ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದ್ದೂರು | ಹೆಚ್ಚಿದ ಗುಂಡಿ; ಸವಾರರು ಹೈರಾಣ

ಬೆಸಗರಹಳ್ಳಿ- ಮಂಡ್ಯ ರಸ್ತೆಯಲ್ಲಿ ಗುಂಡಿಯಲ್ಲಿ ಹೆಚ್ಚಾದ ಗುಂಡಿಗಳು
Published 22 ಅಕ್ಟೋಬರ್ 2023, 4:58 IST
Last Updated 22 ಅಕ್ಟೋಬರ್ 2023, 4:58 IST
ಅಕ್ಷರ ಗಾತ್ರ

ಮದ್ದೂರು: ಬೆಸಗರಹಳ್ಳಿಯಿಂದ ಜಿಲ್ಲಾ ಕೇಂದ್ರ ಮಂಡ್ಯಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಸಂಪೂರ್ಣವಾಗಿ ಹದಗೆಟ್ಟಿದ್ದು, ನಿತ್ಯ ಸವಾರರು ಪ‍ರಿತಪಿಸುವಂತಾಗಿದೆ.

ಈ ದಾರಿಯಲ್ಲಿ ನವೋದಯ ವಿದ್ಯಾಪೀಠ ಸೇರಿದಂತೆ ಹತ್ತಾರು ಗ್ರಾಮಗಳಿಗೆ ಈ ರಸ್ತೆಯೇ ಮುಖ್ಯ ಸಂಪರ್ಕವಾಗಿದೆ. ನೂರಾರು ವಿದ್ಯಾರ್ಥಿಗಳು ಕೂಡಾ ಅನೇಕ ಶಾಲಾ ಕಾಲೇಜಿಗೆ ತೆರಳುವ ವೇಳೆ  ಗುಂಡಿಗಳಿಂದಾಗಿ ಆಯತಪ್ಪಿ ಬಿದ್ದು ಹಲವರು ಗಾಯಗೊಂಡಿದ್ದಾರೆ.

ಕೊಪ್ಪದ ಎನ್‌ಎಸ್‌ಎಲ್‌, ಮಂಡ್ಯದ  ಮೈಶುಗರ್ಸ್ ಸಕ್ಕರೆ ಕಾರ್ಖಾನೆಗೆ ಸಾಗಿಸಲೂ ಇದೇ ರಸ್ತೆಯ ಮೂಲಕವೇ ಸಾಗಿಸುತ್ತಾರೆ. ಸುಮಾರು 1 ವರ್ಷದಿಂದ ಈ ರಸ್ತೆಯಲ್ಲಿ ಗುಂಡಿಗಳು ಹೆಚ್ಚಾಗುತ್ತಿದ್ದು, ಅಪಘಾತಗಳ ಸಂಖ್ಯೆ ಹೆಚ್ಚಿವೆ. ಈ ಕುರಿತು ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಯಾರೂ ಈ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ ಎಂಬುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

.

ಗುಂಡಿಬಿದ್ದ ರಸ್ತೆ
ಗುಂಡಿಬಿದ್ದ ರಸ್ತೆ

ಹೆಚ್ಚು ಗುಂಡಿ ಬಿದ್ದಿರುವ ಪರಿಣಾಮ ಅಪಘಾತಗಳು ಹೆಚ್ಚಾಗುತ್ತಿವೆ ಸಂಬಂಧಪಟ್ಟವರು ರಸ್ತೆ ಸರಿಪಡಿಸಿ ಸುಗಮ ಸಂಚಾರಕ್ಕೆ ಗಮನಹರಿಸಲಿ

-ಪ್ರಶಾಂತ್ ಪರಮಶಿವಯ್ಯ ಬೆಸಗರಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT