ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀರಂಗಪಟ್ಟಣ: ‘ಮಸೀದಿ ಸ್ಥಳದಲ್ಲೇ ಮಂದಿರ ನಿರ್ಮಾಣ’

ಶ್ರೀರಂಗಪಟ್ಟಣದಲ್ಲಿ ಹನುಮ ಮಾಲಾಧಾರಿಗಳ ಸಮಾವೇಶ l ಹಿಂದೂ ಜಾಗರಣಾ ವೇದಿಕೆಯ ಉಲ್ಲಾಸ್‌ ಹೇಳಿಕೆ
Last Updated 4 ಡಿಸೆಂಬರ್ 2022, 20:10 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ (ಮಂಡ್ಯ): ‘ಪಟ್ಟಣದಲ್ಲಿದ್ದ ಹನುಮಾನ್ ದೇಗುಲವನ್ನು ಒಡೆದು ಟಿಪ್ಪು ಸುಲ್ತಾನ್ ಮಸೀದಿ ಕಟ್ಟಿಸಿದ್ದು, ಅದೇ ಸ್ಥಳದಲ್ಲಿಯೇ ಮತ್ತೆ ಹನುಮ ಮಂದಿರ‌ ಕಟ್ಟುತ್ತೇವೆ’ ಎಂದು ಹಿಂದೂ ಜಾಗರಣಾ ವೇದಿಕೆಯ ದಕ್ಷಿಣ ಪ್ರಾಂತ ಕಾರ್ಯಕಾರಣಿ ಸದಸ್ಯ ಕೆ.ಟಿ.ಉಲ್ಲಾಸ್ ಹೇಳಿದರು.

ಪಟ್ಟಣದ ಶ್ರೀರಂಗನಾಥ ಸ್ವಾಮಿ ದೇವಾಲಯ‌ದ ಮೈದಾನದಲ್ಲಿ ಭಾನು ವಾರ‌ ಸಂಕೀರ್ತನಾ ಯಾತ್ರೆ ಅಂಗವಾಗಿ ನಡೆದ ಹನುಮ ಮಾಲಾಧಾರಿಗಳ ಸಮಾವೇಶದಲ್ಲಿ ಮಾತನಾಡಿದರು.

‘ಹನುಮ ಮಂದಿರ ನಿರ್ಮಿಸಲು ನ್ಯಾಯಾಲಯದಲ್ಲಿ ಹೋರಾಟ ನಡೆಸಲಿ ದ್ದೇವೆ. ಅಯೋಧ್ಯೆಯಂತೆ ಇಲ್ಲಿಯೂ ನಮ್ಮ ಹೋರಾಟಕ್ಕೆ ಜಯ ಸಿಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಮೇಲುಕೋಟೆ, ಕೊಡಗು ಮೊದಲಾದ ಕಡೆ ಹಿಂದೂಗಳಿಗೆ ಟಿಪ್ಪು ಕಿರುಕುಳ ನೀಡಿದ್ದಾನೆ. ಒಡೆಯರ್ ಕುಟುಂಬಕ್ಕೂ ಹಿಂಸೆ ನೀಡಿದ್ದಕ್ಕೆ ದಾಖಲೆ ಗಳಿವೆ. ಕನ್ನಡ ಕಡೆಗಣಿಸಿ ಪರ್ಷಿಯನ್ ಭಾಷೆಯನ್ನು ಆಡಳಿತ‌ ಭಾಷೆಯಾಗಿ ಹೇರಿದ್ದು ಸುಳ್ಳಾ’ ಎಂದು ಪ್ರಶ್ನಿಸಿದರು.

ಸಂಕೀರ್ತನಾ ಯಾತ್ರೆಯಲ್ಲಿ ಸಹ ಸ್ರಾರು ಮಂದಿ ಪಾಲ್ಗೊಂಡಿದ್ದರು. ಸಮೀಪದ ಗಂಜಾಂ ಬಳಿ, ಕಾವೇರಿ ನದಿ ತೀರದಲ್ಲಿರುವ ಆಂಜನೇಯಸ್ವಾಮಿ ದೇವಾಲಯದಿಂದ ಯಾತ್ರೆ ಆರಂಭ ವಾಯಿತು. ಜ್ಯೋತಿಷಿ ಭಾನುಪ್ರಕಾಶ್ ಶರ್ಮಾ ಯಾತ್ರೆಗೆ ಚಾಲನೆ ನೀಡಿದರು.

ಶ್ರೀರಂಗನಾಥಸ್ವಾಮಿ‌ ದೇವಾಲಯ ತಲುಪುವ ಮೊದಲು ಮಾಲಾಧಾರಿಗಳು ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಮಾನವ ಸರಪಳಿ ರಚಿಸಿದರು. ಟಿಪ್ಪು ಮಸೀದಿ (ಮಸ್ಜಿದ್-ಇ-ಅಲಾ) ಬಳಿ ಯಾತ್ರೆ ಬಂದಾಗ ಘೋಷಣೆ ಕೂಗಿದರು.

ದೊ.ಕೇಶವಮೂರ್ತಿ, ಲೋಹಿತ ರಾಜೇ ಅರಸ್, ಮಾರ್ಕಂಡೇಯ, ಎಸ್.ಕೆ.ಚಂದನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT