಕು ಎಂದು ರೈತ ಮಹೇಶ್ ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.