ದೊಡ್ಡಬ್ಯಾಡರಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಮುರಿದು ಮೂಲೆ ಸೇರಿರುವ ಕಸದ ಡಬ್ಬಿಗಳು
ಪಾಂಡವಪುರ ಪಟ್ಟಣದ ಘನ ತ್ಯಾಜ್ಯ ಸಂಗ್ರಹ ಘಟಕ
ಕೆ.ಬೆಟ್ಟಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಘನ ತ್ಯಾಜ್ಯ ಘಟಕ ನಿರ್ಮಾಣವಾಗಿದೆ. ಕಸದ ಡಬ್ಬಿಗಳನ್ನು ನೀಡಿದ್ದಾರೆ. ಆದರೆ ಮೂರು ವರ್ಷ ಕಳೆದರೂ ಇದುವರೆಗೂ ಉದ್ಫಾಟನೆಯಾಗದೆ ಮೂರು ಗುಂಪಾಗಿದೆ. ಈ ಘಟಕಕ್ಕೆ ₹15 ಲಕ್ಷ ವೆಚ್ಚ ಮಾಡಿದ್ದರೂ ಯಾವುದೇ ಪ್ರಯೋಜನವಿಲ್ಲದಂತಾಗಿದೆ
ಅಶೋಕ, ಡಾಮನಡಹಳ್ಳಿ ಗ್ರಾಮಸ್ಥ
‘ಸ್ಚಚ್ಚ ಭಾರತ್ ಮಿಷನ್ ಯೋಜನೆ ಅನುಷ್ಠಾನ ವಾಗುವಲ್ಲಿ ಸಂಪೂರ್ಣ ಸೋತಿದೆ. ಅಧಿಕಾರಿಗಳು ಮತ್ತು ಪಂಚಾಯಿತಿ ಸದಸ್ಯರು ಜವಾಬ್ದಾರಿಯರಿತು ಕೆಲಸ ಮಾಡಬೇಕಿದೆ. ಎಲ್ಲಕ್ಕಿಂತ ಮಿಗಿಲಾಗಿ ಜನರ ಸಹ ಭಾಗಿತ್ವ ಮುಖ್ಯ. ಇಲ್ಲದಿದ್ದರೆ ಮತ್ತಷ್ಟು ಯೋಜನೆ ಹಳ್ಳ ಹಿಡಿಯುವುದು ಗ್ಯಾರಂಟಿ’.
ಕೃಷ್ಣಮೂರ್ತಿ, ಕನಗನಮರಡಿ ಗ್ರಾಮಸ್ಥ
ತಾಲ್ಲೂಕಿನ 24 ಗ್ರಾಮ ಪಂಚಾಯಿತಿಗಳ ಪೈಕಿ ಈಗಾಗಲೇ 2 ಪಂಚಾಯಿತಿಗಳಲ್ಲಿ ಘನ ತ್ಯಾಜ್ಯದಿಂದ ಗೊಬ್ಬರ ತಯಾರು ಮಾಡುವ ಪ್ರಕ್ರಿಯೆ ಪ್ರಾರಂಭವಾಗಿದೆ. ಉಳಿದ ಎಲ್ಲಾ ಪಂಚಾಯಿತಿಗಳಲ್ಲಿ ಹಂತ ಹಂತವಾಗಿ ಪ್ರಾರಂಭಗೊಳ್ಳಲಿದೆ ಎನ್ನುತ್ತಾರೆ
ಲೋಕೇಶ್ ಮೂರ್ತಿ, ಇಒ, ತಾಲ್ಲೂಕು ಪಂಚಾಯಿತಿ
ಕಸ ಮುಕ್ತ ಸ್ವಚ್ಛ ಪಟ್ಟಣವನ್ನಾಗಿ ಮಾಡಲು ಪ್ರಯತ್ನಿಸಲಾಗುತ್ತಿದೆ. ತ್ಯಾಜ್ಯವನ್ನು ಬೇರ್ಪಡಿಸಿ ಉಪಯುಕ್ತ ವಸ್ತುವನ್ನಾಗಿ ಮಾಡುವುದು ಮುಖ್ಯ.ಇದಕ್ಕೆ ಸಮಯ ಹಿಡಿಯುತ್ತದೆ. ಪಟ್ಟಣದಲ್ಲಿ ಘನ ತ್ಯಾಜ್ಯ ವಿಲೇವಾರಿ ನಿರ್ವಹಣೆ ವ್ಯವಸ್ಥಿತವಾಗಿ ನಡೆಯುತ್ತಿದೆ’