ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳವಳ್ಳಿ: ಲಾಟರಿ ಮೂಲಕ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

Published 8 ಆಗಸ್ಟ್ 2023, 13:18 IST
Last Updated 8 ಆಗಸ್ಟ್ 2023, 13:18 IST
ಅಕ್ಷರ ಗಾತ್ರ

ಮಳವಳ್ಳಿ: ತಾಲ್ಲೂಕಿನ ನೆಲಮಾಕನಹಳ್ಳಿ ಗ್ರಾಮ ಪಂಚಾಯಿತಿಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮಂಗಳವಾರ ನಡೆದ ಚುನಾವಣೆಯಲ್ಲಿ ಲಾಟರಿ ಮೂಲಕ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಎನ್.ಎಸ್.ಸಿದ್ದಯ್ಯ ಹಾಗೂ ಉಪಾಧ್ಯಕ್ಷರಾಗಿ ಮಂಗಳಮ್ಮ ಚುನಾಯಿತರಾದರು.

16 ಸದಸ್ಯ ಬಲದ ಪಂಚಾಯಿತಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಎನ್.ಎಸ್.ಸಿದ್ದಯ್ಯ ಮತ್ತು ಶಿವರಾಮು ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮಂಗಳಮ್ಮ ಮತ್ತು ಶಕುಂತಲಾ ನಾಮಪತ್ರ ಸಲ್ಲಿಸಿದರು. ನಂತರ ನಡೆದ ಗೌಪ್ಯ ಮತದಾತದಲ್ಲಿ ಎನ್.ಎಸ್.ಸಿದ್ದಯ್ಯ ಮತ್ತು ಶಿವರಾಮು ಹಾಗೂ ಮಂಗಳಮ್ಮ ಮತ್ತು ತಲಾ 8 ಮತ ಪಡೆದುಕೊಂಡರು. ಚುನಾವಣಾಧಿಕಾರಿಯಾಗಿದ್ದ ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ಸ್ವಾಮಿ ವಿವೇಕಾ ನಂದ ಅವರು ಲಾಟರಿ ಆಯ್ಕೆ ಪ್ರಕ್ರಿಯೆ ನಡೆಸಿದರು. ಲಾಟರಿಯಲ್ಲಿ ಅದೃಷ್ಟ ಎನ್.ಎಸ್.ಸಿದ್ದಯ್ಯ ಹಾಗೂ ಮಂಗಳಮ್ಮ ಅವರಿಗೆ ಒಲಿಯಿತು.

ಸದಸ್ಯರಾದ ಸಿದ್ದರಾಜು, ರಾಮದಾಸು, ಮನೋಮಣಿ, ವರಲಕ್ಷ್ಮಿ, ಭಾಗ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT