ಮಂಡ್ಯ: ಗೋವಾ ಮುಖ್ಯಮಂತ್ರಿ ಡಾ.ಪ್ರಮೋದ್ ಸಾವಂತ್, ಮೈಸೂರು ಕ್ಷೇತ್ರದ ಮೈತ್ರಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಜೆಡಿಎಸ್ ಮುಖಂಡ ಸಿ.ಎಸ್.ಪುಟ್ಟರಾಜು ಅವರು ನಗರದ ಅಮರಾವತಿ ಹೋಟೆಲ್‌ನ ಲಿಫ್ಟ್‌ನಲ್ಲಿ ಗುರುವಾರ ಕೆಲಹೊತ್ತು ಸಿಲುಕಿದ್ದರು.

ಮೈತ್ರಿ ಅಭ್ಯರ್ಥಿಯಾಗಿ ಎಚ್.ಡಿ.ಕುಮಾರಸ್ವಾಮಿ ನಾಮಪತ್ರ ಸಲ್ಲಿಸುವ ಮೊದಲು ಅಮರಾವತಿ ಹೋಟೆಲ್‌ನಲ್ಲಿ ಪ್ರಮೋದ್ ಸಾವಂತ್ ಪತ್ರಿಕಾಗೋಷ್ಠಿ ನಡೆಸಿದರು. ಗೋಷ್ಠಿ ಮುಗಿಸಿ ಕೆಳಗಿಳಿಯಲು ಲಿಫ್ಟ್ ಬಳಸಿದಾಗ, ಅಗತ್ಯಕ್ಕಿಂತ ಹೆಚ್ಚು ಜನರಿದ್ದುದರಿಂದ ಲಿಫ್ಟ್ ಅರ್ಧದಲ್ಲೇ ನಿಂತಿತ್ತು. ಆಗ ಕೆಲಕಾಲ ಆತಂಕದ ಪರಿಸ್ಥಿತಿ ನಿರ್ಮಾಣವಾಗಿತ್ತು.

ತಕ್ಷಣ ಎಚ್ಚೆತ್ತ ಹೋಟೆಲ್ ಸಿಬ್ಬಂದಿ 10 ನಿಮಿಷದಲ್ಲಿ ಸಮಸ್ಯೆ ಸರಿಪಡಿಸಿ ಲಿಫ್ಟ್ ಬಾಗಿಲು ತೆರೆದರು. ಹೊರ ಬರುತ್ತಿದ್ದಂತೆ ಮುಖಂಡರು ನೆಮ್ಮದಿಯ ನಿಟ್ಟುಸಿರುಬಿಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.