ಮಂಡ್ಯ: ಟೊಮೆಟೊ ದರ ₹ 100ರಲ್ಲೇ ನಿಂತಿದ್ದು ಕಳೆದೆರಡು ವಾರಗಳಿಂದ ಕೆಳಗಿಳಿಯುತ್ತಿಲ್ಲ. ಟೊಮೆಟೊ ಜೊತೆಗೆ ಹಸಿರು ಮೆಣಸಿನ ಕಾಯಿ, ಹಸಿ ಶುಂಠಿ ದರವೂ ಬೆಲೆ ಏರುಗತಿಯಲ್ಲೇ ಇದ್ದು ಸಾಮಾನ್ಯ ಗ್ರಾಹಕರಿಗೆ ಭಾರ ಎನಿಸಿವೆ.

ಪ್ರತಿ ಕೆ.ಜಿ ಟೊಮೆಟೊ ₹100 ರಲ್ಲಿ ಮಾರಾಟವಾಗುತ್ತಿದ್ದರೆ, ಹಸಿರುಮೆಣಸಿನಕಾಯಿ ₹120, ಹಸಿ ಶುಂಠಿ ₹200ರಲ್ಲಿ ಮಾರಾಟವಾಗುತ್ತಿವೆ. ತುಂತುರು ಮಳೆ, ಚಳಿ ವಾತಾವರಣವಿದ್ದರೂ ಕೆಲ ತರಕಾರಿ ದುಬಾರಿಯಾಗಿವೆ. ಅದರ ನಡುವೆಯೂ ನುಗ್ಗೇಕಾಯಿ, ಸೌತೆಕಾಯಿ, ಸೋರೆಕಾಯಿ, ಸಿಹಿಗೆಣಸು, ಅವರೆಕಾಯಿ ಸಾಧಾರಣ ಬೆಲೆಗೆ ಮಾರಾಟವಾಗುತ್ತಿವೆ.

ಮಳೆ ಸುರಿಯುತ್ತಿರುವ ಕಾರಣ ಟೊಮೆಟೊ ಬೆಲೆ ನಿಯಂತ್ರಣಕ್ಕೆ ಬರಲಿದೆ ಎಂದೇ ಹೇಳಲಾಗಿತ್ತು. ಆದರೆ ಮಳೆ ಆರಂಭವಾಗಿ ವಾರ ಕಳೆದರೂ ಟೊಮೆಟೊ ಬೆಲೆ ನಿಯಂತ್ರಣಕ್ಕೆ ಬಂದಿಲ್ಲ. ದೇಶದಾದ್ಯಂತ ಟೊಮೆಟೊಗೆ ಕೊರತೆಯಾಗಿರುವ ಕಾರಣ ಇನ್ನೂ ಕೆಲವು ವಾರಗಳ ಕಾಲ ಬೆಲೆ ಏರುಗತಿಯಲ್ಲೇ ಇರಲಿದೆ ಎಂದು ವ್ಯಾಪಾರಿಗಳು ಹೇಳುತ್ತಾರೆ.

ಚಳಿಯ ಕಾರಣಕ್ಕೆ ಸೌತೆಕಾಯಿ ಬೆಲೆ ಕಡಿಮೆಯಾಗಿದ್ದು ₹ 20ಕ್ಕೆ 4–5 ಸೌತೆಕಾಯಿ ದೊರೆಯುತ್ತಿವೆ. 2 ವಾರಗಳ ಹಿಂದೆ ಒಂದು ಸೌತೆಕಾಯಿ ದರ ₹ 20 ಇತ್ತು. ಈರುಳ್ಳಿ ದರ ಪ್ರತಿ ಕೆ.ಜಿ ₹25ಕ್ಕೆ ಮಾರಾಟವಾಗುತ್ತಿದೆ. ಪಡವಲಕಾಯಿ, ಆಲೂಗೆಡ್ಡೆ, ಹೂಕೋಸು, ಎಲೆಕೋಸು, ಮೂಲಂಗಿ, ಎಲೆಕೋಸು ₹30, ಫಾರಂ ಬೀನ್ಸ್, ಗೆಡ್ಡೆಕೋಸು, ಸೀಮೆಬದನೆಕಾಯಿ, ಅವರೆಕಾಯಿ, ಸಿಹಿಗೆಣಸು, ಮರಗೆಣಸು, ತಗಣಿಕಾಯಿ, ಬದನೆಕಾಯಿ, ಬೂದುಗುಂಬಳ, ಈರೇಕಾಯಿ, ಬೆಂಡೆಕಾಯಿ, ತೊಂಡೆಕಾಯಿ, ಬೀಟ್‌ರೂಟ್ ₹40ರಂತೆ ಮಾರಾಟವಾಗುತ್ತಿವೆ.

ನಾಟಿ ಬೀನ್ಸ್, ಕ್ಯಾರೆಟ್, ಹಾಗಲಕಾಯಿ, ನುಗ್ಗೇಕಾಯಿ, ಗೋರಿಕಾಯಿ, ಭಜ್ಜಿ ಮೆಣಸಿನಕಾಯಿ ₹50, ಸುವರ್ಣ ಗಡ್ಡೆ ₹60, ಫಾರಂ ಬೆಳ್ಳುಳ್ಳಿ ₹130, ರಾಜ್‌ಈರುಳ್ಳಿ ₹150, ನಾಟಿ ಬೆಳ್ಳುಳ್ಳಿ ₹220ಕ್ಕೆ ಮಾರಾಟವಾಗತ್ತಿವೆ. ಒಂದು ನಿಂಬೆಹಣ್ಣು ₹5ರಂತೆ ಮಾರಾಟವಾಗುತ್ತಿದೆ.

ಸೋನೆ ಮಳೆ ಸುರಿಯುತ್ತಿರುವ ಕಾರಣ ಸೊಪ್ಪುಗಳು ಗದ್ದೆಯಲ್ಲಿಯೇ ಕೊಳೆಯುತ್ತಿವೆ. ಆದರೂ ರೈತರು ಮಳೆಯಲ್ಲಿಯೇ ಮಾರಾಟ ಮಾಡುತ್ತಿದ್ದಾರೆ. ಚಿಕ್ಕಿಸೊಪ್ಪು ₹20ಕ್ಕೆ ಮಾರಾಟವಾಗುತ್ತಿದ್ದು ದುಬಾರಿ ಎನಿಸಿದರೆ, ಕೀರೆ, ಫಾರಂ ಕೊತ್ತಂಬರಿ, ಪಾಲಾಕ್, ಸಬ್ಬಸಿಗೆ ₹5ಕ್ಕೆ ಒಂದು ಕಟ್ಟು ದೊರೆಯುತ್ತಿವೆ. ಕಿಲ್‌ಕೀರೆ ₹15, ನಾಟಿಕೊತ್ತಂಬರಿ, ಮೆಂತೆ, ಪುದಿನಾ, ದಂಟು, ಕರಿಬೇವು ₹10ಪ್ರತಿ ಮಾರಾಟವಾಗುತ್ತಿವೆ.

ಹೂಗಳ ಬೆಲೆಯು ಕೂಡ ಸಾಧಾರಣವಾಗಿದ್ದು, ಕನಕಾಂಬರ, ಕಾಕಡ ದುಬಾರಿಯಂತೆ ಕಂಡಿದೆ, ಕೆಂಪು ಚೆಂಡುಹೂ ಕೆ.ಜಿ ₹50, ಹಳದಿ ಚೆಂಡುಹೂ ₹ 60, ಸುಗಂಧರಾಜ, ಗಣಗಲೆ ₹100, ಕಲ್ಕತ್ತಾ ಮಲ್ಲಿಗೆ, ಸಣ್ಣಗುಲಾಬಿ ₹120, ಮರಳೆ, ಸೇವಂತಿಗೆ, ಬಟನ್ಸ್, ಬಿಳಿಸೇವಂತಿ ₹350, ಮಲ್ಲಿಗೆ ₹450, ಕಾಕಡ ₹600, ಕನಕಾಂಬರ ₹700ರಂತೆ ಕೆ.ಜಿಗೆ ಮಾರಾಟವಾಗುತ್ತಿವೆ.

ಮಾರು ತುಳಸಿ ₹25, ಕೆಂಪು ಚೆಂಡುಹೂ ₹40, ಹಳದಿ ಚೆಂಡು ಹೂ, ಗಣಗಲೆ ₹50, ಮರಳೆ ₹60, ಮಲ್ಲಿಗೆ, ಬಟನ್ಸ್ ₹80, ಬಿಳಿಸೇವಂತಿ ₹80 ರಿಂದ ₹90ರಂತೆ ದೊರೆಯುತ್ತಿವೆ.

ಹಣ್ಣುಗಳಲ್ಲಿ ಕಳೆದೊಂದು ವಾರದಿಂದಲೂ ಸೇಬಿನ ಬೆಲೆ ದುಬಾರಿಯಾಗಿಯೇ ಕಾಣುತ್ತಿದೆ. ₹ 220– ₹ 240ವರೆಗೂ ಕೆ.ಜಿ ಸೇಬು ಮಾರಾಟವಾಗುತ್ತಿದೆ. ಈಗ ಎಲ್ಲೆಡೆ ದಾಳಿಂಬೆ ಹಣ್ಣು ಮಾರುಕಟ್ಟೆಗೆ ಬಂದಿದ್ದು ಬೆಲೆಯೂ ಕಡಿಮೆಯಾಗಿದೆ. ₹ 200ಕ್ಕೆ ಮಾರಾಟವಾಗುತ್ತಿದ್ದ ದಾಳಿಂಬೆ ಹಣ್ಣು ಈಗ ₹ 140ಕ್ಕೆ ಮಾರಾಟವಾಗುತ್ತಿದೆ. ಬೀದಿ ಬದಿಯಲ್ಲಿ ಮಾರಾಟ ಮಾಡುವವರು ₹ 100ಕ್ಕೆ ಕೆ.ಜಿ ಕೊಡುತ್ತಿದ್ದಾರೆ.

ಪಪ್ಪಾಯ, ಕಲ್ಲಂಗಡಿ ₹ 20, ಕರಬೂಜ, ಸೀಬೆ, ಅನಾನಸ್, ಪಚ್ಚಬಾಳೆ ₹50, ಸೀತಾಫಲ ₹70, ಏಲಕ್ಕಿಬಾಳೆ ₹80, ಮೂಸಂಬಿ ₹100, ಮರಸೇಬು, ಸಫೋಟ, ಕಿವಿಹಣ್ಣು(ಬಾಕ್ಸ್), ಫಾರಂ ಕಿತ್ತಳೆ ₹120, ದಪ್ಪದ್ರಾಕ್ಷಿ ₹150, ನಾಟಿ ಕಿತ್ತಳೆ ₹160ಕ್ಕೆ ಬಿಕರಿ ಆಗುತ್ತಿವೆ.

ಇಳಿಕೆ ಕಂಡ ದಾಳಿಂಬೆ ಹಣ್ಣಿನ ದರ ಸೋನೆ ಮಳೆ; ಸೌತೆಕಾಯಿ ಬೆಲೆ ಇಳಿಕೆ ಗದ್ದೆಯಲ್ಲೇ ಕೊಳೆಯುತ್ತಿರುವ ಸೊಪ್ಪು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.