ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನುಷ್ಯನ ಆರೋಗ್ಯಕ್ಕೆ ಓಟ ಮುಖ್ಯ; ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌.ಯತೀಶ್‌

ನೂರಡಿ ರಸ್ತೆಯಲ್ಲಿ ಮ್ಯಾರಥಾನ್‌ ಉತ್ಸಾಹ
Last Updated 29 ನವೆಂಬರ್ 2021, 3:04 IST
ಅಕ್ಷರ ಗಾತ್ರ

ಮಂಡ್ಯ: ಮನುಷ್ಯ ಆರೋಗ್ಯದಿಂದ ಇರಬೇಕಾದರೆ ಪ್ರತಿದಿನ ಓಟದಲ್ಲಿ ತೊಡಗಬೇಕು. ಇದರಿಂದ ದೇಹದ ಆರೋಗ್ಯ ಸಮತೋಲನದಲ್ಲಿರುತ್ತದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌.ಯತೀಶ್‌ ಸಲಹೆ ನೀಡಿದರು.

ನಗರದ ನೂರಡಿ ರಸ್ತೆಯಲ್ಲಿನ ಸ್ಟೇಫಿಟ್ ಜಿಮ್ ಎದುರು ಕಾಯಕಯೋಗಿ ಫೌಂಡೇಷನ್, ಅಖಂಡ ಕರ್ನಾಟಕ ರಕ್ಷಣಾ ಸೇವಾದಳ, ಮಂಡ್ಯ ಪ್ರೆಸ್ ಕ್ಲಬ್ ಟ್ರಸ್ಟ್ ಹಾಗೂ ಕರ್ನಾಟಕ ಸಂಪಾದಕರು ಮತ್ತು ವರದಿಗಾರರ ಸಂಘದ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ ಮಂಡ್ಯ ಮ್ಯಾರಥಾನ್- 2021ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಬಹುತೇಕ ಜನರು ದುಡಿಮೆಯಲ್ಲಿ ತೊಡಗಿರುವುದರಿಂದ ಕೆಲಸದ ಒತ್ತಡಕ್ಕೆ ಸಿಲುಕಿದ್ದಾರೆ. ವ್ಯಾಯಾಮ, ಧ್ಯಾನ, ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಿದರೆ ದೈಹಿಕ ಹಾಗೂ ಮಾನಸಿಕವಾಗಿ ಬಿಡುವು ಸಿಕ್ಕಿದಂತಾಗುತ್ತದೆ. ಉತ್ತಮ ಅರೋಗ್ಯ ನಮ್ಮದಾಗಿಸಿಕೊಳ್ಳಬಹುದು.ಕೋವಿಡ್ ನಂತರದ ದಿನಗಳಲ್ಲಿ ವಿವಿಧ ರೀತಿಯ ರೋಗಗಳು ಉಲ್ಬಣವಾಗುತ್ತಿವೆ. ಇದಕ್ಕೆ ಭಯಪಡಬಾರದು. ವೈದ್ಯರಿಂದ ಸೂಕ್ತ ರೀತಿಯ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದರು.

ಮ್ಯಾರಥಾನ್ ಓಟ ಮನುಷ್ಯನ ಆರೋಗ್ಯಕ್ಕೆ ಪೂರಕವಾಗಿದೆ. ಇಂಥ ಕಾರ್ಯಕ್ರಮಗಳು ಹೆಚ್ಚಾಗಿ ಆಯೋಜನೆ ಗೊಳ್ಳಬೇಕು. ವಿದ್ಯಾರ್ಥಿಗಳು ಮತ್ತು ಯುವಕರು ಸೇರಿದಂತೆ ಪ್ರತಿಯೊ ಬ್ಬರೂ ಕ್ರೀಡಾ ಚಟವಟಿಕೆಯಲ್ಲಿ ಭಾಗವಹಿಸುವ ಮೂಲಕ ಆರೋಗ್ಯ ಕಾಪಾಡಿ ಕೊಳ್ಳಬೇಕು ಎಂದು ಸಲಹೆ ನೀಡಿದರು.

ನಗರಸಭೆ ಸದಸ್ಯ ಎಂ.ಪಿ.ಅರುಣ್‌ಕುಮಾರ್, ಗ್ರಾ.ಪಂ.ಅಧ್ಯಕ್ಷ ಬಿ.ಎಂ.ಮಹೇಶ್, ಪರಿವರ್ತನಾ ಟ್ರಸ್ಟ್‌ ಅಧ್ಯಕ್ಷ ಎನ್.ಎಸ್.ಇಂದ್ರೇಶ್,ಸಮಾಜ ಸೇವಕ ಬಿ.ಎಂ.ಅಪ್ಪಾಜಪ್ಪ, ನೇಗಿಲ ಯೋಗಿ ಟ್ರಸ್ಟ್‌ನ ರಮೇಶ್, ಅನನ್ಯ ಹಾರ್ಟ್ಸಂಸ್ಥೆಯ ಬಿ.ಎಸ್.ಅನುಪಮಾ, ಕಾಯಕಯೋಗಿ ಫೌಂಡೇಷನ್ ಅಧ್ಯಕ್ಷಎಂ.ಶಿವಕುಮಾರ್,ಅಥ್ಲೆಟಿಕ್ಸ್ ತರಬೇತುದಾರ ಮಣಿ ತೀರ್ಪಗಾರರಾಗಿ ಭಾಗವಹಿಸಿದ್ದರು.

ಮ್ಯಾರಥಾನ್‌ ಉತ್ಸಾಹ:ಮಂಡ್ಯ ಮ್ಯಾರಥಾನ್-2021ಕ್ಕೆ ವಿವಿಧಜಿಲ್ಲೆ ಗಳಿಂದ ಬಂದಿದ್ದ 356 ಸ್ಪರ್ಧಾಳುಗಳು ಉತ್ಸುಕತೆಯಿಂದ ನಗರದ ನೂರಡಿ ರಸ್ತೆಯಲ್ಲಿ ಸೇರಿದ್ದರು. ಕೊರೊನಾ ಗೆಲ್ಲಲು ಮುಂದಾಗಿ ಎಂಬ ಸಂದೇಶದೊಂದಿಗೆ ಚಳಿಯನ್ನೂ ಲೆಕ್ಕಿಸದೆ ಭಾಗವಹಿಸಿದ್ದರು. ಸುಮಾರು 5 ಕಿ.ಮೀ. ದೂರದ ಬೇವಿನಹಳ್ಳಿ ಗ್ರಾಮದವರೆಗೂ ಓಡಿದರು.

ವಿಜೇತರು:ಪುರುಷರ ವಿಭಾಗದಲ್ಲಿ ಬೆಂಗಳೂರಿನ ಶಿವಾಜಿ (ಪ್ರ), ಮೈಸೂರಿನನವೀನ್ (ದ್ವಿ), ಮೈಸೂರಿನ ಲಕ್ಷ್ಮೀಶ (ತೃ),ಮಹಿಳಾ ವಿಭಾ ಗದಲ್ಲಿ ತಿ.ನರಸೀಪುರದ ತೇಜಸ್ವಿನಿ (ಪ್ರ) ಮತ್ತುಚೈತ್ರಾ (ದ್ವಿ), ಮೈಸೂರಿನ ಉಷಾ(ತೃ), ಹಿರಿಯರ ಮಹಿಳಾ ವಿಭಾಗದಲ್ಲಿ ಎಸ್.ಜಿ.ವಿ ಜಯಾ, ಪುರುಷರ ವಿಭಾಗದಲ್ಲಿ ವೈ.ಕೆ.ಪುಟ್ಟಸ್ವಾಮಿ ಮಂಡ್ಯ, ಮೇಳಾಪುರ ಬಾಲಚಂದ್ರ ಅವರು ವಿಜೇತರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT