ಬೆಟ್ಟದಪುರ: ‘ಕಣಗಾಲು ಗ್ರಾಮದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದಲ್ಲಿ ಕಾರ್ಯದರ್ಶಿ ಹಾಗೂ ವಿಸ್ತರಣಾಧಿಕಾರಿ ಅವ್ಯವಹಾರ ನಡೆಸಿದ್ದು, ಅವರ ವಿರುದ್ಧ ತನಿಖೆ ನಡೆಸಬೇಕು’ ಎಂದು ಆಡಳಿತ ಮಂಡಳಿ ಸದಸ್ಯರು ಮತ್ತು ಗ್ರಾಮಸ್ಥರು ಮಂಗಳವಾರ ಸಂಜೆ ಪ್ರತಿಭಟನೆ ಮಾಡಿದರು.

‘ಸಂಘದಲ್ಲಿ ಸುಮಾರು ಏಳು ವರ್ಷಕ್ಕೂ ಹೆಚ್ಚಿನ ಕಾಲ ಕರ್ತವ್ಯ ನಿರ್ವಹಿಸಿದ ಕಾರ್ಯದರ್ಶಿ ಸಾಕಷ್ಟು ಅವ್ಯವಹಾರ ಮಾಡಿದ್ದು, ನೂತನ ಆಡಳಿತ ಮಂಡಳಿಯವರು ಹಾಗೂ ಸದಸ್ಯರು ಲೆಕ್ಕಪತ್ರಗಳನ್ನು ನೀಡುವಂತೆ ಹೇಳಿದರೆ ಯಾವುದಕ್ಕೂ ಉತ್ತರ ನೀಡುತ್ತಿಲ್ಲ. ನಿರ್ದೇಶಕರ ವಿರುದ್ಧ ಭಿನ್ನಾಭಿಪ್ರಾಯ ಸೃಷ್ಟಿಸಿದ್ದಾರೆ. ಈ ಬಗ್ಗೆ ಲೆಕ್ಕಪತ್ರ ಕೇಳಿದರೆ, ಅವರ ವಿರುದ್ಧ ದೌರ್ಜನ್ಯದ ಮಾತುಗಳನ್ನು ಆಡುವ ಮೂಲಕ ದರ್ಪ ತೋರಿದ್ದಾರೆ. ಈ ಅವ್ಯವಹಾರದಲ್ಲಿ ವಿಸ್ತರಣಾಧಿಕಾರಿಗಳು, ಮೇಲಾಧಿಕಾರಿಗಳು ಭಾಗಿಯಾಗಿರುವ ಸಂಶಯವಿದೆ’ ಎಂದು ಆರೋಪಿಸಿದರು.

‘ಈ ಹಿಂದೆ ದಿನಕ್ಕೆ ಕೇವಲ ಏಳು ಲೀಟರ್ ಹಾಲು ಮಾರಾಟವಾಗುತ್ತಿತ್ತು ಎಂದು ತೋರಿಸಿದ್ದಾರೆ. ಆದರೆ, ಕಳೆದ ತಿಂಗಳು ಚುನಾವಣೆ ಮುಗಿಸಿ ಆಡಳಿತ ಮಂಡಳಿ ರಚನೆಯಾದ ಬಳಿಕ ದಿನಕ್ಕೆ 60 ಲೀಟರ್ವರೆಗೆ ಮಾರಾಟವಾಗಿದೆ. ಈ ಹಿಂದೆ ಎಷ್ಟು ಅವ್ಯವಹಾರ ಆಗಿದೆ ಎಂಬುದಕ್ಕೆ ಉದಾಹರಣೆ ಸಿಕ್ಕಿದಂತಾಗಿದೆ. ಆದರೆ, ಕಾರ್ಯದರ್ಶಿಯಾಗಲಿ, ವಿಸ್ತರಣಾಧಿಕಾರಿಯಾಗಲಿ ಯಾವುದೇ ದಾಖಲಾತಿ ನೀಡುತ್ತಿಲ್ಲ. ಕಾರ್ಯದರ್ಶಿ ಅವ್ಯವಹಾರ ಮಾಡಿರುವ ಹಿನ್ನೆಲೆ ಈಗಾಗಲ್ಲೇ ಸಂಘದ ಆಡಳಿತ ಮಂಡಳಿಯವರು ತಾತ್ಕಾಲಿಕವಾಗಿ ಬೇರೆ ಕಾರ್ಯದರ್ಶಿಯನ್ನು ಆಯ್ಕೆ ಮಾಡಿದ್ದು, ಆಯ್ಕೆಯಂತೆ ಒಕ್ಕೂಟವು ಸೂಕ್ತ ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿದರು.

ಪ್ರತಿಭಟನೆಗೂ ಮುನ್ನ ಸ್ಥಳಕ್ಕೆ ಬೆಟ್ಟದಪುರ ಠಾಣೆಯ ಎಸ್ಐಗಳಾದ ಅಜಯ್ ಕುಮಾರ್, ಸ್ವಾಮಿನಾಯಕ್, ಬೈಲಕುಪ್ಪೆ ಠಾಣೆಯ ರವಿಕುಮಾರ್, ಸಿಬ್ಬಂದಿ ಆಗಮಿಸಿದರು. ಪಿಎಸ್ಐ ಅಜಯ್ ಕುಮಾರ್ ಹಾಗೂ ಸದಸ್ಯರು, ಗ್ರಾಮಸ್ಥರ ನಡುವೆ ಚರ್ಚೆ ನಡೆಯಿತು.

ಸಂಘದ ಅಧ್ಯಕ್ಷೆ ಪ್ರತಿಭಾ, ಉಪಾಧ್ಯಕ್ಷೆ ಆರತಿ, ನಿರ್ದೇಶಕರಾದ ಶಿವಮ್ಮ, ಜಯಮ್ಮ, ಭಾರತಿ, ಪಾರ್ವತಮ್ಮ, ಮುಖಂಡರಾದ ಕುಮಾರಶೆಟ್ಟಿ, ಕೆ.ಮಹದೇವ್, ಮಂಜುನಾಥ್, ಪ್ರಭಾಕರ, ಕೃಷ್ಣಮೂರ್ತಿ, ಪ್ರಕಾಶ್, ಮಧು, ಶೇಖರ್, ಸಂತೋಷ್, ರಾಜಶೇಖರ್, ಯೋಗೇಶ್ ಸೇರಿದಂತೆ ಸದಸ್ಯರು, ನೂರಾರು ಗ್ರಾಮಸ್ಥರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.