ಭಾನುವಾರ, ಮೇ 22, 2022
25 °C
ನೇತಾಜಿ ಸುಬಾಷ್‌ ಚಂದ್ರ ಬೋಸ್‌, ಸೈನಿಕರ ದಿನಾಚರಣೆ

ದೇಶಪ್ರೇಮವೇ ಸೈನಿಕರಿಗೆ ಮೊದಲ ಪಾಠ: ಮೇಜರ್‌ ಅಶ್ವತ್ಥ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ‘ದೇಶ ಮೊದಲು ನಂತರ ಉಳಿದದ್ದು ಎಂಬ ದೇಶಪ್ರೇಮದ ಪಾಠವನ್ನೇ ಸೈನಿಕರಿಗೆ ಮೊದಲು ಹೇಳಿಕೊಡಲಾಗುತ್ತದೆ’ ಎಂದು ಮಾಜಿ ಸೈನಿಕರ ಸಂಘದ ಗೌರವಾಧ್ಯಕ್ಷ ಮೇಜರ್‌ ಅಶ್ವತ್ಥ್‌ ಕುಮಾರ್ ಹೇಳಿದರು.

ನಗರದ ಕನ್ನಡ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಸಹಯೋ ಗದಲ್ಲಿ ಸೋಮವಾರ ಆಯೋಜಿಸಿದ್ದ ನೇತಾಜಿ ಸುಬಾಷ್‌ ಚಂದ್ರ ಬೋಸ್‌ ಜನ್ಮದಿನಾಚರಣೆ ಮತ್ತು ಸೈನಿಕರ ದಿನಾಚರಣೆಯಲ್ಲಿ ಭಾರತೀಯ ಸೇನೆ ಕುರಿತು ಅವರು ಮಾತನಾಡಿದರು.

‘ಭಾರತ ಮಾತೆಯ ಸೇನೆಯ ರಕ್ಷಣೆಗೆ ನಿಂತಿರುವ ಸೈನಿಕರ ಬಗ್ಗೆ ಗೌರವ ನೀಡಬೇಕು. ಪ್ರಪಂಚದಲ್ಲೇ ಭಾರತೀಯ ಸೇನೆ ಅತ್ಯುತ್ತಮವಾದದ್ದು’ ಎಂದರು.

‘1947ರಲ್ಲಿ ಸ್ವಾತಂತ್ರ್ಯ ಸಿಕ್ಕಿದ್ದರೂ, 1949 ಜ.15ರವರೆಗೂ ಬ್ರಿಟಿಷ್‌ ಸೈನ್ಯದ ಆಡಳಿತಾಧಿಕಾರಿ ಮಹಾದಂಡ ನಾಯಕರಾಗಿ ಭಾರತೀಯ ಸೈನ್ಯವನ್ನು ಮುನ್ನಡೆಸುತ್ತಿದ್ದರು. ಅದು ಪಿತೂರಿಯಾಗಿತ್ತು, ನಂತರ ಫೀಲ್ಡ್‌ ಮಾರ್ಷಲ್‌ ಕಾರ್ಯಪ್ಪ ಅವರು ಭಾರತ ಸೇನೆಯ ಪ್ರಥಮ ದಂಡನಾಯಕರಾಗಿ ಅಧಿಕಾರ ವಹಿಸಿಕೊಂಡರು. ನಾಡು, ಗಡಿ ರಕ್ಷಣೆ ಹಾಗೂ ಜನರ ರಕ್ಷಣೆ ಹೆಸರಿನಲ್ಲೇ ದೇಶ ರಕ್ಷಣೆ ಮಾಡಲಾಗುತ್ತದೆ’ ಎಂದರು.

ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ರವಿಕುಮಾರ ಚಾಮಲಾಪುರ ಮಾತನಾಡಿ, ‘ಶುಲ್ಕ ಪಡೆಯದೆಯೆ ಪರಿಷತ್‌ಗೆ ಮಾಜಿ ಸೈನಿಕರನ್ನು ಸದಸ್ಯತ್ವರನ್ನಾಗಿ ನೋಂದಣಿ ಮಾಡಿಕೊಳ್ಳಲಾಗುವುದು’ ಎಂದರು.

ಮದ್ದೂರಿನ ಮಾಜಿ ಸೈನಿಕ ಬಿ.ಸುರೇಶ್‌ ಅವರನ್ನು ಸನ್ಮಾನಿ ಸಲಾಯಿತು. ಲಯನ್ಸ್‌ ಸಂಸ್ಥೆಯ ಜಿ.ಎ.ರಮೇಶ್, ಸಾಹಿತಿ ಡಾ.ಎಸ್.ಶ್ರೀನಿ ವಾಸಶೆಟ್ಟಿ, ಮಾಜಿ ಸೈನಿಕ ಮಲ್ಲರಾಜು, ಪರಿಷತ್‌ನ ತಾಲ್ಲೂಕು ಘಟಕದ ಅಧ್ಯಕ್ಷ ಮಂಜು ಮುತ್ತೇಗೆರೆ, ನಗರ ಘಟಕದ ಅಧ್ಯಕ್ಷೆ ಸುಜಾತ ಕೃಷ್ಣ, ಬಿ.ಎಂ.ಅಪ್ಪಾಜಪ್ಪ, ಹುಸ್ಕೂರು ಕೃಷ್ಣೇಗೌಡ, ಎಂ.ಬಿ.ರಮೇಶ್‌, ದರಸಗುಪ್ಪೆ ಧನಂಜಯ್ ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು